ಪಾಕಿಸ್ತಾನದ ವಿರುದ್ಧ ಗೆದ್ದರು ಕೂಡ ಭಾರತಕ್ಕೆ ಈ ಆಟಗಾರನೇ ದೊಡ್ಡ ಸಮಸ್ಯೆ ಎಂದು ಹೇಳಿದ ಸುನೀಲ್ ಗವಾಸ್ಕರ್. ನಿಮಗೂ ಹೌದೆನ್ನಿಸಬಹುದು.
icc ಟಿ-೨೦ ವಿಶ್ವಕಪ್ ಶುರುವಾಗಿ ಭಾರತ ತನ್ನ ಮೊದಲ ಪಂದ್ಯದಲ್ಲಿಯೇ ಪಾಕಿಸ್ತಾನದ ವಿರುದ್ಧ ಗೆದ್ದು ದೇಶವಾಸಿಗಳಿಗೆ ದೀಪಾವಳಿ ಉಡುಗೊರೆ ಕೊಟ್ಟಿದೆ. ವಿರಾಟ್ ಕೊಹ್ಲಿ ತನ್ನ ಫಾರ್ಮ್ ಗೆ ಮರಳಿದ್ದು ಎಲ್ಲರಿಗು ಸಂತೋಷವಾಗಿದ್ದು ಅದಲ್ಲದೆ ಮೊದಲ ಪಂದ್ಯ ಗೆಲ್ಲಿಸಿಕೊಟ್ಟ ಸಂತೋಷ ಕೂಡ ದೇಶದೆಲ್ಲೆಡೆ ಹರಡಿದೆ. ಭಾರತ ನಾಲ್ಕು ವಿಕೆಟ್ ಇಂದ ಗೆದ್ದರು ಕೂಡ ಬಹಳ ಕಷ್ಟ ಇತ್ತು ಈ ಪಂದ್ಯ ಗೆಲ್ಲುವುದು. ಭಾರತದ ಎಲ್ಲ ಆರಂಭಿಕ ಆಟಗಾರರು ಕಳಪೆ ಪ್ರದರ್ಶನ ನೀಡಿದ್ದು ಭಾರತಕ್ಕೆ ದೊಡ್ಡ ತಲೆನೋವಾಗಿದೆ.
ಅಲ್ಲದೆ ಭಾರತ ತಂಡದ ನಾಯಕ ಎನಿಸಿರುವ ರೋಹಿತ್ ಶರ್ಮ ಪ್ರದರ್ಶನ ಎಲ್ಲರಿಗು ತಲೆನೋವಾಗಿದೆ. ಅದೇ ರೀತಿ ಸುನೀಲ್ ಗವಾಸ್ಕರ್ ಕೂಡ ಇದೆ ಮಾತನ್ನು ಹೇಳಿದ್ದಾರೆ. ಆರಂಭಿಕ ಆಟಗಾರರು ಕೆ ಎಲ್ ರಾಹುಲ್ ಹಾಗು ರೋಹಿತ್ ಶರ್ಮ ತಮ್ಮ ಫಾರ್ಮ್ ಅಲ್ಲಿ ಇರದೇ ಇರುವುದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತದೆ. ಇಬ್ಬರು ಕೂಡ ಕೇವಲ ನಾಲ್ಕು ರನ್ ಗಳಿಸಿ ಔಟ್ ಆಗಿದ್ದು ಭಾರತ ಪಾಕಿಸ್ತಾನದ ಎದುರು ಪ್ರಯಾಸದ ಗೆಲ್ಲುವು ಪಡೆಯಲು ಕಾರಣ ಎಂದು ಗವಾಸ್ಕರ್ ಹೇಳಿದ್ದಾರೆ.

ನೆದರ್ಲ್ಯಾಂಡ್ ವಿರುದ್ಧ ಎರಡನೇ ಪಂದ್ಯ ಆಡಲಿರುವ ಭಾರತ ಈಗಾಗಲೇ ತಯಾರಿ ನಡೆಸುತ್ತಿದೆ. ಹಾಗೇನೇ ಪಂದ್ಯದ ನಿಮಿತ್ತ ಮಾತಾಡಿದ ಸುನೀಲ್ ಗವಾಸ್ಕರ್ ರೋಹಿತ್ ಶರ್ಮ ಫಾರ್ಮ್ ಅಲ್ಲಿ ಇಲ್ಲದೆ ಇರುವುದು ತಂಡಕ್ಕೆ ಸಮಸ್ಯೆ. ಕೂಡಲೇ ಫಾರ್ಮ್ ಗೆ ಮರಳ ಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಅವರು ರನ್ ಗಳಿಸುತ್ತಿಲ್ಲ. ಇವರು ಬೇಗ ಔಟ್ ಆದರೆ ಉಳಿದ ಮಾಧ್ಯಮ ಕ್ರಮಾಂಕ ಆಟಗಾರರಿಗೆ ಸಮಸ್ಯೆ ಆಗುತ್ತದೆ. ಅವರು ಪ್ರೆಷರ್ ಅಲ್ಲಿ ಆಡಬೇಕಾಗುತ್ತದೆ. ಉತ್ತಮ ರನ್ ಕಲೆ ಹಾಕಿದರೆ ಮುಂದಿನ ವಿಕೆಟ್ ಗೆ ಬರುವ ಆಟಗಾರರು ಬೌಂಡರಿ ಮಾಡುವತ್ತ ಯೋಚನೆ ಮಾಡಬಹುದು ಎಂದು ಗವಾಸ್ಕರ್ ಅಭಿಪ್ರಾಯ ಪಟ್ಟಿದ್ದಾರೆ.