Chandana News

Kannada Trending News

Chandana News

Kannada Trending News

Interesting

Activate PPF: ನಿಮ್ಮ PPF ಅಕೌಂಟ್ ನಿಷ್ಕ್ರಿಯ ಆಗಿದ್ದರೆ ಇಷ್ಟು ಹಣ ಕಟ್ಟಿ ಮಗದೊಮ್ಮೆ ಆಕ್ಟಿವೇಟ್ ಮಾಡಬಹುದು.

ಪಬ್ಲಿಕ್ ಪ್ರೊವಿಡೆಂಟ್ ಪಂಡ್ (Public Provident Fund) ಹೂಡಿಕೆ ವಿಚಾರದಲ್ಲಿ ಬರುವುದಾದರೆ ಒಂದು ಉತ್ತಮ ಮಾದ್ಯಮ್. ಕಾರಣ ಹೆಚ್ಚು ಬಡ್ಡಿ ಹಾಗು ಒಂದು ರಿಸ್ಕ್ ಇಲ್ಲದೇ ಇರುವ ಒಂದು ಹೂಡಿಕೆ. ಅತೀ ಹೆಚ್ಚು ಹಣವನ್ನು ಇದರಲ್ಲಿ ಹೂಡಿಕೆ (Investment) ಮಾಡಲಾಗಿದೆ. ಭಾರತೀಯ ನಾಗರೀಕರೆಲ್ಲರೂ PPF ನಲ್ಲಿ ಹೂಡಿಕೆ ಮಾಡಬಹುದು. ಕನಿಷ್ಠ 500 ರೂಪಾಯಿ ಹಾಗು ಗರಿಷ್ಠ 1.5 ಲಕ್ಷದವರೆಗೆ ಒಬ್ಬ ನಾಗರಿಕ ಒಂದು ವರ್ಷದಲ್ಲಿ ಹೂಡಿಕೆ‌ಮಾಡಬಹುದು. ಬಡ್ಡಿ ಅಲ್ಲದೇ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡಾ ಸಿಗುತ್ತದೆ. ಬಡ್ಡಿ ಮೇಲೆ ಹಾಗು ಮೆಚುರಿಟಿ ಹಣದ (Maturity amount) ಮೇಲೆ ಯಾವುದೇ ತೆರಿಗೆ ಕಟ್ಟ ಬೇಕಾಗಿಲ್ಲ. ಕನಿಷ್ಠ 500 ರೂಪಾಯಿ ಒಂದು ವರ್ಷದಲ್ಲಿ ಕಟ್ಟದೇ ಹೋದರೆ ನಿಮ್ಮ PPF ಖಾತೆ ನಿಷ್ಕ್ರಿಯ ಗೊಳ್ಳುತ್ತದೆ.

ನಿಷ್ಕ್ರಿಯ ಗೊಂಡ ಸಂದರ್ಭದಲ್ಲಿ ನೀವು PPF ಹಣ ವಾಪಸ್ಸು ಪಡೆಯಲು ಸಾಧ್ಯವಾಗುವುದಿಲ್ಲ.ಹಾಗೆನೆ ಸಾಲ ಕೂಡಾ ಪಡೆಯುವುದು ಸಾಧ್ಯವಾಗುವುದಿಲ್ಲ. ನಿಮ್ಮ PPF ಅಕೌಂಟ್ ನಿಷ್ಕ್ರಿಯ ಆದರೆ ಹೆದರಬೇಕಾಗಿಲ್ಲ‌. ಇದನ್ನು ಮರು ಚಾಲ್ತಿಗೆ ತರಬಹುದು. ಇದು ಒಂದು ಸೇಪ್ ಹೂಡಿಕೆಗೆ ಮಾಡಿದ ಯೋಜನೆ. ಇದನ್ನು ಚಾಲ್ತಿಗೆ ತರಲು ಈ ಕೆಳಗಿನ ಕೆಲಸ ಮಾಡಿ ಸಾಕು.

ನೀವು PPF ಖಾತೆ ತೆರೆದ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಗೆ ಹೋಗಿ. ಅಲ್ಲಿ ನಿಮಗೆ ಒಂದು ಅರ್ಜಿ ನೀಡಬೇಕಾಗುತ್ತದೆ. ನೀವು ಯಾವ ವರ್ಷದಲ್ಲಿ PPF ಹಣ ಪಾವತಿ ಮಾಡಿಲ್ಲ ಅಲ್ಲಿಂದ ಹಣ ಕನಿಷ್ಟ 500 ಹೂಡಿಕೆ ಮಾಡಬೇಕಾಗುತ್ತದೆ. ಅದೇ ರೀತಿ ದಂಡದ ಹಣ 50 ರೂಪಾಯಿ ಯಾವ ವರ್ಷದಲ್ಲಿ ಕಟ್ಟಿಲ್ಲ ಆ ವರ್ಷಗಳದ್ದು ಕಟ್ಟ ಬೇಕಾಗುತ್ತದೆ.

activate inactive ppf account

ಉದಾಹರಣೆಗೆ ನಿಮ್ಮ PPF ಖಾತೆ 4 ವರ್ಷಗಳಿಂದ ನಿಷ್ಕ್ರಿಯ ಆಗಿದ್ದರೆ, ನೀವು ಪ್ರತಿ ವರ್ಷಕ್ಕೆ ಕನಿಷ್ಠ 500 ರೂಪಾಯಿಗಳಂತೆ ನಾಲ್ಕು ವರ್ಷಕ್ಕೆ 2000 ರೂಪಾಯಿ ಕಟ್ಟಬೇಕು. ಅದರ ಜೊತೆ ದಂಡದ ರೀತಿಯಲ್ಲಿ 4 ವರ್ಷಗಳಿಗೆ 50 ರೂಪಾಯಿಯಂತೆ 200 ರೂಪಾಯಿ ಕಟ್ಟಬೇಕಾಗುತ್ತದೆ.

2016 ರಲ್ಲಿ ಕೇಂದ್ರ ಸರಕಾರ PPF ಖಾತೆಯನ್ನು ಮೆಚುರಿಟಿ ಗಿಂತ ಮೊದಲೇ ಮುಚ್ಚಲು ಅವಕಾಶ ಮಾಡಿಕೊಟ್ಟಿದೆ. ಅದು ಕೂಡಾ‌ ಕೆಲ ಷರತ್ತುಗಳಿವೆ. ಜೀವನ್ಮರಣದ ಅನಾರೋಗ್ಯ, ಮಕ್ಕಳ ಶಿಕ್ಷಣ ಖರ್ಚು ಗಳಿದ್ದರೆ ಮಾತ್ರ. ಆದರೆ PPF ಖಾತೆ 5 ವರ್ಷಗಳವರೆಗೆ ಯಾರೂ‌ ಮುಚ್ಚುವಂತಿಲ್ಲ ಯಾವುದೇ ಕಾರಣಕ್ಕು.

Leave a Reply

Your email address will not be published. Required fields are marked *