UPI wrong Payment: ತಪ್ಪಿ ಬೇರೆಯವರಿಗೆ ಹಣ ವರ್ಗಾವಣೆ ಮಾಡಿದರೆ ಏನು ಮಾಡಬೇಕು? ಈ ಕೆಲಸ ಮಾಡಿ ನಿಮ್ಮ ಹಣ 48 ಗಂಟೆಗಳೊಳಗೆ ನಿಮಗೆ ವಾಪಸಾಗುತ್ತದೆ.
UPI Wrong Payment: ಮೊಬೈಲ್ ನಲ್ಲಿ ಹಣ ವರ್ಗಾವಣೆ ಮಾಡುವಾಗ ಒಂದು ನಂಬರ್ ತಪ್ಪಿದರೂ ಕೂಡ ಬೇರೆ ಯಾರಿಗೋ ಹಣ ಹೋಗುತ್ತದೆ. ಸಣ್ಣ ಹಣ ಅಥವಾ ದೊಡ್ಡ ಮೊತ್ತ ಆಯಾ ವ್ಯಕ್ತಿಗೆ ಆಯಾ ಹಣ ದೊಡ್ಡದಾಗಿರುತ್ತದೆ. ಈ ತರಹ ನಡೆದರೆ ಎಲ್ಲರು ಒಂದು ಕ್ಷಣ ಗಾಬರಿ ಬೀಳುವುದು ಸಹಜ. ಆದರೆ ನಿಮಗೆ ಅದನ್ನು ಹಿಂಪಡೆಯುವುದು ಹೇಗೆ ಎನ್ನುವ ಮಾಹಿತಿ ಗೊತ್ತಿದ್ದರೆ, ನೀವು ಸುಲಭವಾಗಿ ಎಲ್ಲೂ ಹೋಗದೆ ಮನೆಯಲ್ಲೇ ಇದ್ದು ನಿಮ್ಮ ಹಣವನ್ನು 48 ಗಂಟೆಗಳ ಒಳಗೆ ಹಿಂಪಡೆಯಬಹುದು. ಅದು ಹೇಗೆ ಇಲ್ಲಿದೆ ಮಾಹಿತಿ.
ಕಳೆದ 5-6 ವರ್ಷದಿಂದ ಡಿಜಿಟಲ್ ಪಾವತಿ ಅಂದರೆ ಗೂಗಲ್ ಪೆ ಹಾಗು ಫೋನ್ ಪೇ ನಂತರ ಅಪ್ಲಿಕೇಶನ್ ಮೂಲಕ ಹೆಚ್ಚಾಗುತ್ತಿದೆ. ಅದೇ ರೀತಿ ಅಕ್ರಮ ವಹಿವಾಟಿನ ದೂರುಗಳು ಕೂಡ ಹೆಚ್ಚಾಗುತ್ತಿದೆ. ಬಳಕೆದಾರರ ಈ ದೂರುಗಳನ್ನು ಗಮನದಲ್ಲಿಟ್ಟುಕೊಂಡು ಆರ್ಬಿಐ ಕಾಲಕಾಲಕ್ಕೆ ಅನೇಕ ನಿಯಮ ಜಾರಿ ಮಾಡುತ್ತಿದೆ. ಹಾಗೇನೇ ಮರುಪಾವತಿ ಪ್ರಕ್ರಿಯೆ ಕೂಡ ಸುಲಭಗೊಳಿಸಿದೆ.
ಹೇಗೆ ಹಣ ವಾಪಸು ಪಡೆಯುವುದು?
1. UPI ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣ ತಪ್ಪು ಖಾತೆಗೆ ವರ್ಗಾವಣೆ ಆಗಿದ್ದರೆ ಮೊದಲು ಈ ಟೋಲ್ ಫ್ರೀ ನಂಬರ್ ಗೆ ಕರೆ ಮಾಡಿ. 18001201740 ಕರೆ ಮಾಡಿ ಇಲ್ಲಿ ದೂರು ನೀಡಿ.
2. ಇದಾದ ನಂತರ ನಿಮ್ಮ ಯಾವ ಖಾತೆ ಇಂದ ದುಡ್ಡು ಹೋಗಿದೆಯೋ ಆ ಅಕೌಂಟ್ ಇಂದ ಅರ್ಜಿ ಭರ್ತಿ ಮಾಡಿ ಅದರ ಬಗ್ಗೆ ಮಾಹಿತಿ ನೀಡಿ.
3. ಆರ್ಬಿಐ ಮಾರ್ಗಸೂಚಿ ಪ್ರಕಾರ ಆನ್ಲೈನ್ ಪೇಮೆಂಟ್ ಸಮಯದಲ್ಲಿ ಬೇರೆ ಖಾತೆಗೆ ತಪ್ಪಿ ಹೋಗಿದ್ದರೆ, ಅದನ್ನು 48 ಗಂಟೆಗಳ ಒಳಗೆ ವಾಪಸಾತಿ ಮಾಡುವ ಜವಾಬ್ದಾರಿ ಬ್ಯಾಂಕ್ ಗಳದ್ದಾಗಿರುತ್ತದೆ.
4. ಇದಲ್ಲದೆ ನೀವು ಬ್ಯಾಂಕಿನ ಗ್ರಾಹಕರ ಸೇವಾ ವಿಭಾಗಕ್ಕೆ ಈ ಮೇಲ್ ಮಾಡುವ ಮೂಲಕ ದೂರು ದಾಖಲಿಸಬಹುದು.
5. ಬ್ಯಾಂಕಿನಿಂದ ಯಾವುದೇ ಪ್ರತಿಕ್ರಿಯೆ ಬರದೇ ಇದ್ದರೆ ಅಥವಾ ಸಹಾಯ ಮಾಡಲು ನಿರಾಕರಿಸಿದರೆ ನೀವು bankingombudsman.rbi.org.in ನಲ್ಲಿ ದೂರು ನೀಡಬಹುದು.
6. ಮುಖ್ಯ ವಿಷಯ ಏನೆಂದರೆ ನೀವು ತಪ್ಪಾಗಿ ಪೇಮೆಂಟ್ ಮಾಡಿದ ನಂತರ ನಿಮಗೆ ಬಂದಿರುವ ಮೆಸೇಜ್ ಅನ್ನು ತಪ್ಪಿಯೂ ಡಿಲೀಟ್ ಮಾಡಬೇಡಿ. ಏಕೆಂದರೆ ದೂರು ನೀಡುವ ಸಮಯದಲ್ಲಿ ಈ ಮೆಸೇಜ್ ಅಲ್ಲಿ ಬಂದಿರುವ PPBL ನಂಬರ್ ಮುಖ್ಯವಾಗಿರುತ್ತದೆ. ಹಾಗೇನೇ ದೂರನ್ನು ಪೇಮೆಂಟ್ ಆದ 3 ದಿನಗಳ ಒಳಗೆ ನೀಡುವುದು ಅವಶ್ಯಕವಾಗಿದೆ.