ಮಾರುಕಟ್ಟೆಗೆ ಬರಲಿದೆಯಾ ಹೊಸ ಎಲೆಕ್ಟ್ರಿಕ್ Hero Motocorp ಸ್ಪ್ಲೆಂಡರ್ ಬೈಕ್? ಇದು ಭವಿಷ್ಯದ ವಾಹನ ಎಂದರೆ ತಪ್ಪಾಗಲಾರದು.
ಪ್ರಸ್ತುತ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದೆ. ಅದರಲ್ಲೂ ದ್ವಿಚಕ್ರ ವಾಹನದಲ್ಲಂತೂ ತೀವ್ರ ಬೇಡಿಕೆ ಇದೆ. ಅದೇ ರೀತಿ ಇದೀಗ ಬೇರೆ ಬೇರೆ ಕಂಪನಿಗಳ ಹೆಚ್ಚಿನ ವೆರೈಟಿ ಟೂ ವೀಲರ್ ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದೀಗ ಹೀರೋ ಮೋಟೊಕಾರ್ಪ್ ತನ್ನ ಅತ್ಯಂತ ಜನಪ್ರಿಯ ಬೈಕ್ ಗಳಲ್ಲಿ ಒಂದಾದ ಸ್ಪ್ಲೆಂಡರ್ ಬೈಕ್ ನ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ ತರಲಿದೆ. ಈ ವರದಿ ಇದೀಗ ದೇಶದಾದ್ಯಂತ ಸದ್ದು ಮಾಡುತ್ತಿದೆ. ಇದರ ಮೈಲೇಜ್ 240 KM. ಎಂದು ಹೇಳುತ್ತಿದ್ದಾರೆ.
ಅಂದಹಾಗೆ ಹೀರೋ ಮೋಟೊಕಾರ್ಪ್ ಇದಕ್ಕಿಂತ ಮೊದಲೇ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಕಂಪನಿ ತನ್ನ ಮೊದಲ ಎಲೆಕ್ಟ್ರಿಕ್ ವಾಹನ Vida ಎನ್ನುವ ಬ್ರಾಂಡ್ ಹೆಸರಲ್ಲಿ ಬಿಡುಗಡೆ ಮಾಡಿದೆ. ಇದೀಗ ಹೀರೋ ಕಂಪನಿ ಅತಿ ಹೆಚ್ಚು ಮಾರಾಟ ಮಾಡಿರುವ ಹಾಗೇನೇ ಭಾರತದಲ್ಲಿ ಅತಿ ಹೆಚ್ಚು ಖ್ಯಾತಿ ಪಡೆದಿರುವ ಸ್ಪ್ಲೆಂಡರ್ ಬೈಕ್ ನ ಎಲೆಕ್ಟ್ರಿಕ್ ಆವೃತ್ತಿಯನ್ನು ಕೂಡ ತಯಾರಿಸಲು ಹೊರಟಿದೆ.

ಈ ಬಗ್ಗೆ ಹೀರೋ ಕಂಪನಿ ಅಧಿಕೃತವಾಗಿ ಏನನ್ನು ಹೇಳದಿದ್ದರೂ ಕೂಡ ಮಾರುಕಟ್ಟೆಯಲ್ಲಿ ಇದರ ಬಗ್ಗೆ ಸದ್ದು ಜೋರಾಗಿಯೇ ಇದೆ. ಅದಲ್ಲದೆ ವಿನಯ್ ರಾಜ್ ಸೋಮಶೇಖರ್ ಎನ್ನುವ ಕಲಾವಿದ ಡಿಜಿಟಲ್ ಇಮೇಜಿಂಗ್ ಚಿತ್ರವನ್ನು ರಚಿಸಿದ್ದಾರೆ. ಇದು ನಿರ್ಮಾಣಕ್ಕೆ ಸಿದ್ದ ರೀತಿಯಲ್ಲಿ ಕಾಣುತ್ತಿದೆ. ಇದು ಸ್ಪ್ಲೆಂಡರ್ ಮಾದರಿಯಲ್ಲಿ ಮೇಲ್ನೋಟಕ್ಕೆ ಕಾಣುವುದಾದರೂ ಕೂಡ ಕೆಲವು ಸ್ವಲ್ಪ ಬದಲಾವಣೆ ಮಾಡಲಾಗಿದೆ. ಬ್ಯಾಟರಿ ಪ್ಯಾಕ್ ಸ್ಥಳವನ್ನು ಇಂಧನ ಟ್ಯಾಂಕ್ ನ ಕೆಳಗಡೆ ನೀಡಲಾಗಿದೆ. ಎಲೆಕ್ಟ್ರಿಕ್ ಪವರ್ ಟ್ರೇನಿಗಾಗಿ ಡುಯಲ್ ಕ್ರೇಡೆಲ್ ಛಾಸಿಸ್ ಅನ್ನು ಸಹ ಮಾರ್ಪಡಿಸಲಾಗಿದೆ.
ಮೋಟಾರ್ ನಿಯಂತ್ರಕವನ್ನು ಸೈಡ್ ಬಾಕ್ಸ್ ಅಲ್ಲಿ ಇರಿಸಲಾಗಿದೆ, ಅದರ ಕೆಳಗಡೆ ಮೋಟಾರ್ ಇದೆ. ಮುಚ್ಚಿದ ಬೆಲ್ಟ್ ಡ್ರೈವ್ ಮೂಲಕ ಹಿಂದಿನ ಚಕ್ರಕ್ಕೆ ಸಂಪರ್ಕಿಸಲಾಗಿದೆ. ಮೋಟಾರ್ ಸೈಕಲ್ ನ EV ನಿರ್ದಿಷ್ಟ ಬ್ರಾಂಡಿಂಗ್ ಮತ್ತು ಹೆಡ್ಲಾಂಪ್ ಕೌಲ್, ಟೈಲ್ ಪ್ಯಾನೆಲ್ ಮತ್ತು ವೀಲ್ ರಿಮ್ ಗಳ ಮೇಲೆ ನೀಲಿ ಮುಖ್ಯ ಅಂಶವನ್ನು ಹೊಂದಿರುತ್ತದೆ. ಇದು ಎಲೆಕ್ಟ್ರಿಕ್ ವಾಹನದ ಅನುಭವವನ್ನು ನೀಡುತ್ತದೆ. ಈ ಎಲೆಕ್ಟ್ರಿಕ್ ವಾಹನವನ್ನು ಸ್ಟ್ಯಾಂಡರ್ಡ್, ಯುಟಿಲಿಟಿ+, ರೇಂಜ್+ ಮತ್ತು ರೇಂಜ್ ಮ್ಯಾಕ್ಸ್ ಸೇರಿದಂತೆ ಒಟ್ಟು ನಾಲ್ಕು ರೂಪಾಂತರಗಳಲ್ಲಿ ನೀಡಲು ಯೋಜನೆ ಹಾಕಲಾಗಿದೆ. ಇದು ಎಷ್ಟು ನಿಜ ಎನ್ನುವುದು ಕಂಪನಿ ಅದಿಕ್ರುತ ಮಾಹಿತಿ ಬರುವವರೆಗೆ ಕಾದು ನೋಡಬೇಕಾಗಿದೆ.