Russia-Ukrain :ಭಾರತ ಹಾಗು ಮಯನ್ಮಾರ್ ನಿಂದ‌ ಮಾರಾಟ ಮಾಡಿದ ಶಸ್ತ್ರಾಸ್ತ್ರಗಳನ್ನು ವಾಪಸ್ಸು ಪಡೆಯುತ್ತಿರುವ ರಷ್ಯಾ?

308

ಉಕ್ರೇನ್ ಹಾಗು ರಷ್ಯಾದ (Ukrain and Rusiia) ನಡುವಣ ನಡೆಯುತ್ತಿರುವ ಯುದ್ದ ಒಂದು ವರ್ಷ ಕಳೆದರೂ ಕೂಡಾ ನಿಂತಿಲ್ಲ. ಯುದ್ದದಲ್ಲಿ ಯಾರೂ ಇದುವರೆಗೆ ಗೆಲುವು ಸಾದಿಸಿಲ್ಲವಾದರೂ ಕೂಡಾ ರಷ್ಯಾ ಉಕ್ರೇನಿಯನ್ ನ ಸಾಕಷ್ಟು ಭೂಭಾಗ ಕಬಳಿಸಿದೆ. ಇದನ್ನೆಲ್ಲಾ ನೋಡುವಾಗ ರಷ್ಯಾ ಕೊಂಚ ಮಟ್ಟಿಗೆ ಮೇಲುಗೈ ಸಾಧಿಸಿದೆ ಎಂದರೆ ತಪ್ಪಾಗಲಾರದು. ಆದರೆ ರಷ್ಯಾ ಗೆ ಇದೀಗ ದೊಡ್ಡ ತಲೆಬಿಸಿ ಶುರುವಾಗಿದೆ. ಇದಕ್ಕೆ ಕಾರಣ ಪಾಶ್ಚಿಮಾತ್ಯ ದೇಶಗಳು ಉಕ್ರೇನ್ ಗೆ ಪೂರೈಕೆ ಮಾಡುತ್ತಿರುವ ಶಸ್ತ್ರಾಸ್ತ್ರಗಳು.

ಹೌದು, ರಷ್ಯಾ ಇಲ್ಲಿಯವರೆಗೂ ಉಕ್ರೇನ್ ಗೆಲ್ಲಲು ಸಾಧ್ಯವಾಗದೇ ಇದ್ದದಕ್ಕೆ‌ ಕಾರಣ ಅಮೇರಿಕ ಹಾಗು ಯುರೋಪಿಯನ್ ದೇಶಗಳು ಉಕ್ರೇನ್ ಗೆ ನೀಡುತ್ತಿರುವ ಸಹಾಯ. ಇದರಿಂದ ಯುರೋಪಿಯನ್ ದೇಶ ಮಾತ್ರವಲ್ಲದೇ‌ ರಷ್ಯಾದ ಶಸ್ತ್ರಾಸ್ತ್ರಗಳು ಕೂಡ ಬರಿದಾಗುತ್ತಿದೆ. ಹಾಗೆನೆ ಇದೀಗ ಹೊಸ ವರದಿ ಒಂದು ಮಾಧ್ಯಮದಲ್ಲಿ ಹರಿದಾಡುತ್ತಿದೆ.

ಅದೇನೆಂದರೆ, ರಷ್ಯಾ ಭಾರತಕ್ಕೆ ಹಾಗೂ ಮಯನ್ಮಾರ್ (India and Myanmar) ಗೆ ಪೂರೈಕೆ ಮಾಡಿದ್ದ ಶಸ್ತ್ರಾಸ್ತ್ರ ಗಳನ್ನು ಹಿಂದೆ ವಾಪಸ್ಸು ಖರೀದಿ ಮಾಡಿತ್ತಿದೆ. ಮದ್ದುಗುಂಡುಗಳ ಕೊರತೆ ಎದುರಿಸುತ್ತಿರುವ ರಷ್ಯಾ ಕ್ಷಿಪಣಿ ಗಳ ಕೊರತೆ ಎದುರಿಸುತ್ತಿದೆ ಇದೇ ಕಾರಣಕ್ಕೆ ರಷ್ಯಾ ಭಾರತ ಹಾಗು ಮಯನ್ಮಾರ್ ಗಳಿಂದ ಒಮ್ಮೆ ಮಾರಾಟ ಮಾಡಿದ್ದ ಆಯುಧಗಳನ್ನು ಮರ ಖರೀದಿ ಮಾಡುತ್ತಿದೆ. ಈಗಾಗಲೇ ನಾವು ಹಣ ಕೊಟ್ಟು ಬೇಡಿಕೆ ಇಟ್ಟಿದ್ದ ಎಸ್-೫೦೦ ನ ಉಳಿದ ಬ್ಯಾಟರಿಗಳನ್ನು ರಷ್ಯಾ ಪೂರೈಕೆ ಮಾಡುವುದು ಕೂಡಾ ಸಂದೇಹವಾಗಿದೆ. ಇದರಿಂದ ಭಾರತಕ್ಕೆ ಬಹಳ ನಷ್ಟ ಆಗುತ್ತಿರುವುದು‌ ಅಲ್ಲದೇ ಮುಂದೆ ಶಸ್ತ್ರಾಸ್ತ್ರ ದ ಕೊರತೆ ಉಂಟಾಗಲೂ ಬಹುದು.

Leave A Reply

Your email address will not be published.