Business

Banking rule: ಬ್ಯಾಕಿಂಗ್ ನಿಯಮದಲ್ಲಿ ದೊಡ್ಡ ಬದಲಾವಣೆ. ಇದೀಗ ಒಂದೇ ಸಮಯದಲ್ಲಿ ನಿಮ್ಮ ಖಾತೆಗೆ 4 ನಾಮಿನಿಗಳನ್ನು ಸೇರಿಸಲು ಅವಕಾಶ.

Banking rule: ಕೇಂದ್ರ ಸರ್ಕಾರ ಬ್ಯಾಂಕಿಂಗ್ ಕಾನೂನುಗಳ ಮಸೂದೆ (ತಿದ್ದುಪಡಿ) ೨೦೨೪ ನ್ನು ಸಂಸತ್ತಿನಲ್ಲಿ ಅಂಗೀಕಾರ ಮಾಡಿದೆ. ಈ ಹೊಸ ಕಾನೂನು ಬ್ಯಾಂಕ್ ಖಾತೆದಾರರಿಗೆ 4 ನಾಮಿನಿಗಳನ್ನು ಸೇರಿಸಲು ಅನುವು ಮಾಡಿ ಕೊಡುತ್ತದೆ. ಲೋಕಸಭೆಯಲ್ಲಿ ಅಂಗೀಕಾರವಾದ ನಂತರ ರಾಜ್ಯಸಭೆಯಲ್ಲೂ ಕೂಡಾ ಇದು ಧ್ವನಿ ಮತದ ಮೂಲಕ ಅನುಮೋದನೆ ಗೊಂಡಿದೆ.

ಗಣನೀಯ ಬಡ್ಡಿ ಅಥವಾ substantial interest ಎನ್ನುವ ವ್ಯಾಖ್ಯಾನ ಸಂಬಂಧಿಸಿದಂತೆ ತಿದ್ದುಪಡಿ ತರಲಾಗಿದೆ. ಅಂದರೆ ಈ ಹಿಂದೆ ಒಬ್ಬ ವ್ಯಕ್ತಿ ಬ್ಯಾಂಕಿನಲ್ಲಿ 5 ಲಕ್ಷ ಹೂಡಿಕೆ ಮಾಡಿದರೆ ಅದನ್ನು ಗಣನೀಯ ಬಡ್ಡಿ ಎಂದು ಗಣನೆ ಮಾಡಲಾಗುತಿತ್ತು. ಇದೀಗ ಈ ಮಿತಿಯನ್ನು 2 ಕೋಟಿಗೆ ಏರಿಕೆ ಮಾಡಲಾಗಿದೆ. ಈ ಹಳೆಯ ಮಿತಿ 60 ವರ್ಷಗಳ ಹಿಂದಿನದ್ದಾಗಿತ್ತು. ಅದರಿಂದ ಇದರಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ.

ಇನ್ನು ಸಾಲ ಮತ್ತು ಅದರ ವಸೂಲಾತಿ ಬಗ್ಗೆ ಪ್ರಸ್ತಾಪ ಮಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಾಲವನ್ನು ಉದ್ದೇಶಪೂರ್ವಕವಾಗಿ ಪಾವತಿ ಮಾಡದೇ‌ ಇರುವವರ ವಿರುದ್ದ‌ ಕಠಿಣ ಕ್ರಮ ಕೈಗೊಳ್ಳಲು ಸರಕಾರ ಬದ್ದವಾಗಿದೆ. ಕಳೆದ 5 ವರ್ಷಗಳಲ್ಲಿ ಜಾರಿ ನಿರ್ದೇಶನಾಲಯ (ED) ಬ್ಯಾಂಕ್ ವಂಚನೆ‌ ಸಂಬಂಧಿಸಿದಂತೆ112 ಕ್ಕೂ ಹೆಚ್ಚು ಪ್ರಕರಣಗಳನ್ನು ತನಿಖೆ ಮಾಡಿದೆ. ಈ ಮೊತ್ತ ಹಿಂಪಡೆಯಲು ಬ್ಯಾಂಕ್ ‌ಗಳು ಪ್ರಯತ್ನ ಮಾಡುತ್ತಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇನ್ನು ಬ್ಯಾಂಕುಗಳ ಗಳಿಕೆಗಳ ಬಗ್ಗೆ ಮಾಹಿತಿ ನೀಡಿದ ನಿರ್ಮಲಾ ಸೀತಾರಾಮನ್, ಕಳೆದ‌ ಹಣಕಾಸು ವರ್ಷದಲ್ಲಿ ‌ಬ್ಯಾಂಕುಗಳು ಇದುವರೆಗಿನ ಅತ್ಯಧಿಕ 1.41 ಲಕ್ಷ ಕೋಟಿ‌ರೂ ಲಾಭ ಗಳಿಸಿದೆ ಎಂದು ಅವರು ಹೇಳಿದ್ದಾರೆ. ಈ ವರ್ಷದಲ್ಲಿ ಇದು ಇನ್ನಷ್ಟು ಹೆಚ್ಚಾಗಲಿದೆ‌‌ ಎಂದು ಮಾಹಿತಿ ನೀಡಿದ್ದಾರೆ.

ನಗದು ಮತ್ತು ಸ್ಥಿರ ಠೇವಣಿಗಳಿಗೆ ಏಕಕಾಲದಲ್ಲಿ ಬಹು ನಾಮಿನಿಗಳನ್ನು ಸೇರಿಸಲು ಅವಕಾಶ ನೀಡಲಾಗಿದೆ. ಲಾಕರ್ ಸೌಲಭ್ಯಗಳಲ್ಲಿ‌ ಕೂಡಾ ಈ ನಿಯಮ ಅನ್ವಯಿಸಲಿದೆ. ಇದು ಈಗಾಗಲೇ ಇನ್ಸೂರೆನ್ಸ್ ಹಾಗು ಇತರ ಹಣಕಾಸು ಯೋಜನೆಯಲ್ಲಿ ಜಾರಿಯಲ್ಲಿದೆ. ಈ ಅಗತ್ಯ ಬದಲಾವಣೆ ಮಾಡಲು ಬೇಕಾಗಿರುವ ಎಲ್ಲಾ ತಿದ್ದುಪಡಿಗಳನ್ನು ಮಾಡಲು 8 ತಂಡಗಳು ಒಟ್ಟಾಗಿ ಕೆಲಸ ಮಾಡಿದೆ‌ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Leave a Reply

Your email address will not be published. Required fields are marked *