ಈ ರಾಜ್ಯದಲ್ಲಿ ಜನರು ಕೋಟಿ ದುಡಿದರು ಆದಾಯ ತೆರಿಗೆ ಕಟ್ಟುವ ಹಾಗಿಲ್ಲ. ಆದಾಯ ತೆರಿಗೆ ವಿನಾಯಿತಿ ಇರುವ ದೇಶದ ಏಕೈಕ ರಾಜ್ಯ ಇದೇ ನೋಡಿ.
ಭಾರತದ ಏಕೈಕ ಆಧಾಯ ತೆರಿಗೆ ವಿನಾಯಿತಿ (Income tax exemption) ಇರುವ ರಾಜ್ಯ ಸಿಕ್ಕಿಂ (Sikkim). ಈ ರಾಜ್ಯದಲ್ಲಿ ಜನರು ಕೋಟಿ ಗಟ್ಟಲೆ ದುಡಿದರು ಇಲ್ಲಿರುವ ಆರ್ಟಿಕಲ್ 371(F) ಕಾರಣಕ್ಕೆ ಈ ವಿನಾಯಿತಿ ಅನ್ನು ಜನರು ಅಲ್ಲಿ ಸಂಪೂರ್ಣ ಲಾಭ ಪಡೆಯುತ್ತಿದ್ದಾರೆ. ಅಷ್ಟಕ್ಕೂ ಈ ರಾಜ್ಯದ ಐತಿಹಾಸಿಕತೆ ಏನು ಈ ರಾಜ್ಯದಿಂದ ದೇಶಕ್ಕೆ ಸಿಗುವ ಆರ್ಥಿಕ ಲಾಭಗಳೇನು? ಇಲ್ಲಿದೆ ಮಾಹಿತಿ.
ಸಿಕ್ಕಿಂ ಭಾರತದ ಏಕೈಕ ರಾಜ್ಯ ಇಲ್ಲಿನ ನಿವಾಸಿಗಳು ಎಷ್ಟೇ ದುಡಿದರು ಆದಾಯ ತೆರಿಗೆ ಕಟ್ಟುವಹಾಗಿಲ್ಲ. ಈ ತೆರಿಗೆ ವಿನಾಯಿತಿ ಇವರಿಗೆ ಸಿಕ್ಕಿದ್ದು 1975 ರಲ್ಲಿ ಈ ರಾಜ್ಯ ಭಾರತದ ಜೊತೆ ವಿಲೀನವಾದಾಗ. ಆ ಸಮಯದಲ್ಲಿ ನಡೆದ ಒಪ್ಪಂದದ ಪ್ರಕಾರ ಜನರು ಇಂದಿಗೂ ಈ ಸೌಲಭ್ಯದ ಲಾಭ ಪಡೆಯುತ್ತಿದ್ದಾರೆ. ಈ ಲಾಭ ಇವರಿಗೆ ಮಾತ್ರ ಏಕೆ ಸಿಗುತ್ತಿದೆ?
![account service](https://online24po.com/wp-content/uploads/2025/01/accounting-services-1024x576.jpg)
ಭಾರತದ ಸಂವಿಧಾನದ (Indian Constitution) ಆರ್ಟಿಕಲ್ 371(F) ನಲ್ಲಿ ಆದಾಯ ತೆರಿಗೆ ಕಾನೂನಿನ ಸೆಕ್ಷನ್ 10(26AAA) ಅಡಿಯಲ್ಲಿ ಇಲ್ಲಿನ ಸಿಕ್ಕಿಮ್ ನಿವಾಸಿಗಳಿಗೆ ಆದಾಯ ಎಷ್ಟೇ ಹೆಚ್ಚಿದರೂ ಕೂಡ ಅಥವಾ ಬ್ಯಾಂಕ್ ಇಂದ ಬರುವ ಬಡ್ಡಿ ಹಣ ಎಷ್ಟೇ ಹೆಚ್ಚಿದರೂ ಕೂಡ ಇವರಿಗೆ ಆದಾಯ ತೆರಿಗೆ ವಿನಾಯಿತಿ ನೀಡುತ್ತದೆ. ಇಲ್ಲಿನ ಜನರಿಗೆ ಬ್ಯಾಂಕ್ ಗಳಲ್ಲಿ ಉಳಿತಾಯ ಮಾಡಲು ಹೆಚ್ಚಿನ ಪ್ರೋತ್ಸಾಹ ಮಾಡಲು ಹಾಗೇನೇ ಬೇರೆ ರಾಜ್ಯದ ಹಾಗೆ ಈ ರಾಜ್ಯದಲ್ಲಿ ಕೂಡ ಹೂಡಿಕೆ ಹೆಚ್ಚಿಸಲು ಸರಕಾರ ಈ ಕಾನೂನು ಮಾಡಿದೆ. ಈ ರಾಜ್ಯದಲ್ಲಿ ಟೂರಿಸಂ ಹಾಗು ಕ್ರಷಿ ಮೇಲೆ ಜನರ ಬದುಕು ಅವಲಂಬಿತವಾಗಿದೆ. ಹಾಗೇನೇ ಹೊರಗಿನಿಂದ ಹೆಚ್ಚಿನ ಹೂಡಿಕೆಗಾಗಿ ಈ ವಿನಾಯಿತಿ ನೀಡಲಾಗಿದೆ. ಇದೆ ಕಾರಣಕ್ಕೆ ಸಾಂವಿಧಾನಿಕ ಭದ್ರತೆ ಕಾರಣಕ್ಕೆ ಇನ್ನು ಈ ರಾಜ್ಯದಲ್ಲಿ ಆದಾಯ ತೆರಿಗೆ ವಿನಾಯಿತಿ ಮುಂದುವರೆಯುತ್ತಿದೆ.