ಬಿಹಾರ ವಿಧಾನ ಸಭೆ ಚುನಾವಣೆ ಇನ್ನೇನು ನಡೆಯಲಿದೆ. ಈ ಮತದಾನದ ವಿಷಯದಲ್ಲಿ ಹೊಸ ಬದಲಾವಣೆ ಬರಲಿದೆ. ಬಿಹಾರವು ಫೋನ್ ಮೂಲಕ (E-Vote) ಮತದಾನ ಮಾಡುವ ಮೊದಲ ರಾಜ್ಯವಾಗಲಿದೆ. ಬಿಹಾರ್ ನ 6 ಪುರಸಭೆಗಳಿಗೆ ನಡೆಯುವ ಮತದಾನದ ಮೊದಲು ಈ ವಿಷಯ ಬಂದಿದೆ. ಆದರೆ ಮುಂಬರುವ ವಿಧಾನ ಸಭೆಯಲ್ಲಿ ಮೊಬೈಲ್ ಮೂಲಕ ಮತದಾನ ನಡೆಯಲಿದೆಯೋ ಇಲ್ಲವೋ ಎನ್ನುವುದು ತಿಳಿದು ಬಂದಿಲ್ಲ.
ಮತದಾನ ಕೇಂದ್ರಕ್ಕೆ ಹೋಗಿ ಮತದಾನ ಮಾಡಲು ಸಾಧ್ಯವಾಗದೆ ಇರುವ ವ್ಯಕ್ತಿಗಳಿಗೆ ಸೌಲಭ್ಯ ನೀಡಲು ಈ ವ್ಯವಸ್ಥೆ ತರಲಾಗಿದೆ. ಆನ್ಲೈನ್ ಅಲ್ಲಿ ಮತ ಚಲಾಯಿಸಲು (E-Vote) ಫೋನ್ ನಲ್ಲಿ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕಾಗುತ್ತದೆ ಎಂದು ಚುನಾವಣಾ ಆಯುಕ್ತರಾದ ದೀಪಕ್ ಪ್ರಸಾದ್ ಹೇಳಿದ್ದಾರೆ. ಹಿರಿಯ ನಾಗರಿಕರು, ದಿವ್ಯಂಗರು, ಗರ್ಭಿಣಿಯರು ಹಾಗು ಬೇರೆ ರಾಜ್ಯದಲ್ಲಿ ವಾಸಿಸುವ ಮತದಾರರಿಗೆ ಈ ಸೌಲಭ್ಯ ದೊರೆಯಲಿದೆ.
ಈ ಸೌಲಭ್ಯ ಪಡೆಯಲು ಮತದಾರರು E-SECBER ಅಪ್ಲಿಕೇಶನ್ ಅನ್ನು ಮೊಬೈಲ್ ಅಲ್ಲಿ ಇನ್ಸ್ಟಾಲ್ ಮಾಡಬೇಕಾಗುತ್ತದೆ. ಇಲ್ಲಿ ಮತದಾರರ ಪಟ್ಟಿಯಲ್ಲಿ ಸೇರಿಸಲಾದ ಮೊಬೈಲ್ ನಂಬರ್ ಗೆ ಲಿಂಕ್ ಮಾಡಬೇಕು. ಈ ಮೊಬೈಲ್ ಅಪ್ಲಿಕೇಶನ್ ಪ್ರಸ್ತುತವಾಗಿ ಆಂಡ್ರಾಯ್ಡ್ ಅಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದೆ.

ಇದರ ಭದ್ರತೆ ಹೇಗೆ ಇರಲಿದೆ?
ಈ ವೋಟಿಂಗ್ ನ (E-Vote) ದೊಡ್ಡ ಭಯ ಎಂದರೆ ಇದನ್ನು ತಿರುಚುವ ಸಾಧ್ಯತೆ ಬಹಳಷ್ಟಿದೆ. ಅಂತಹ ಪರಿಸ್ಥಿತಿಯಲ್ಲಿ ಪಾರದರ್ಶಕತೆ ತರಲು, ಸುಗಮವಾಗಿಸಲು ಹಾಗು ನ್ಯಾಯಯುತವಾಗಿಡಲು ಅನೇಕ ಪ್ರಯತ್ನಗಳನ್ನು ಮಾಡಲಾಗಿದೆ. ಉದಾಹರಣೆಗೆ ಇಬ್ಬರು ಮತದಾರರಿಗೆ ಒಂದು ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಮಾಡಲು ಅವಕಾಶ ಇರುತ್ತದೆ. ಇದರ ಹೊರತಾಗಿ ಪ್ರತಿ ಲಾಟ್ ಅನ್ನು ಮತದಾರರ ಗುರುತಿನ ಚೀಟಿ ಬಳಸಿ ಪರಿಶೀಲಿಸಲಾಗುತ್ತದೆ. ಮೊಬೈಲ್ ಫೋನ್ ಇಲ್ಲದ ಮತದಾರರು ಬಿಹಾರ ಚುನಾವಣಾ ಆಯೋಗದ ವೆಬ್ಸೈಟ್ ನಲ್ಲೂ E-ವೋಟ್ ಮಾಡಬಹುದಾಗಿದೆ.
ಈಗಾಗಲೇ ಈ ಮತ ಚಲಾಯಿಸಲು 10 ಸಾವಿರ ಜನರು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ 50 ಸಾವಿರ ಜನರು ಮತಗಟ್ಟೆಗೆ ಹೋಗದೆನೆ E-ವೋಟ್ (E-Vote) ಮಾಡುತ್ತಾರೆ ಎಂದು ಚುನಾವಣಾ ಆಯೋಗ ಅಂದಾಜು ವ್ಯಕ್ತ ಪಡಿಸಿದೆ. ಅಲ್ಲದೆ ಇದು ಬ್ಲಾಕ್ ಚೈನ್ ತಂತ್ರಜ್ಞಾನದಿಂದ ಕೂಡಿದೆ. ಮುಖ ಸ್ಕ್ಯಾನ್ ಹಾಗು ಹೊಂದಾಣಿಕೆ ಯಂತಹ ವೈಶಿಷ್ಟ್ಯಗಳಿರುತ್ತದೆ. ಅಲ್ಲದೆ VVPAT ನಲ್ಲಿ ಆಡಿಟ್ ಟ್ರಯಲ್ ಕೂಡ ನಡೆಯುತ್ತದೆ. ಇದು ಹೆಚ್ಚಿನ ಪಾರದರ್ಶಕತೆಯನ್ನು ಕಾಪಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಚುನಾವಣಾ ಆಯುಕ್ತರು ಹೇಳಿದ್ದಾರೆ.