File Your Income tax return Now!

Connect with us for filing your income tax and GST filing and all sorts of statutory requirement.

Your Attractive Heading

Call To Action

Connect with us for your income tax return and GST filing. The price starting from Just Rs. 500/

Adhar Card: 5 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಬಾಲ ಆಧಾರ್ ಕಾರ್ಡ್ ಮಾಡಿಸಬಹುದು. ಹೇಗೆ ಮಾಡುವುದು? ಮಾಡಿಸುವ ವಿಧಾನ ಇಲ್ಲಿದೆ.

ಆಧಾರ್ ಕಾರ್ಡ್ ಮಕ್ಕಳನ್ನು ಶಾಲೆಗೆ ಸೇರಿಸಲು, ಅರೋಗ್ಯ ವಿಚಾರದಲ್ಲಿ ಹಾಗು ಮಕ್ಕಳ ಹೆಸರಲ್ಲಿ ಹೂಡಿಕೆ ಮಾಡುವುದರಲ್ಲಿ ಬೇಕಾಗುತ್ತದೆ. ಅದಕ್ಕಾಗಿ ಭಾರತ ಸರಕಾರ 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಬಾಲ ಆಧಾರ್ ಕಾರ್ಡ್ (Bala adhar Card) ಎನ್ನುವುದನ್ನು ನೀಡುತ್ತಿದೆ. 12 ಅಂಕೆಗಳ ಯುನಿಕ್ ಸಂಖ್ಯೆ ಹೆತ್ತವರ ಆಧಾರ್ ಗೆ ಲಿಂಕ್ ಮಾಡಲಾಗಿರುತ್ತದೆ. ಇದರಲ್ಲಿ ಬಯೋ ಮೆಟ್ರಿಕ್ ಹಾಗು ಕಣ್ಣಿನ ಸ್ಕ್ಯಾನ್ ಮಾಡಲಾಗಿರುವುದಿಲ್ಲ. ಕೇವಲ ಮಕ್ಕಳ ಹೆಸರು, ಫೋಟೋ, ಜನ್ಮ ಸ್ಥಳ ಹಾಗು ಹೆತ್ತವರ ಬಗೆಗಿನ ಮಾಹಿತಿ ಹಾಕಲಾಗುತ್ತದೆ.

ಈ ಬಾಲ ಆಧಾರ ಪಡೆಯುವುದು ಹೇಗೆ?

ಈ ಬಾಲ ಆಧಾರ್ ಕಾರ್ಡ್ (Bala Adhar Card) ಅನ್ನು ನಿಮ್ಮ ಹತ್ತಿರದ ಅಧಿಕೃತ ಆಧಾರ್ ಸೇವಾ ಕೇಂದ್ರ, ಪ್ರೈವೇಟ್ ಹಾಗು ಸರಕಾರಿ ಆಸ್ಪತ್ರೆ ಗಳಲ್ಲಿ ಮಾಡಲಾಗುತ್ತದೆ. ಅಲ್ಲದೆ ಜನಿಸಿದ ಸಂಧರ್ಭದಲ್ಲಿ ಜನ್ಮ ಪ್ರಮಾಣಪತ್ರದ ಜೊತೆಗೆ ಬಾಲ ಆಧಾರ್ ಕಾರ್ಡ್ ಕೂಡ ಮಾಡಿಸಿಕೊಳ್ಳಬಹುದು.

Read this : ವೋಟರ್ ಐಡಿ ಕಾರ್ಡ್ ಮಾಡಿಸುವ ನಿಯಮದಲ್ಲಿ ಬದಲಾವಣೆ. ಇನ್ನು ಮುಂದೆ voter ID ನಿಮಗೆ ಕೇವಲ 15 ದಿನಗಳೊಳಗೆ ಸಿಗುತ್ತದೆ.

ಯಾವುದೆಲ್ಲ ಡಾಕ್ಯುಮೆಂಟ್ಸ್ ಗಳು ಬೇಕಾಗುತ್ತದೆ?

