Jobs

Govt Jobs1: ಉತ್ತರ ಕನ್ನಡ ಜಿಲ್ಲೆಯಲ್ಲಿ ಪೌರ ಕಾರ್ಮಿಕರ ನೇಮಕಕ್ಕೆ ಅರ್ಜಿ ಅಹ್ವಾನ. ಹೇಗೆ ಅರ್ಜಿ ಹಾಕುವುದು? ಇಲ್ಲಿದೆ ಮಾಹಿತಿ.

ಸರಕಾರಿ ಕೆಲಸ (Govt Jobs) ಹುಡುಕುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ. ಜಿಲ್ಲೆಯ 13 ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರ ಹುದ್ದೆಗಳನ್ನು ನೇಮಕ ಮಾಡಲು ಪೌರಾಡಳಿತ ನಿರ್ದೇಶನಾಲಯ ಹೊರಡಿಸಿದೆ. ನೇರ ನೇಮಕಾತಿಯಡಿಯಲ್ಲಿ ಅರ್ಹ ಅಭ್ಯರ್ಥಿಗಳಿಗೆ ಖಾಲಿ ಇರುವ ಹುದ್ದೆಗಳಿಗೆ ಭಾರ್ತಿ ಮಾಡಲಾಗುತ್ತದೆ.

ಈಗಾಗಲೇ ಒಟ್ಟಾರೆ 45 ಖಾಲಿ ಪೌರ ಕಾರ್ಮಿಕ ಹುದ್ದೆಗಳಿವೆ. ಈ ಖಾಲಿ ಹುದ್ದೆಗಳನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರ ಸಭೆ, ಶಿರಸಿ, ದಾಂಡೇಲಿ, ಭಟ್ಕಳ ಹಾಗು ಇನ್ನಿತರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಜಿಲ್ಲೆಯ ನಗರ ಸಭೆ, ಪುರಸಭೆ ಹಾಗು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಅಭ್ಯರ್ಥಿಗಳು ಅಲ್ಲೇ ಅರ್ಜಿಗಳನ್ನು ಸ್ವೀಕರಿಸಿ ಭಾರ್ತಿ ಮಾಡಿ ಅಲ್ಲೇ ಕಚೇರಿಗಳಲ್ಲಿ ಸಲ್ಲಿಸಬೇಕು. ಹಾಗೇನೇ ಮೀಸಲಾತಿ ಹಾಗು ಕರ್ತವ್ಯ ನಿರ್ವಹಿಸಿದ ದಾಖಲೆ ಇದ್ದಾರೆ ಅದನ್ನ ಅರ್ಜಿ ಜೊತೆ ಅಂಟಿಸಿ ಕೊಡಬೇಕಾಗುತ್ತದೆ.

ಸಾಮಾನ್ಯ ಅಭ್ಯರ್ಥಿಗಳಿಗೆ ಶುಲ್ಕ ರೂಪಾಯಿ 600, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 300 ರೂಪಾಯಿಗಳು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 50 ರೂಪಾಯಿಗಳು ಮತ್ತು ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕ ಪಾವತಿಸಿ ರಶೀದಿ ಪಡೆಯುವುದು ಕಡ್ಡಾಯವಾಗಿದೆ. ಅರ್ಜಿ ಸಲ್ಲಿಸಲು ಶುರುವಿನ ದಿನಾಂಕ 15 ನವೆಂಬರ್ 2024 ಹಾಗು ಕೊನೆಯ ದಿನಾಂಕ 16 ಡಿಸೆಂಬರ್ 2024.

ಇನ್ನು ವಿದ್ಯಾರ್ಹತೆ ಈ ಕೆಲಸಕ್ಕೆ ಅನ್ವಯಿಸುವುದಿಲ್ಲ, ವಯೋಮಿತಿ 55 ವರಷದೊಳಗಿರಬೇಕು. ಕನ್ನಡ ಭಾಷೆ ಮಾತಾಡಲು ಬರಬೇಕು. ವಯಸ್ಸನ್ನು ಅಭ್ಯರ್ಥಿಯ ಆಧಾರ್ ಕಾರ್ಡ್, ಮೀಸಲಾತಿ ಪತ್ರ ಅಥವಾ ಮತದಾನಂದ ಗುರ್ತಿನ ಚೀಟಿ ಮೂಲಕ ಗಣನೆಗೆ ತೆಗೆದುಕೊಳ್ಳಲಾಗುವುದು.

Leave a Reply

Your email address will not be published. Required fields are marked *