Personal Loan ಪಡೆಯುವುದಕ್ಕಿಂತ ಮೊದಲು ಈ ಮಾಹಿತಿ ಬಗ್ಗೆ ಖಚಿತಪಡಿಸಿಕೊಳ್ಳಿ. ಇಲ್ಲವಾದರೆ ಸಾಲ ನಿಮ್ಮ ಮೇಲೇನೆ ಹೊರೆಯಾಗುತ್ತದೆ.
ಪರ್ಸನಲ್ ಲೋನ್ (Personal Loan) ಎಲ್ಲರಿಗು ಗೊತ್ತಿರುವ ವಿಷಯ. ಎಲ್ಲರು ಕೂಡ ತೀರಾ ಅಗತ್ಯ ಇದ್ದರೆ ಮಾತ್ರನೇ ಈ ಪರ್ಸನಲ್ ಲೋನ್ ಪಡೆಯುತ್ತಾರೆ. ಅಲ್ಲದೆ ಯಾರು ಕೂಡ ಪರ್ಸನಲ್ ಲೋನ್ ಪಡೆಯಿರಿ ಎಂದು ಸಲಹೆ ಕೂಡ ಕೊಡುವುದಿಲ್ಲ. ಕಾರಣ ಈ ಪರ್ಸನಲ್ ಲೋನ್ ಮೇಲೆ ಬ್ಯಾಂಕ್ ಗಳು ಹಾಗು ಇತರ ಹಣಕಾಸು ಸಂಸ್ಥೆಗಳು ಹಾಕುವ ಬಡ್ಡಿ ದರ. ಹಾಗಾದರೆ ತೀರಾ ಅವಶ್ಯಕತೆ ಬಿದ್ದಾಗ ಅನೇಕ ಬ್ಯಾಂಕ್ ಗಳು ಪರ್ಸನಲ್ ಲೋನ್ ನೀಡುತ್ತದೆ. ಅವಾಗ ನೋಡಬೇಕಾದ ಪ್ರಮುಖ ವಿಷಯಗಳು ಯಾವುದು?
1. ಪ್ರೊಸೆಸಿಂಗ್ ಫೀಸ್: ಸಾಲವನ್ನು ಕೊಡುವಾಗ ಕೆಲ ಬ್ಯಾಂಕ್ ಗಳು ಹಾಗು ಹಣಕಾಸು ಸಂಸ್ಥೆಗಳು ಹಿಡನ್ ಚಾರ್ಜಸ್ ಹಾಕುತ್ತದೆ. ಈ ಪ್ರೊಸೆಸಿಂಗ್ ಫೀಸ್ (Processing Fees) ಗಳು 0.50% ರಿಂದ 2.50% ರ ವರೆಗೆ ಇರುತ್ತದೆ. ಇದರಲ್ಲಿ ಯಾವ ಸಂಸ್ಥೆಗಳು ಕಡಿಮೆ ದರದಲ್ಲಿ ಅಂದರೆ 0.5 ರಿಂದ 2.50 ರ ಒಳಗಡೆ ಫೀಸ್ ಹಾಕುತ್ತದೆ ಅವುಗಳನ್ನು ಆಯ್ಕೆ ಮಾಡುವುದು ಸೂಕ್ತ. ಹಾಗೇನೇ ನೀವು ಬ್ಯಾಂಕ್ ಬಳಿ ಸ್ವಲ್ಪ ಮಾತುಕತೆ ನಡೆಸಿದರೆ ಈ ಪ್ರೊಸೆಸಿಂಗ್ ಫೀಸ್ ಕೂಡ ಹಾಕುವುದಿಲ್ಲ.
2. ವಯಕ್ತಿಕ ಸಾಲ ಅಥವಾ ಪರ್ಸನಲ್ ಲೋನ್ ಪಡೆಯುವಾಗ ಗಮನಿಸಬೇಕಾದ ಇನ್ನೊಂದು ಮುಖ್ಯ ಅಂಶವೆಂದರೆ ಅದು ಬಡ್ಡಿ ದರ. ಯಾವ ಬ್ಯಾಂಕ್ ಕಡಿಮೆ ಬಡ್ಡಿ ಹಾಕುತ್ತದೆಯೋ ಆ ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ತೆಗೆದುಕೊಳ್ಳುವುದು ಉತ್ತಮ.
