Sahakar Taxi : ಟ್ಯಾಕ್ಸಿ ಡ್ರೈವರ್ಗಳಿಗೆ ವಾರವಾಗಲಿದೆ ಕೇಂದ್ರ ಸರಕಾರ ಘೋಷಿಸಿದ ಹೊಸ ಯೋಜನೆ. ಓಲಾ ಹಾಗು ಉಬರ್ ಗಳಿಗೆ ಶಾಕ್ ನೀಡಿದ ಅಮಿತ್ ಶಾ.
Sahakar Taxi service : ಕೇಂದ್ರ ಸರಕಾರ ಮಾರ್ಚ್ 27, 2025 ರಂದು ಸಂಸತ್ತಿನಲ್ಲಿ ದೊಡ್ಡ ಘೋಷಣೆ ಮಾಡಿದೆ. ಸಹಕಾರಿ ಟ್ಯಾಕ್ಸಿ ಸೇವೆ ಪ್ರಾರಂಭಿಸಲು ಸಜ್ಜು ನಡೆಸಿದೆ. ಬೈಕ್, ಕ್ಯಾಬ್ ಹಾಗು ಆಟೋ ಸೇವೆಗಳನ್ನು ಒದಗಿಸುವುದು ಇದರ ಮುಖ್ಯ ಉದ್ದೇಶ. ಸರಕಾರದ ಅಧೀನದಲ್ಲಿರುವ ಈ ಸೇವೆ ಈಗಾಗಲೇ ಚಾಲ್ತಿಯಲ್ಲಿರುವ ಓಲಾ, ಉಬರ್ ಹಾಗು ರಾಪಿಡೊ ನಂತಹ ಉದ್ಯಮಗಳಿಗೆ ಸವಾಲೊಡ್ಡಲಿದೆ. ಈ ಸೇವೆ ಲಾಭವು ಯಾವುದೇ ಕೈಗಾರಿಕೆ ಹಾಗು ಬಿಸಿನೆಸ್ ಮ್ಯಾನ್ ಗಳಿಗೆ ಹೋಗದೆ ನೇರವಾಗಿ ಚಾಲಕರಿಗೆ ಹೋಗುತ್ತದೆ ಎಂದು ಅಮಿತ್ ಶಾ ಹೇಳಿದ್ದಾರೆ.
Read this also: GMS: 10 ವರ್ಷದ ಜನಪ್ರಿಯ ಯೋಜನೆಗೆ ಮುಕ್ತಾಯ ಹಾಡಿದ ಮೋದಿ ಸರಕಾರ. ಆದರೆ ಈ ಯೋಜನೆ ಸೌಲತ್ತು ಆದರೂ ನೀವು ಪಡೆಯಬಹುದು.
ಕೇಂದ್ರ ಸರಕಾರದ ಈ ಯೋಜನೆಯ ಉದ್ದೇಶ ಈಗಾಗಲೇ ಖಾಸಗಿ ಯಾಗಿ ಇರುವ ಕಂಪನಿ ಗಳ ಪರ್ಯಾಯವಾಗಿ ಸಾರಿಗೆ ಸೇವೆಯನ್ನು ಒದಗಿಸುವುದು ಆಗಿದೆ. ಇದರಿಂದ ಬರುವ ಆದಾಯ ನೇರವಾಗಿ ಚಾಲಕರಿಗೆ ಹೋಗುತ್ತದೆ. ಇಲ್ಲದೆ ಇದ್ದರೆ ಈ ಮಧ್ಯವರ್ತಿ ಕಂಪನಿಗಳಿಗೆ ಹೋಗುತಿತ್ತು ಖಾಸಗಿ ಕ್ಷೇತ್ರದಲ್ಲಿ. Sahakar Taxi ಸೇವೆ ದೇಶಾದ್ಯಂತ ದ್ವಿಚಕ್ರ ವಾಹನ, ರಿಕ್ಷಾ ಹಾಗು ಕಾರ್ ಟ್ಯಾಕ್ಸಿ ಗಳನ್ನೂ ನೊಂದಾಯಿಸಲು ಅವಕಾಶ ನೀಡುತ್ತದೆ. ಸರಕಾರ ಕಳೆದ ಮೂರೂ ವರ್ಷಗಳಿಂದ ಇದಕ್ಕಾಗಿ ಕೆಲಸ ಮಾಡಿದೆ. ಇದನ್ನು ಮುಂಬರುವ ತಿಂಗಳುಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಅಮಿತ್ ಶಾ ಹೇಳಿದ್ದಾರೆ.

Sahakar Taxi ಅಲ್ಲದೆ ದೇಶದ ಜನರಿಗೆ ವಿಮ ಸೇವೆಗಳನ್ನು ಒದಗಿಸುವ ಸಹಕಾರಿ ವಿಮಾ ಕಂಪನಿ ಗಳನ್ನೂ ರಚಿಸಲಾಗುವುದು. ಅಲ್ಪಾವಧಿಯಲ್ಲೇ ಇದು ಖಾಸಗಿ ವಲಯದ ಅತಿದೊಡ್ಡ ವಿಮಾ ಕಂಪನಿ ಆಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಕೇಂದ್ರ ಸರಕಾರದ ಈ ಯೋಜನೆಗೂ ಮೊದಲು ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಯಾತ್ರಿ ಸತಿ ಎನ್ನುವ ಹೆಸರಿನಲ್ಲಿ ಟ್ಯಾಕ್ಸಿ ಸೇವೆ ಇದೆ. ಮೊದಲು ಕೋಲ್ಕತ್ತಾದಲ್ಲಿ ಮಾತ್ರ ಈ ಸೇವೆ ಇತ್ತು ಇದೀಗ ಕೋಲ್ಕತ್ತಾದ ಇನ್ನು ಕೆಲವು ನಗರಗಳನ್ನು ವಿಸ್ತರಿಸಿಕೊಂಡಿದೆ. ಇದಲ್ಲದೆ ಕೇರಳದಲ್ಲಿ 2002 ರಲ್ಲಿ ಕೇರಳ ಸವಾರಿ ಎನ್ನುವ ಆನ್ಲೈನ್ ಟ್ಯಾಕ್ಸಿ ಸೇವೆ ಪ್ರಾರಂಭವಾಗಿತ್ತು. ಆದರೆ ಈ ಸೇವೆಯನ್ನು ಬಳಕೆ ಮಾಡುವವರ ಸಂಖ್ಯೆ ಕಡಿಮೆ ಇದ್ದಿದ್ದರಿಂದ ಈ ಸೇವೆ ಸ್ಥಗಿತಗೊಳಿಸಲಾಗಿತ್ತು. ಇದೀಗ ಪರಿಷ್ಕ್ರಿತ ಸಾಫ್ಟ್ವೇರ್ ಹಾಗು ದರಗಳೊಂದಿಗೆ ಮತ್ತೊಮ್ಮೆ ಮಾರುಕಟ್ಟೆಗೆ ಬರಲಿದೆ.