File Your Income tax return Now!

Connect with us for filing your income tax and GST filing and all sorts of statutory requirement.

Your Attractive Heading

Call To Action

Connect with us for your income tax return and GST filing. The price starting from Just Rs. 500/

Vibrant scene of a large crowd gathered for Ramadan prayers at Jama Masjid during a stunning sunset.

ತಂತ್ರಜ್ಞಾನಗಳು ಬದಲಾವಣೆಯಾಗುತ್ತಿದ್ದ ಹಾಗೆ ಜನರು ಕೂಡ ತಮ್ಮ ಜೀವನ ಶೈಲಿಯನ್ನು ಬದಲಾಯಿಸುತ್ತಿದ್ದಾರೆ. ನಾಯಕ ಜೀವನ ಶೈಲಿಯಿಂದ ಆಧುನಿಕತೆಗಳಿಗೆ ಜನರು ಬದಲಾವಣೆಗೊಳ್ಳುತ್ತಿದ್ದಾರೆ. ಹಲವಾರು ಉದಾಹರಣೆಗಳನ್ನು ನಾವು ದೈನಂದಿನ ಜೀವನದಲ್ಲಿ ಕಾಣಬಹುದು. ಅಂತದ್ದೇ ಮಹತ್ತರ ಬದಲಾವಣೆಗೆ ಮಹಾರಾಷ್ಟ್ರ ಸಾಕ್ಷಿಯಾಗಿದೆ. ಈಗ ಮಸೀದಿಗಳಲ್ಲಿ ನಡೆಯುವ ಅಜಾನ್ ವೇಳೆ ಧ್ವನಿ ವರ್ಧಕಗಳನ್ನು ಬಳಸದೆ ಇರುವಂತೆ ನಿರ್ಧಾರ ಮಾಡಿದೆ. ಬಾಂಬೆ ಹೈಕೋರ್ಟ್ ಶಬ್ದದ ಮಿತಿಗೆ ಕಡಿವಾಣ ಹಾಕಿದೆ. ಹಗಲು ಹೊತ್ತಿಗೆ 55 ಡಿಸಿಬಲ್ ರಾತ್ರಿಯಲ್ಲಿ 45 ಡೆಸಿಬಲ್ ಮೀರದೆ ಇರುವಂತೆ ಕೋರ್ಟ್ ಆದೇಶ ಹೊರಡಿಸಿದೆ. ಧ್ವನಿ ವರ್ಧಕ ಬಳಕೆಗಳನ್ನು ನಿಷೇಧ ಮಾಡಿಲ್ಲವಾದರೂ ಸ್ವಲ್ಪ ಮಟ್ಟಿಗೆ ಬದಲಾವಣೆಯ ಹಾದಿಯನ್ನು ತೋರಿದೆ.

ಇದೀಗ ಜನಗಳಿಗೆ ಯಾವುದೇ ರೀತಿಯ ತೊಂದರೆ ಆಗದೆ ಇರಲಿ ಎಂದು ಒಂದು ಮೊಬೈಲ್ ಆಪನ್ನು ಆವಿಷ್ಕಾರ ಮಾಡಿದ್ದು. ಅಜಾನ್ ಆಪ್ ಅನ್ನ ಲಾಂಚ್ ಮಾಡಲಾಗಿದೆ.ಆಜಾನ್ ವೇಳೆಯಲ್ಲಿ ಮನೆಯಲ್ಲಿ ಇದು ಆಜಾನ್ ಕೇಳುವ ಸೌಲಭ್ಯ ಕೊಡುತ್ತದೆ. ಮುಂಬೈ ಮೂಲದ ಹೊಸ ಕಂಪನಿ ಆಪ್ ಅನ್ನು ಅಭಿವೃದ್ಧಿಪಡಿಸಿದ್ದು. ಇದನ್ನು ಆಯಾ ಮಸೀದಿಗಳ ಮೂಲಕ ಸದಸ್ಯತ್ವವನ್ನು ಪಡೆದುಕೊಳ್ಳಬೇಕು. ಆಪ್ ಮೂಲಕ ಆಜಾನ್ ವೇಳೆಯಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕ ಪ್ರಾರ್ಥನೆಯನ್ನು ಕೇಳಬಹುದು.

ಮುಂಬೈ ನಲ್ಲಿ ಈಗಾಗಲೇ ಆರು ಮಸೀದಿಗಳಿಂದ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ತಂತ್ರಜ್ಞಾನದೊಂದಿಗೆ ಜನರು ತಮ್ಮ ಜೀವನ ಶೈಲಿಯನ್ನು ಒಗ್ಗಿಸಿಕೊಳ್ಳುತ್ತಿದ್ದಾರೆ. ರಂಜಾನ್ ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ಈ ಆಪ್ ಬಹಳಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ಮುಂಬೈ ಮಸೀದಿಯ ಮೌಲ್ವಿ ಒಬ್ಬರು ಹೇಳಿದ್ದಾರೆ. ಅದೇ ರೀತಿಯಲ್ಲಿ ಅಳವಡಿಸಿದ್ದ ದೊಡ್ಡ ದೊಡ್ಡ ಧ್ವನಿವರ್ಧಕಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ ಎಂದು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

By Admin

News junkie, love to write political, current affairs, financial literate and general knowledge content.

Leave a Reply

Your email address will not be published. Required fields are marked *