ಪಾಕಿಸ್ತಾನದ ಮೇಲೆ 18 ಬಿಲಿಯನ್ ಫೈನ್ ಹಾಕಿದ ಇರಾನ್. ಪಾಕ್ ಗೆ ಬೀಳುತ್ತಿದೆ ಎಲ್ಲ ಕಡೆಯಿಂದ ಪೆಟ್ಟು.

74

ಇರಾನ್ ಪಾಕಿಸ್ತಾನಕ್ಕೆ ಮಾರ್ಚ್ ೨೦೨೪ ರ ಒಳಗಡೆ ಇರಾನ್ ಪಾಕಿಸ್ತಾನ ಗ್ಯಾಸ್ ಪೈಪ್ಲೈನ್ ಪೂರ್ಣಗೊಳಿಸುವಂತೆ ತಾಕೀತು ಮಾಡಿದೆ. ಇದು ಆಗದೆ ಹೋದರೆ 18 ಬಿಲಿಯನ್ ನಷ್ಟು ಪೆನಾಲ್ಟಿ ಕಟ್ಟುವಂತೆ ಗಡುವು ನೀಡಿದೆ.

ಇರಾನ್ ನ್ಯಾಚುರಲ್ ಗ್ಯಾಸ್ ಹೊಂದಿರುವ ಸಂಪನ್ನ ದೇಶ. ಭಾರತ ಕೂಡ ಮೊದಲು ಇರಾನ್ ಇಂದ ಪೆಟ್ರೋಲಿಯಂ ಉತ್ಪನ್ನ ಖರೀದಿ ಮಾಡುತಿತ್ತು. ಇದು ಭಾರತಕ್ಕೆ ಸ್ವಲ್ಪ ಮಟ್ಟದಲ್ಲಿ ಅಗ್ಗ ಕೂಡ ಆಗುತಿತ್ತು. ಆದರೆ ಅಮೇರಿಕಾದ ಸ್ಯಾಂಕ್ಷನ್ ನಂತರ ಭಾರತ ಇರಾನ್ ನಿಂದ ಕಚ್ಚಾ ತೈಲ ಖರೀದಿಗೆ ಬ್ರೇಕ್ ಹಾಕಿದೆ. ಇದು ಪಾಕಿಸ್ತಾನ ಕೂಡ ಖರೀದಿ ನಿಲ್ಲಿಸಿದೆ.

ಇರಾನ್ ಪಾಕಿಸ್ತಾನ ಪೈಪ್ಲೈನ್ ಪೂರ್ಣಗೊಂಡರೆ, ಇರಾನ್ ಭಾರತಕ್ಕೂ ಗ್ಯಾಸ್ ಪೂರೈಕೆ ಮಾಡುವ ಯೋಜನೆ ಹಾಕಿಕೊಂಡಿತ್ತು. ಒಟ್ಟಿಗೆ ಎರಡು ದೊಡ್ಡ ದೇಶಗಳು ಇರಾನ್ ಗೆ ಸಿಕ್ಕಿರುತ್ತಿತ್ತು. ಆದರೆ ಅಮೇರಿಕಾದ ಮೇಲೆ ಸಂಪೂರ್ಣವಾಗಿ ಅವಲಂಬಿಸಿರುವ ಪಾಕಿಸ್ತಾನ ತಾನೇ ಮಾಡಿಕೊಂಡ ಒಪ್ಪಂದವನ್ನು ಪೂರ್ಣಗೊಳಿಸಲು ಹಿಂದೇಟು ಹಾಕುತ್ತಿದೆ. ಇದೀಗ ಇರಾನ್ ತನ್ನ ಕಡೆಯ ಪೈಪ್ ಲೈನ್ ಪೂರ್ಣಗೊಳಿಸಿದ್ದು, ಪಾಕಿಸ್ತಾನದ ಕಡೆಯ ಪೈಪ್ ಲೈನ್ ಇನ್ನು ಪೂರ್ಣವಾಗಿಲ್ಲ. ಇದನ್ನ ಪೂರ್ಣಗೊಳಿಸಲು ಗಡುವು ನೀಡಿದ್ದು ಇಲ್ಲವಾದರೆ ನಷ್ಟ ತುಂಬಿಕೊಡಬೇಕೆಂದು ಬೆದರಿಕೆ ಹಾಕಿದೆ.

ವಿದೇಶಿ ವಿನಮಯನೆ ಇಲ್ಲದ ಪಾಕಿಸ್ತಾನ ಈ ೧೮ ಬಿಲಿಯನ್ ಎಲ್ಲಿಂದ ಕೊಡುತ್ತದೆ ಎಂದು ನೀವು ಯೋಚನೆ ಮಾಡುತ್ತಿರಬಹುದು. ಆದರೆ ಇರಾನ್ ಪಾಕಿಸ್ತಾನದ ವಿದೇಶಿ ನೆಲದಲ್ಲಿ ಯಾವುದೇ ಅಸ್ತಿ ಮಾಡಿಟ್ಟಿದ್ದರೆ ಅದನ್ನು ತಾನು ಪಡೆದುಕೊಳ್ಳಬಹುದಾಗಿದೆ. ಇದು ಪೂರ್ಣ 18 ಬಿಲಿಯನ್ ನಷ್ಟ ಬಾರಿಸದಿದ್ದರು ಸ್ವಲ್ಪ ಮಟ್ಟಿಗಾದರೂ ಹಣ ಪಡೆದುಕೊಳ್ಳಬಹುದು. ಈಗಾಗಲೇ ಆರ್ಥಿಕವಾಗಿ ಬಿದ್ದುಹೋಗಿರುವ ಪಾಕಿಸ್ತಾನಕ್ಕೆ ಇರಾನ್ ಮತ್ತೊಂದು ಪೆಟ್ಟು ಕೊಟ್ಟಿದ್ದು, ಸುಧಾರಿಸಿಕೊಳ್ಳುವುದಕ್ಕೂ ಸಮಯ ಇಲ್ಲದಂತಾಗಿದೆ.

Leave A Reply

Your email address will not be published.