ಫೋನ್ ಗಳ ಕೆಳಗೆ ಈ ಸಣ್ಣ ರಂದ್ರ ಯಾಕೆ ಮಾಡಲಾಗಿದೆ? ಇದರ ಕೆಲಸ ಏನೆಂಬುದು ತಿಳಿದರೆ ನಿಮಗೂ ಆಶ್ಚರ್ಯವಾಗುತ್ತದೆ.
ಸ್ಮಾರ್ಟ್ ಫೋನ್ ಇದೀಗ ಎಲ್ಲರ ಬಳಿಯೂ ಇರುವಂತಹ ಸಂವಹನ ಸಾಧನ. ಪೂರ್ತಿಯಾಗಿ ಡಿಜಿಟಲ್ ಇಂಡಿಯಾ ಆಗುವತ್ತ ಭಾರತ ಸಾಗುತ್ತಿದೆ. ಈ ಫೋನ್ ಗಳಲ್ಲಿ, ಆಡಿಯೋ ಜಾಕ್, ಸಿಮ್ ಟ್ರೇ, ಸ್ಪೀಕರ್ ಗ್ರಿಲ್ ನಂತಹ ಹಲವಾರು ವಿನಶ್ಯಗಳ ಅಂಶವಿದೆ. ಆದರೆ ಇದರ ಜೊತೆಗೇನೆ ಫೋನ್ ಕೆಳಗಡೆ ಒಂದು ಸಣ್ಣ ರಂದ್ರ ಕೂಡ ಇದೆ. ಚಿಕ್ಕದಾದರೂ ಕೂಡ ಇದರ ಕೆಲಸ ದೊಡ್ಡದಿದೆ. ಇದು ಯಾಕೆ ಇದೆ ಎನ್ನುವ ಕುತೂಹಲ ನಿಮಗೂ ಮೂಡಿರಬಹುದು.
ಇದನ್ನು ಯಾವುದಕ್ಕೆ ಬಳಸುತ್ತಾರೆ, ಎನ್ನುವುದು ನಿಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ. ಈ ಸಣ್ಣ ರಂದ್ರದ ಉದ್ದೇಶ ದೊಡ್ಡದಾಗಿದೆ. ಅದರ ಬಗ್ಗೆ ನಾವು ನಿಮಗೆ ತಿಳಿಸಲಿದ್ದೇವೆ. ಈ ರಂದ್ರ ಶಬ್ದ ರದ್ದತಿ ಮೈಕ್ರೋಫೋನ್ ಆಗಿದೆ. ಕರೆ ಮಾಡುವಾಗ ಇದು ಸಕ್ರಿಯವಾಗಿರುತ್ತದೆ. ನೀವು ಮಾತಾಡುವಾಗ ನಿಮ್ಮ ಮಾತುಗಳನ್ನು ಮುಂಭಾಗಕ್ಕೆ ತರುತ್ತದೆ. ನೀವು ಜನನಿಬಿಡ ಪ್ರದೇಶದಲ್ಲಿ ಮಾತಾಡುವಾಗ ಬಹಳ ಕಿರಿಕಿರಿ ಆಗುತ್ತದೆ. ನಿಮಗೆ ಫೋನ್ ಅಲ್ಲಿ ಮಾತಾಡಲು ಕೂಡ ಆಗಲ್ಲ. ಈ ಸಣ್ಣ ರಂದ್ರ ಇದಕ್ಕೆ ಸಹಕಾರಿ ಆಗಿದೆ. ಇದು ನೋಯಿಸ್ ಕ್ಯಾನ್ಸಲೇಷನ್ ರೀತಿ ಕೆಲಸ ಮಾಡುತ್ತದೆ.

ಈ ಸಣ್ಣ ರಂದ್ರ ಸಾಯದಿಂದ ನೀವು ಹೆಚ್ಚು ಜನರೊಡನೆ ಇದ್ದರು ಕೂಡ, ಇನ್ನೊಬ್ಬರಿಗೆ ಕೇಳುವಾಗ ನಿಮ್ಮ ಬಿಟ್ಟು ಬೇರೆಯವರ ದ್ವನಿ ಕೇಳಿಸುವುದಿಲ್ಲ. ವಾಹನಗಳ ಹಾರ್ನ್ ಆಗಲಿ, ನಿಮ್ಮನ್ನು ಬಿಟ್ಟು ಬೇರೆಯವರು ಮಾತಾಡುವುದಾಗಲಿ, ವಾದ್ಯ ಸೌಂಡ್ ಇದ್ದಾರೆ ಅವುಗಳು ಹೆಚ್ಚಾಗಿ ಕಾಲ್ ನಲ್ಲಿ ಮಾತಾಡುವಾಗ ಕೇಳಿಸಲ್ಲ. ಇದರಿಂದ ಕರೆ ಮಾಡುವಾಗ ಉತ್ತಮ ಅನುಭವ ನೀಡುತ್ತದೆ. ನೀವು ಮಾತಾಡುವುದು ನಿಮ್ಮ ಎದುರಿನವರಿಗೆ ಉತ್ತಮವಾಗಿ ಕೇಳುತ್ತದೆ.