File Your Income tax return Now!

Connect with us for filing your income tax and GST filing and all sorts of statutory requirement.

Your Attractive Heading

Call To Action

Connect with us for your income tax return and GST filing. The price starting from Just Rs. 500/

ಭಾರತದ ಕಣಕಣದಲ್ಲೂ ಹಿಂದೂ ಧರ್ಮ ಹಾಸು ಹೊಕ್ಕಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಅದಕ್ಕೆ ಅನುಗುಣವಾಗಿ ವಿಭಿನ್ನ ಆಚರಣೆಗಳು ನಡೆಯುತ್ತದೆ. ಭಾರತದ ದಕ್ಷಿಣದ ಕಡೆಗೆ ಬಂದಾಗ ಈ ದೇವರು ದೈವಗಳು ಎಂಬ ನಂಬಿಕೆ ಅತಿ ಹೆಚ್ಚು. ಇನ್ನು ಕೇವಲ ಕರ್ನಾಟಕದ ವಿಷಯ ಬಂದಾಗ ಉಡುಪಿ ಮತ್ತು ಮಂಗಳೂರಿನಲ್ಲಿ ಅತಿ ಹೆಚ್ಚು ದೇವಾಲಯಗಳು ಇದೆ. ಈ ಭಾಗವನ್ನು ತುಳುನಾಡು ಎಂದು ಕೂಡ ಕರೆಯುತ್ತಾರೆ. ದೇವರುಗಳು ನಂಬಿಕೆಯ ಮೇಲೆ ಈ ಪುಣ್ಯದ ಮಣ್ಣು ಇದೆ ಎಂದು ಹೇಳುತ್ತಾರೆ. ಅಂತಹುದೇ ಒಂದು ಪುಣ್ಯಕ್ಷೇತ್ರದ ಬಗ್ಗೆ ನಾವಿಂದು ತಿಳಿದುಕೊಳ್ಳುತ್ತಿದ್ದೇವೆ.

ಶಿಲಾಮಯ ರೂಪ ಪಡೆದು ಉದ್ಭವ ಗೊಂಡ ದೇವಿಯ ಕಥೆ. ಈ ಶಿಲೆಯು ಕಮಲದ ಆಕಾರದಲ್ಲಿದೆ ಆ ಕಾರಣದಿಂದಾಗಿ ಈ ಪುಣ್ಯಕ್ಷೇತ್ರವನ್ನು ಕಮಲಶಿಲೆ ಎಂದು ಹೇಳುತ್ತಾರೆ. ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ ಇದಾಗಿದೆ. ಕಮಲದ ಆಕಾರದಲ್ಲಿ ಉದ್ಭವ ಗೊಂಡ ಕಾರಣ ಈ ಕ್ಷೇತ್ರವನ್ನು ಕಮಲಶಿಲೆ ಎಂದು ಕರೆಯುತ್ತಾರೆ. ಬಹಳಷ್ಟು ಕಾರಣಿಕ ಕ್ಷೇತ್ರವಾದ ಈ ಪುಣ್ಯಕ್ಷೇತ್ರವು ಭಕ್ತರ ನೋವು ದೂರ ಮಾಡಿದೆ. ಕಷ್ಟ ಎಂದು ಬಂದು ಶರಣಾದ ಭಕ್ತರ ಪಾಲಿಗೆ ತಾಯಿಯಾಗಿ ಓಲಿದಿದ್ದಾಳೆ. ಈ ಕ್ಷೇತ್ರವು ಮದುವೆ ವಿಚಾರ ಸಂಬಂಧ ಕಲಹ, ಸಂತಾನ ಭಾಗ್ಯ ವಿಚಾರ ಮಾನಸಿಕ ನೆಮ್ಮದಿ ಇಂತಹ ಸಮಸ್ಯೆಗಳು ಇಲ್ಲಿ ಬಗೆಹರಿದಿದೆ. ಕುಬ್ಜ ನದಿ ತೀರದಲ್ಲಿರುವ ಈ ಭ್ರಮೆ ದುರ್ಗಾಪರಮೇಶ್ವರಿ ದೇವಸ್ಥಾನ. ಪಶ್ಚಿಮ ಘಟ್ಟ ತಪ್ಪಲಿನಲ್ಲಿರುವ ಈ ದೇವಸ್ಥಾನ ಪ್ರಕೃತಿ ಮತ್ತು ಭಕ್ತಿಯ ಸಮಾಗಮವಾಗಿದೆ.

ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಕುಬ್ಜ ನದಿ ಉಕ್ಕಿ ಹರಿಯುತ್ತಾಳೆ. ವಿಶೇಷ ಅಂದರೆ ನದಿಯು ತನ್ನ ಮಟ್ಟವನ್ನು ಏರಿ ದೇವಸ್ಥಾನದ ಅಂಗಳವನ್ನು ಪ್ರವೇಶಿಸುತ್ತದೆ. ಪ್ರತಿ ವರ್ಷವೂ ಈ ನದಿ ತುಂಬಿ ಹರಿದು ಗರ್ಭಗುಡಿಯಲ್ಲಿರುವ ತಾಯಿ ದುರ್ಗಾಪರಮೇಶ್ವರಿಯ ಪಾದವನ್ನು ಸ್ಪರ್ಶಿಸುತ್ತದೆ. ಇದೊಂದು ಬಹಳ ಅಚ್ಚರಿ ಮತ್ತು ವಿಶೇಷ. ಕುಬ್ಜ ನದಿಯು ಇಲ್ಲಿ ಇರಲು ಕೂಡ ಒಂದು ಕಾರಣ ಇದೆ. ಕುಬ್ಜ ನದಿಯು ಶಾಪ ಗ್ರಸ್ತ ನದಿ, ಪಾರ್ವತಿ ದೇವಿಯು ಪಿಂಗಳ ಎಂಬ ಸ್ತ್ರೀ ಗೆ ಅವಳ ಅಹಂಕಾರ ದಿಂದ ಕುಬ್ಜಳಾಗಿ ಭೂಮಿಯಲ್ಲಿ ಜನಿಸುವಂತೆ ಶಾಪ ಕೊಡುತ್ತಾಳೆ. ಹಾಗೆ ಹುಟ್ಟಿದ ನದಿಯೇ ಇದು. ಪ್ರತಿ ಬಾರಿ ತಾಯಿ ದುರ್ಗಾಪರಮೇಶ್ವರೀ ಪಾದ ಸ್ಪರ್ಶದಿಂದ ಆಕೆ ಪಾವನಳಾಗುತ್ತಾಳೆ ಎಂದೂ ಪ್ರತಿತಿ ಇದೆ. ಹೀಗೆ ಈ ಸಮಯದಲ್ಲಿ ಈ ನದಿಯಲ್ಲಿ ಪುಣ್ಯ ಸ್ನಾನ ಮಾಡಿದರೆ ಪಾಪ ಪರಿಹಾರ ಆಗುತ್ತದೆ ಎಂಬ ನಂಬಿಕೆ ಕೂಡ ಇದೆ. ಇದೇ ಕಾರಣದಿಂದಾಗಿ ಈ ಕ್ಷೇತ್ರವನ್ನು ಪ್ರಕೃತಿ ಮತ್ತು ಭಕ್ತಿಯ ಸಮ್ಮಿಲಿತ ಕ್ಷೇತ್ರ ಎಂದೂ ಕರೆಯುತ್ತಾರೆ. ಇದು ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನಲ್ಲಿ ಬರುತ್ತದೆ. 365 ದಿನವೂ ಕೂಡ ಅನ್ನದಾನ ಸೇವೆ ಇಲ್ಲಿ ನಡೆಯುತ್ತದೆ.

By Admin

News junkie, love to write political, current affairs, financial literate and general knowledge content.

Leave a Reply

Your email address will not be published. Required fields are marked *