ಕೆಲವು ಮಾದ್ಯಮದಲ್ಲಿ ಬಂದ ವರದಿಗಳ ಪ್ರಕಾರ ದ್ವಿಚಕ್ರ ವಾಹನ ಸವಾರರು ಕೂಡ ಇನ್ನು ಮುಂದೆ ರಾಷ್ಟೀಯ ಹೆದ್ದಾರಿಯಲ್ಲಿ ಟೋಲ್ (toll fastag) ಪಾವತಿ ಮಾಡಬೇಕು ಎಂದು ಪ್ರಕಟಣೆ ಆಗಿತ್ತು. ಇದಕ್ಕೆ ಸ್ಪಷ್ಟನೆ ನೀಡಿದ ರಾಷ್ಟೀಯ ಹೆದ್ದಾರಿ ಪ್ರಾಧಿಕಾರ, ಇಂತಹ ಯಾವುದೇ ಯೋಜನೆ ಸರಕಾರ ಮಾಡಿಲ್ಲ ಎಂದು ಹೇಳಿದೆ. ಮಾಧ್ಯಮ ವರದಿ ಸುಳ್ಳು ಎಂದು ಸ್ಪಷ್ಟ ಪಡಿಸಿದೆ. ಇದನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡ ವರದಿಯನ್ನು ಸುಳ್ಳು ಎಂದು ಹೇಳಿದ್ದಾರೆ. ಇಂತಹ ಯಾವುದೇ ಪ್ರಸ್ತಾಪ ಕೇಂದ್ರ ಸರಕಾರದ ಬಳಿ ಇಲ್ಲ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ X ನಲ್ಲಿ ಬರೆದಿರುವ ನಿತಿನ್ ಗಡ್ಕರಿಯವರು ” ದ್ವಿಚಕ್ರ ವಾಹನಗಳ ಮೇಲೆ ಟೋಲ್ (toll fastag) ತೆರಿಗೆ ವಿಧಿಸುವ ಬಗ್ಗೆ ಕೆಲವು ಮಾಧ್ಯಮಗಳು ದಾರಿ ತಪ್ಪಿಸುವ ಮಾಹಿತಿ ನೀಡುತ್ತಿದೆ. ಅಂತಹ ಯಾವುದೇ ನಿರ್ಧಾರವನ್ನು ಪ್ರಸ್ತಾಪನೆ ಮಾಡಲಾಗಿಲ್ಲ. ದ್ವಿಚಕ್ರ ವಾಹನಗಳ ಮೇಲಿನ ಟೋಲ್ ವಿನಾಯಿತಿ ಮುಂದುವರೆಯುತ್ತದೆ. ಸತ್ಯವನ್ನು ಮರೆಮಾಚಿ ಸುಳ್ಳನ್ನು ಹಬ್ಬಿಸುವುದು ಆರೋಗ್ಯವಂತ ಪತ್ರಿಕೋದ್ಯಮವಲ್ಲ. ಇದನ್ನು ನಾನು ಖಂಡಿಸುತ್ತೇನೆ.” ಎಂದು ಗಡ್ಕರಿ ಹಂಚಿಕೊಂಡಿದ್ದಾರೆ.
ಆಗಸ್ಟ್ 15 ರಿಂದ 3,000 ರೂಪಾಯಿಗಳಿಗೆ ವಾರ್ಷಿಕ ಟೋಲ್ ಪಾಸ್:
ಇದೆ ಆಗಸ್ಟ್ 15 ರಿಂದ ಹೊಸ ಟೋಲ್ (toll fastag) ಯೋಜನೆ ಜಾರಿಗೆ ಬರಲಿದೆ. ಖಾಸಗಿ ವಾಹನಗಳಿಗೆ ಫಾಸ್ಟಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಜಾರಿಗೆ ತರಲಾಗಿದೆ. ಇದು ತೊಂದರೆಯಿಲ್ಲದೆ ಹೆದ್ದಾರಿ ಪ್ರಯಾಣ ಸರಾಗವಾಗಿ ನಡೆಯುತ್ತದೆ. ಒಂದು ವರ್ಷದಲ್ಲಿ 3000 ಸಾವಿರ ಪಾಸ್ ಗೆ 200 ಟ್ರಿಪ್ ಉಚಿತವಾಗಿರಲಿದೆ. ಇದಕ್ಕಿಂತ ಹೆಚ್ಚಾದರೆ ಅದಕ್ಕೆ ರೆಗ್ಯುಲರ್ ಟೋಲ್ ಪಾವತಿ ಮಾಡಬೇಕಾಗುತ್ತದೆ. For more details read here: Annual FASTag: 3000 ರೂಪಾಯಿ ವಾರ್ಷಿಕ ಫಾಸ್ಟಾಗ್ ಹೇಗೆ ನಿಮ್ಮ ಅಕೌಂಟ್ ಅಲ್ಲಿ ಆಕ್ಟಿವೇಟ್ ಆಗುತ್ತದೆ? ಇದನ್ನು ಆಕ್ಟಿವೇಟ್ ಮಾಡುವ ವಿಧಾನ ಇಲ್ಲಿದೆ.