  1. ಆಸ್ಪತ್ರೆ ನೀಡಿದ ಮಗುವಿನ ಜನ್ಮ ಪ್ರಮಾಣ ಪತ್ರ ಅಥವಾ ಮುನಿಸಿಪಾಲಿಟಿ ನೀಡಿದ ಜನನ ಪ್ರಮಾಣ ಪತ್ರ.
  2. ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್
  3. ತಂದೆ ಅಥವಾ ತಾಯಿಯ ಆಧಾರ್ ನಂಬರ್ ಗೆ ಲಿಂಕ್ ಆದಂತಹ ಮೊಬೈಲ್ ನಂಬರ್.

ಅಪ್ಲಿಕೇಶನ್ ವಿಧಾನ ಹೇಗಿರಲಿದೆ?

  1. ಮಗುವಿನ ದಾಖಲಾತಿಯೊಂದಿಗೆ ನಿಮ್ಮ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ.
  2. ಏನ್ ರೊಲ್ಮೆನ್ಟ್ ಫಾರಂ ನಲ್ಲಿ ಮಗುವಿನ ಮಾಹಿತಿ ಭರ್ತಿ ಮಾಡಿ.
  3. ಮಗುವಿನ ದಾಖಲಾತಿಯ ಒಂದು ಪ್ರತಿ ಈ ಅರ್ಜಿ ಜೊತೆ ಅಂಟಿಸಿ.
  4. ಮಗುವಿನ ಫೋಟೋ ಈ ಆಧಾರ್ ಸೆಂಟರ್ ಅಲ್ಲಿಯೇ ತೆಗೆಯುತ್ತಾರೆ.
  5. ಇದಾದ ನಂತರ ನಿಮಗೆ ಏನ್ ರೋಲ್ ಮೆಂಟ್ ಸ್ಲಿಪ್ (Bala Adhar Card) ನಿಮಗೆ ಕೊಡುತ್ತಾರೆ. ಇದರ ಮೂಲಕ ಬಾಲ ಆಧಾರ್ ಪ್ರೋಸೆಸ್ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು.

ಆಧಾರ್ ಸೇವಾ ಕೇಂದ್ರ ದಲ್ಲಿ ನೀವು ದಾಖಲಾತಿ ಮಾಡಿದ ನಂತರ 60 ರಿಂದ 90 ದಿನಗಳ ಒಳಗೆ ಬಾಲ ಆಧಾರ್ (Bala adhar card) ನಿಮ್ಮ ರಿಜಿಸ್ಟರ್ ಮಾಡಿದ ವಿಳಾಸಕ್ಕೆ ಪೋಸ್ಟ್ ಮೂಲಕ ಬರುತ್ತದೆ. ಆಧಾರ್ ಕಾರ್ಡ್ ಕಳುಹಿಸಿದ ಮಾಹಿತಿ ಕೂಡ ನಿಮ್ಮ ಮೊಬೈಲ್ ನಂಬರ್ ಗೆ ಕಳುಹಿಸಲಾಗುವುದು. ಅಥವಾ ನೀವು ಏನ್ ರೋಲ್ ಮೆಂಟ್ ನಂಬರ್ ಮೂಲಕ ಆಧಾರ್ ಪ್ರತಿಯನ್ನು ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು.

Subscribe our youtube channel – Packet News

ಬಾಲ ಆಧಾರ್ ಕಾರ್ಡ್ (Bala Adhar Card) ಸಂಪೂರ್ಣ ಉಚಿತವಾಗಿರುತ್ತದೆ. ಯಾವುದೇ ಹಣ ನೀಡುವ ಅವಶ್ಯಕತೆ ಇರುವುದಿಲ್ಲ. ಮಗು 5 ವರ್ಷ ತುಂಬಿದ ನಂತರ ಮಕ್ಕಳು ಆಧಾರ್ ಕೇಂದ್ರ ಕ್ಕೆ ಮತ್ತೊಮ್ಮೆ ಹೋಗಬೇಕಾಗುತ್ತದೆ. ಅಲ್ಲಿ ಬಯೋ ಮೆಟ್ರಿಕ್ ಹಾಗು ಕಣ್ಣಿನ ಸ್ಕ್ಯಾನ್ ಎಲ್ಲ ಮಾಡಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಬಹುದು. ಈ ಅಪ್ಡೇಟ್ ಕೂಡ ಸಂಪೂರ್ಣ ಉಚಿತವಾಗಿರುತ್ತದೆ.

Leave a Comment

Your email address will not be published. Required fields are marked *

Scroll to Top