OTT News: ಓಟಿಟಿಯಲ್ಲೂ ಮುಗ್ಗರಿಸಿದ ಬಾಲಿವುಡ್. ಕಾಂತಾರ ಹಾಗು ಕೋರಿಯನ್ ಸೀರೀಸ್ ಗಳಿಗೆ ಹೆಚ್ಚಿನ ಒಲವು.
ಬಾಲಿವುಡ್ ಭಾರತದ ಅತ್ಯಂತ ಶ್ರೀಮಂತ ಸಿನೆಮಾ ಇಂಡಸ್ಟ್ರಿ ಗಳಲ್ಲಿ ಒಂದಾಗಿದ್ದು. ದೇಶದಾದ್ಯಂತ ಅಧಿಪತ್ಯ ಸಾಧಿಸಿತ್ತು. ದಿನ ಕಳೆದಂತೆ ಕಳೆದ ೪-೫ ವರ್ಷಗಳಿಂದ ಬಾಲಿವುಡ್ ಬಾಕ್ಸ್ ಆಫೀಸ್ ಅಲ್ಲಿ ಮಕಾಡೆ ಮಲಗುತ್ತಾ ಬಂದಿದೆ. ಯಾವುದೇ ದೊಡ್ಡ ಸ್ಟಾರ್ ನಟರಾಗಲಿ ಹಾಗೇನೇ ಎಷ್ಟೇ ಒಳ್ಳೆಯ ಕಥೆ ಇರಲಿ ಒಂದು ಕೋಮಿನವರಿಗೆ ಯಾವಾಗಲು ತಮಾಷೆ ಮಾಡುತ್ತ ಬಂದಿದ್ದರು. ಇದೆ ಕಾರಣಕ್ಕೆ ದೇಶದ ಜನ ಹಿಂದಿ ಸಿನೆಮಾ ನೋಡುವುದನ್ನೇ ಬಿಟ್ಟಿದ್ದರು.
ಬಾಲಿವುಡ್ ಥಿಯೇಟರ್ ಗಳಲ್ಲಿ ಹೆಚಿನು ಗಳಿಸದೆ ಹೋದರು ಕೂಡ ಓಟಿಟಿ ಯಲ್ಲಿ ಉತ್ತಮ ಕಮಾಯಿ ಗಳಿಸುತ್ತದೆ ಎನ್ನುವ ವಿಶ್ವಾಸ ಈ ಬಾಲಿವುಡ್ ಮಂದಿಗೆ ಇನ್ನು ಇದೆ. ಓಟಿಟಿ ಗಳಿಗೆ ಉತ್ತಮ ಮೊತ್ತಕ್ಕೆ ಮಾರಾಟ ಕೂಡ ಆಗುತ್ತಿತ್ತು ಹಿಂದಿ ಸಿನೆಮಾಗಳು. ಆದರೆ ಇದೀಗ ಅದಕ್ಕೂ ಕತ್ತರಿ ಬೀಳುವ ಸಾಧ್ಯತೆ ಇದೆ ಎನ್ನುವುದು ನೆಟ್ ಫ್ಲಿಕ್ಸ್ ನ ಭಾರತದ ಉಪಾದ್ಯಕ್ಷೆಯ ಮಾತುಗಳಿಂದ ಗೊತ್ತಾಗುತ್ತಿದೆ. ಅಷ್ಟಕ್ಕೂ ಅವರು ಏನು ಹೇಳಿದ್ದಾರೆ?

ನೆಟ್ ಫ್ಲಿಕ್ಸ್ ಅಲ್ಲಿ ಭಾರತದ ಬಾಲಿವುಡ್ ಗೆ ಅತ್ಯಂತ ಕಡಿಮೆ ವೀಕ್ಷಣೆ ಹೊಂದಿದೆ. ಹಾಗೇನೇ ಜನರು ಭಾರತದಲ್ಲಿ ದಕ್ಷಿಣ ಭಾರತದ ಸಿನೆಮಾಗಳಿಗೆ ಹೆಚ್ಚಿನ ಬೇಡಿಕೆ ಹೊಂದಿದ್ದಾರೆ ಎಂದಿದ್ದಾರೆ ಮೋನಿಕಾ ಶೇರ್ಗಿಲ್. ಹಾಗೇನೇ ಕಾಂತಾರ ಹಿಂದಿ ಭಾಷೆಯ ಸಿನೆಮಾ ಈಗಾಗಲೇ ನೆಟ್ ಫ್ಲಿಕ್ಸ್ ಅಲ್ಲಿ ಬಿಡುಗಡೆ ಆಗಿದ್ದು ಒಟ್ಟಾರೆ 4 ಮಿಲಿಯಾನ್ ಅಂದರೆ 40 ಲಕ್ಷ ವಾಚ್ ಹೌರ ಪಡೆದಿದೆ. ಇನ್ನು ಕೂಡ ಟಾಪ್ 10 ಅಲ್ಲಿ ಸ್ಥಾನ ಪಡೆದಿದೆ ಎಂದಿದ್ದಾರೆ.
ಹಾಗೇನೇ ಇನ್ನು ಮುಖ್ಯ ವಿಷಯ ಏನೆಂದರೆ ಭಾರತದಲ್ಲಿ ಅದರಲ್ಲೂ ನೆಟ್ ಫ್ಲಿಕ್ಸ್ ಅಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆಯುತ್ತಿರುವ ವೆಬ್ ಸೀರೀಸ್ ಎಂದರೆ ಕೋರಿಯನ್ ಡ್ರಾಮಾ ಗಳು. ಇದೆ ಕಾರಣಕ್ಕೆ ಎಲ್ಲ ಓಟಿಟಿ ಗಳಲ್ಲೂ ಕೂಡ ಕೋರಿಯನ್ ಡ್ರಮಗಳು ಹಿಂದಿ ಹಾಗು ಇಂಗ್ಲಿಷ್ ಭಾಷೆಯಲ್ಲಿ ಅನುವಾದ ಆಗುತ್ತಿವೆ. ಅಲ್ಲದೆ 2022 ರಲ್ಲಿ ಬಿಡುಗಡೆ ಆದಂತಹ ಅತಿ ಹೆಚ್ಚು ಕೋರಿಯನ್ ಡ್ರಾಮಾಗಳು ಭಾರತದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದಿದೆ ಎಂದು ಮೋನಿಕಾ ಶೇರ್ಗಿಲ್ ಹೇಳಿದ್ದಾರೆ.