Article 370 ಬಾಕ್ಸ್ ಆಫೀಸ್ ಕಲೆಕ್ಷನ್ : ಯಾಮಿ ಗೌತಮಿ ನಟನೆಯ ಸಿನೆಮಾ ದೇಶದಲ್ಲಿ ಹೊಸ ಅಲೆ ಎಬ್ಬಿಸುತ್ತಿದೆ. ಒಟ್ಟಾರೆ ಗಳಿಸಿದ ಮೊತ್ತವೆಷ್ಟು?

ಯಾಮಿ ಗೌತಮಿ (Yami Gautami) ನಟನೆಯ ಆರ್ಟಿಕಲ್ ೩೭೦ (Article 370) ಸಿನೆಮಾ ಉತ್ತಮ ಆರಂಭಿಕ ಪ್ರದರ್ಶನ ಹಾಗು ಗಳಿಕೆ ನಡೆಸಿದೆ. ಶನಿವಾರ ಹಾಗು ಭಾನುವಾರ ಅಲ್ಲದೆ ವೀಕ್ ಡೇಸ್ ಅಲ್ಲೂ ಕೂಡ ಇದರ ಗಳಿಕೆ ಕಡಿಮೆ ಯಾಗಿಲ್ಲ. ಬಿಡುಗಡೆ ಆದ ಮೊದಲ ವಾರಾಂತ್ಯಕ್ಕೆ ಈ ಸಿನೆಮಾ ಗಳಿಸಿದ್ದು ಬರೋಬ್ಬರಿ ೩೫.೬ ಕೋಟಿ ರೂಪಾಯಿಗಳು. ಮಾರ್ಚ್ ೧ ಅಂದರೆ ಎರಡನೇ ವಾರದ ಶುಕ್ರವಾರ ಗಳಿಸಿದ್ದು ೨.೭೫ ಕೋಟಿ ಹಾಗು ಒಟ್ಟಾರೆ ಗಳಿಕೆ ೩೮.೩೫ ಕೋಟಿ ಗೆ ಏರಿದೆ.

ಇದೆ ರೀತಿಯ ಗಳಿಕೆ ಇನ್ನುಮುಂದೆ ಕಂಡರೆ ಯಾಮಿ ಗೌತಮಿ (Yami gautami) ನಟನೆಯ ಸಿನೆಮಾ ೪೦ ಕೋಟಿ ಬಾಚುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಿನಿ ವಿಜ್ಞಾನಿಗಳು ಹೇಳುತ್ತಿದ್ದಾರೆ. ಈ ಸಿನೆಮಾ ಕೇಂದ್ರ ಸರಕಾರದ ದಿಟ್ಟ ನಿರ್ಧಾರವಾದ ಜಮ್ಮು ಕಾಶ್ಮೀರಕ್ಕೆ ನೀಡಲಾದ ಆರ್ಟಿಕಲ್ ೩೭೦ (Article 370) ಎನ್ನುವ ವಿಶೇಷ ಪ್ರಾತಿನಿಧ್ಯ ವನ್ನು ತೆಗೆದು ಹಾಕಿದರೆ ಮೇಲಿನ ಸಿನೆಮಾ ಆಗಿದೆ. ದುಬೈ ಅಂದರೆ UAE ಬಿಟ್ಟು ಉಳಿದ ಎಲ್ಲ ಗಲ್ಫ್ ದೇಶಗಳಲ್ಲಿ ಈ ಸಿನೆಮಾಗೆ ನಿಷೇದ ವಿದೆ.

ಈ ಸಿನೆಮಾದಲ್ಲಿ ಯಾಮಿ ಗೌತಮಿ NIA ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೇನೇ ಕಾಶ್ಮೀರದಲ್ಲಿ (Jammu & Kashmir) ಆರ್ಟಿಕಲ್ ೩೭೦ ಗು ಮೊದಲು ಹೇಗೆ ಇತ್ತು. ಈ ವಿಶೇಷ ಪ್ರಾತಿನಿಧ್ಯ ಹಿಂಪಡೆಯಲು ಮೋದಿ ಸರಕಾರ (Narendra Modi) ಏನೆಲ್ಲಾ ಪ್ರಯತ್ನ ಮಾಡಿದೆ. ಹಾಗೇನೇ ಇದರ ಸುತ್ತ ಏನೆಲ್ಲಾ ಹರಸಾಹಸ ಸರಕಾರ ಪಟ್ಟಿದೆ. ಹಾಗೇನೇ ಇದು ಯಾಕೆ ಕಾಶ್ಮೀರಕ್ಕೆ ನೀಡಲಾಗಿತ್ತು ಎನ್ನುವ ಬಗೆಗಿನ ಸಂಕ್ಷಿಪ್ತ ರೀತಿಯಲ್ಲಿ ವಿವರಿಸಲಾಗಿದೆ. ನೀವು ಮೋದಿ ಅಭಿಮಾನಿ ಆಗಿದ್ದರೆ, ಹಾಗೇನೇ ಒಂದು ಸೇನೆ, ಡ್ರಾಮಾ, ಆಕ್ಷನ್ ಥ್ರಿಲ್ಲರ್ ಸಿನೆಮಾ ನೋಡುವ ರುಚಿ ಹೊಂದಿದ್ದರೆ, ಈ ಸಿನೆಮಾವನ್ನು ಸಿನೆಮಾ ಮಂದಿರದಲ್ಲಿ ನೋಡುವದನ್ನು ಮರೆಯದಿರಿ.

article 370narendra modiyami gauthami
Comments (0)
Add Comment