Ticket Discount : ಹಿರಿಯ ನಾಗರಿಕರಿಗೆ ಸಿಗಲಿದೆ ಟಿಕೆಟ್ ನಲ್ಲಿ ರಿಯಾಯಿತಿ. ಪ್ರತಿ ಟಿಕೆಟ್ ಗೆ ರೈಲ್ವೆ ಎಷ್ಟು ಸಬ್ಸಿಡಿ ನೀಡುತ್ತಿದೆ ಗೊತ್ತೇ?
ರೈಲ್ವೆ ದರ ದೇಶದಲ್ಲಿ ಅತ್ಯಂತ ಕಡಿಮೆ ಇದೆ. ರೈಲಿನ ಟಿಕೆಟ್ ದರವು ಬಸ್ ನ ಟಿಕೆಟ್ ದರಕ್ಕಿಂತಲೂ ಬಹಳ ಅಗ್ಗವಾಗಿದೆ. ಇದಕ್ಕೆ ಕಾರಣ ಸರಕಾರ ರೈಲ್ವೆ ಗೆ ನೀಡುವ ಸಬ್ಸಿಡಿಯೇ (Railway Subsidy) ಕಾರಣ. ಆದರೆ ರೈಲ್ವೆ ಪ್ರಯಾಣಿಕರಿಗೆ ಪ್ರತಿ ಟಿಕೆಟ್ ಗೆ ಎಷ್ಟು ಸಬಿಸಿಡಿ ನೀಡುತ್ತಿದೆ ಎನ್ನುವುದು ನಿಮಗೆ ಗೊತ್ತೇ? ಈ ಪ್ರಶ್ನೆಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಂಸತ್ತಿನಲ್ಲಿ ಉತ್ತರ ನೀಡಿದ್ದಾರೆ. ದೇಶದ ಪ್ರತಿ ಪ್ರಯಾಣಿಕನ ಟಿಕೆಟ್ ನ ಮೇಲೆ 46% ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಇದಕ್ಕಾಗಿ ಪ್ರತಿ ವರ್ಷ ಕೇಂದ್ರ ಸುಮಾರು 56,993 ಕೋಟಿ ರೂಪಾಯಿ ವ್ಯಯ ಮಾಡುತ್ತಿದೆ.
ಹಿರಿಯ ನಾಗರಿಕರು ಹಾಗು ಮಾನ್ಯತೆ ಪಡೆದ ಪತ್ರಕರ್ತರಿಗೆ ಹಿಂದೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಮರು ಸ್ಥಾಪಿಸಿವ ಬಗ್ಗೆ ಪ್ರಶ್ನೆ ಕೇಳಿದಾಗ, ಭಾರತ ಸರಕಾರವು (Indian Government) ಪ್ರಯಾಣಿಕರಿಗೆ ನೀಡಿದ ಒಟ್ಟು ಸಬ್ಸಿಡಿ 56,933 ಕೋಟಿ ರೂಪಾಯಿ. ಪ್ರತಿ 100 ರೂಪಾಯಿ ಪ್ರಯಾಣ ಸೇವೆಯ ಟಿಕೆಟ್ ಅಲ್ಲಿ 46 ರೂಪಾಯಿ ಸರಕಾರವೇ ಸಬ್ಸಿಡಿ ಮೂಲಕ ನೀಡುತ್ತದೆ. (Ticket Discount)
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರ ನೇತೃತ್ವದ ಸರಕಾರದ ಅವಧಿಯಲ್ಲಿ ಇಡೀ ದೇಶಕ್ಕೆ ರಸ್ತೆ ಸಂಪರ್ಕಿಸಿದ ರೀತಿಯಲ್ಲೆ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದಲ್ಲಿ ದೇಶದ ಸಣ್ಣ ಮತ್ತು ಮಾಧ್ಯಮ ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಎಂದು ಸಂಸತ್ತಿನಲ್ಲಿ ಸಚಿವ ಅಶ್ವಿನಿ ವೈಷ್ಣವ್ (Ashwini Vaishnav) ಹೇಳಿದ್ದಾರೆ.