ESIC ನೇಮಕಾತಿ 2025: ESIC ಸ್ಪೆಷಲಿಸ್ಟ್ ಹುದ್ದೆಗೆ ಆಯ್ಕೆ ಆಗಲು ಸುವರ್ಣ ಅವಕಾಶ, ಸಂಬಳ ರೂ 1.31 ಲಕ್ಷ, ಅರ್ಜಿ ಪ್ರಕ್ರಿಯೆ ಮಾಹಿತಿ ಇಲ್ಲಿದೆ.
ESIC ನೇಮಕಾತಿ 2025: ಸರ್ಕಾರಿ ಉದ್ಯೋಗ ಹುಡುಕುತ್ತಾ ಇಲ್ಲಿ ಮತ್ತು ಅಲ್ಲಿ ಅಲೆದಾಡುವ ಅಭ್ಯರ್ಥಿಗಳಿಗೆ ಒಳ್ಳೆಯ ಸುದ್ದಿ. ಈ ಹುದ್ದೆಗಳಿಗೆ ಈ ಅರ್ಹತೆಯನ್ನು ಹೊಂದಿರುವ ಯಾರಾದರೂ ESIC ನ ಅಧಿಕೃತ ವೆಬ್‌ಸೈಟ್ esic.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ESIC Specialist ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾಂಭಗೊಂಡಿದೆ. ನೀವು ಜನವರಿ 22 ರ ಮೊದಲು ಅರ್ಜಿ ಸಲ್ಲಿಸಬಹುದು. ಕೆಳಗೆ ನೀಡಲಾದ ವಿಷಯಗಳನ್ನು ಗಮನವಿಟ್ಟು ಓದಿ.
ESIC ನೇಮಕಾತಿ 2025 ಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸಿನ ಮಿತಿಯು ಸಂದರ್ಶನದ ದಿನಾಂಕ ದವರೆಗೆ 67 ವರ್ಷಗಳನ್ನು ಮೀರಬಾರದು. ಹಾಗೇನೇ ಈ ವಯಸ್ಸಿನ ಮಿತಿಯಲ್ಲಿ ಸಡಿಲಿಕೆಯೂ ಇರುತ್ತದೆ.
Regular Specialist: ತಿಂಗಳಿಗೆ ರೂ. 1,31,067. Part time Specialitst: ತಿಂಗಳಿಗೆ ರೂ. 60,000 (ವಾರಕ್ಕೆ 16 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿದರೆ ಗಂಟೆಗೆ ರೂ. 800 ಹೆಚ್ಚುವರಿ).
ಅಭ್ಯರ್ಥಿಗಳನ್ನು ವಾಕ್-ಇನ್ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು, ಅಭ್ಯರ್ಥಿಗಳು ನಿಗದಿತ ದಿನಾಂಕ ಮತ್ತು ಸಮಯದಲ್ಲಿ ಸಂದರ್ಶನಕ್ಕೆ ಹಾಜರಾಗಲೇಬೇಕು.
ವಾಕ್-ಇನ್ ಸಂದರ್ಶನವು ಈ ಕೆಳಗಿನ ಸ್ಥಳ ಮತ್ತು ಸಮಯದಲ್ಲಿ ನಡೆಯಲಿದೆ.
ಸ್ಥಳ: ವೈದ್ಯಕೀಯ ಅಧೀಕ್ಷಕರ ಕಚೇರಿ, ಇಎಸ್ಐಸಿ ಆಸ್ಪತ್ರೆ, ವನ್ನಾರ್ಪೆಟ್ಟೈ, ತಿರುನಲ್ವೇಲಿ. ದಿನಾಂಕ: 22 ಜನವರಿ 2025. ಸಮಯ: ಬೆಳಿಗ್ಗೆ 9:00 ರಿಂದ ಬೆಳಿಗ್ಗೆ 10:30 ರವರೆಗೆ.
ಅಧಿಕೃತ ವೆಬ್ಸೈಟ್- https://www.esic.gov.in
ಆಸಕ್ತ ಅಭ್ಯರ್ಥಿಗಳು ESIC ಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ನಮೂನೆಯ ಪ್ರಕಾರ ಅರ್ಜಿ ಭರ್ತಿ ಮಾಡಬಹುದು. ಸಂದರ್ಶನಕ್ಕೆ ಹಾಜರಾಗುವ ಮೊದಲು, ಅಭ್ಯರ್ಥಿಗಳು ತಮ್ಮ ಅರ್ಜಿ ಪ್ರತಿಯನ್ನು ಈ ಕೆಳಗಿನ ದಾಖಲೆಗಳೊಂದಿಗೆ ಹಾಜರಾಗಬೇಕು.

ಎರಡು ಪಾಸ್‌ಪೋರ್ಟ್ ಸೈಜ್ ಫೋಟೋ. ಜನನ ದಿನಾಂಕದ ಪುರಾವೆ (SSLC/ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ ಅಥವಾ ಅದಕ್ಕೆ ಸಮನಾದ ಧಾಖಲೆಗಳು). ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರ. ಶೈಕ್ಷಣಿಕ ಅರ್ಹತಾ ಪ್ರಮಾಣಪತ್ರ (MBBS, ಡಿಪ್ಲೊಮಾ/ಪದವಿ). ವೈದ್ಯಕೀಯ ಮಂಡಳಿಯಿಂದ ನೋಂದಣಿ ಪ್ರಮಾಣಪತ್ರ. ಜಾತಿ ಪ್ರಮಾಣಪತ್ರ (If applicable). Experience ಪ್ರಮಾಣಪತ್ರ