GMS: 10 ವರ್ಷದ ಜನಪ್ರಿಯ ಯೋಜನೆಗೆ ಮುಕ್ತಾಯ ಹಾಡಿದ ಮೋದಿ ಸರಕಾರ. ಆದರೆ ಈ ಯೋಜನೆ ಸೌಲತ್ತು ಆದರೂ ನೀವು ಪಡೆಯಬಹುದು.
ಮಾರುಕಟ್ಟೆ ಪರಿಸ್ಥಿತಿ ಸುಧಾರಿಸುತ್ತಿರುವದರಿಂದ ಕೇಂದ್ರ ಸರಕಾರ Gold Monetize Scheme (GMS) ಅನ್ನು ಭಾಗಷಃ ಮುಕ್ತಾಯ ಗೊಳಿಸಲು ನಿರ್ಧಾರ ಮಾಡಿದೆ. ಕೇಂದ್ರ ಹಣಕಾಸು ಸಚಿವಾಲಯ ಮಂಗಳವಾರ ಈ ಮಾಹಿತಿಯನ್ನು ನೀಡಿದೆ. ಆದರೂ ಬ್ಯಾಂಕ್ ಗಳಲ್ಲಿ ಅಲ್ಪಾವಧಿಯ ಅಂದರೆ 1 ರಿಂದ 3 ವರ್ಷಗಳವರೆಗಿನ ಈ ಯೋಜನೆಯ ಲಾಭ ನೀವು ಪಡೆಯಬಹುದು.
ಹತ್ತು ವರ್ಷಗಳ ಹಿಂದೆ ಪ್ರಾರಂಭವಾಗಿದ್ದ ಅಂದರೆ ಸೆಪ್ಟೆಂಬರ್ 15, 2015 ರಂದು (GMS) ಈ ಯೋಜನೆಯನ್ನು ಕೇಂದ್ರ ಸರಕಾರ ಘೋಷಣೆ ಮಾಡಿತ್ತು. ಇದರ ಮುಖ್ಯ ಉದ್ದೇಶ ಚಿನ್ನ ಆಮದಿನ ಮೇಲೆ ವಿದೇಶದ ಮೇಲೆ ನಿರ್ಭರತೆ ಕಡಿಮೆ ಮಾಡುವುದಾಗಿತ್ತು. ಭಾರತದ ಮನೆಗಳಲ್ಲಿ ಹಾಗು ದೇಶದ ಇತರ ಸಂಸ್ಥೆಗಳಲ್ಲಿ ಅಂದರೆ ದೇವಾಲಯ ಹಾಗು ಇತರ ಕಡೆ ಇರುವ ಚಿನ್ನವನ್ನು ಉತ್ಪಾದಕ ಉದ್ದೇಶಗಳಿಗಾಗಿ ಬಳಸಿಕೊಳ್ಳುವುದು ಆಗಿತ್ತು.
ಈ GMS ಯೋಜನೆಯಡಿಯಲ್ಲಿ ಸರಕಾರ ನವೆಂಬರ್ 2024 ರ ವರೆಗೆ ಸುಮಾರು 31,164 ಕೆಜಿ ಚಿನ್ನವನ್ನು ಸಂಗ್ರಹ ಮಾಡಿತ್ತು. ಇದರಲ್ಲಿ ಅಲ್ಪಾವದಿ ಠೇವಣಿ 7509 ಕೆಜಿ ಹಾಗು ಮಧ್ಯಾವಧಿ ಠೇವಣಿ 9728 ಕೆಜಿ ಮತ್ತು ಧೀರ್ಘವಾಧಿ ಠೇವಣಿ 13,926 ಕೆಜಿ ಗಳಷ್ಟಾಗಿತ್ತು. ಈ ಯೋಜನೆಯಡಿ ಸುಮಾರು 5,693 ಠೇವಣಿದಾರರು ಭಾಗವಹಿಸಿದ್ದರು. ಜನವರಿ 1, 2024 ರಂದು 10 ಗ್ರಾಂ ಚಿನ್ನದ ಬೆಲೆ 63,920 ರಷ್ಟಿತ್ತು. ಇದು ಸುಮಾರು 41% ರಷ್ಟು ಏರಿಕೆ ಕಂಡು ಮಾರ್ಚ್ 25, 2025 ರ ಹೊತ್ತಿಗೆ ಪ್ರತಿ 10 ಗ್ರಾಂ ಗೆ 90,450 ರೂ ಗಳಷ್ಟಾಗಿದೆ.

ಈ GMS ಯೋಜನೆಯಡಿಯಲ್ಲಿ ಅಲ್ಪಾವದಿ ಯೋಜನೆ ಅಂದರೆ 1 ರಿಂದ 3 ವರ್ಷಗಳವರೆಗೆ ಇರುತ್ತದೆ. ಮಧ್ಯಮಾವಧಿ ಯೋಜನೆ 5 ರಿಂದ 7 ವರ್ಷಗಳು ಹಾಗು ಧೀರ್ಘವಾಧಿ ಯೋಜನೆ 12-15 ವರ್ಷಗಳವರೆಗೆ ಇರಲಿದೆ. ಇದರಲ್ಲಿ ಸರಕಾರ ಇನ್ನು ಮುಂದೆ ಕೇವಲ ಅಲ್ಪಾವದಿ ಅಂದರೆ 1 ರಿಂದ 3 ವರ್ಷಗಳ ವರೆಗಿನ ಯೋಜನೆ ಅಷ್ಟೇ ಮುಂದುವರೆಸಲಿದೆ. ಈಗಾಗಲೇ ಈ ಯೋಜನೆಯಲ್ಲಿ ಇರುವ ಠೇವಣಿಗಳನ್ನು ಅವಧಿ ಪೂರ್ಣಗೊಳಿಸುವ ತನಕ ಮುಂದುವರೆಯಲಿದೆ ಎಂದು ಸಚಿವಾಲಯ ತಿಳಿಸಿದೆ.