3. ಡಿಜಿಟಲೀಕರಣ: ಇಂದಿನ ಕಾಲದಲ್ಲಿ ಎಲ್ಲವು ಮೊಬೈಲ್ ಮುಕಾಂತರ ಅಥವಾ ಆನ್ಲೈನ್ ಮುಕಾಂತರ ಪ್ರಕ್ರಿಯೆ ನಡೆಯುತ್ತದೆ. ಹಾಗೇನೇ ಇಂದು ಕೆಲ fintech ಕಂಪನಿಗಳು ಹಾಗು NBFC ಗಳು ಆನ್ಲೈನ್ ಅಲ್ಲಿ ಪಾನ್ ಕಾರ್ಡ್ ಬಿಟ್ಟು ಯಾವುದೇ ಡಾಕ್ಯುಮೆಂಟ್ ಇಲ್ಲದೆ ಕ್ಷಣಾರ್ಧದಲ್ಲಿ ಪರ್ಸನಲ್ ಲೋನ್ ಕೊಡುತ್ತದೆ. ಇಂತಹ ಸಂಧರಭದಲ್ಲಿ ಬ್ಯಾಂಕ್ ಗೆ ಹೋಗಿ ಕಾಯುವುದಕ್ಕಿಂತ ಇಂತಹ ಹಣಕಾಸು ಸಂಸ್ಥೆಗಳು ಸೂಕ್ತವಾಗಿರುತ್ತದೆ.
4. ಅವಧಿ ಪೂರ್ವ ಸಾಲ ಮರುಪಾವತಿ (Pre Closure Charges) ಮಾಡುವ ಯೋಚನೆ ನಿಮ್ಮ ಬಳಿ ಇದ್ದಾರೆ ಸಾಲ ತೆಗೆದುಕೊಳ್ಳುವ ಮೊದಲು ಚಾರ್ಜಸ್ ಕಟ್ಟಬೇಕೇ ಎಂದು ಸ್ಪಷ್ಟ ಪಡಿಸಿಕೊಳ್ಳಿ. ಸಾಲವನ್ನು ಅವರ ಹೇಳಿದ ಸಮಯದ ಒಳಗೇನೇ ತೀರಿಸಿದರೆ ಅವರು ಅದಕ್ಕೆ ಕೂಡ ಎಕ್ಸ್ಟ್ರಾ ಚಾರ್ಜಸ್ ಹಾಕುತ್ತಾರೆ. ಒಂದ ಚಾರ್ಜ್ ಹಾಕದ ಬ್ಯಾಂಕ್ ಬಳಿ ಸಾಲ ತೆಗೆದುಕೊಳ್ಳಿ ಅಥವಾ ಅಂತಹ ಸಂಸ್ಥೆ ಬಳಿ ಸಾಲ ಪಡೆಯುವುದನ್ನು ಬಿಟ್ಟು ಬಿಡಿ.
5. ಇನ್ನು ಪರ್ಸನಲ್ ಲೋನ್ ಪಡೆಯುವ ಮುನ್ನ ಅವಸರ ಪಡಬೇಡಿ. ಈ ಬ್ಯಾಂಕ್ ಹಾಗು ಇತರ fintech ಗಳು ನೀಡುವ ಟರ್ಮ್ಸ್ ಅಂಡ್ ಕಂಡಿಷನ್ಸ್ ಅನ್ನು ಪೂರ್ತಿ ಓದಿಕೊಳ್ಳಿ ಆಮೇಲೆ ಸಮಸ್ಯೆ ಬಂತೆಂದು ತಲೆ ಮೇಲೆ ಕೈ ಕಟ್ಟಿ ಕೂರಬೇಕಾಗುತ್ತದೆ. ಇದಲ್ಲದೆ ಕಸ್ಟಮರ್ ಸಪೋರ್ಟ್ ಇರುವ ಬ್ಯಾಂಕ್ ಆನ್ ಬಳಸಿಕೊಳ್ಳಿ. ನಿಮಗೆ ಯಾವುದೇ ಮಾಹಿತಿ ಬೇಕಾಗಿದ್ದಾರೆ ಅವರು ಪೂರ್ತಿ ತಿಳಿಸುವ ಬ್ಯಾಂಕ್ ಗಳನ್ನೇ ಆಯ್ಕೆ ಮಾಡಿಕೊಳ್ಳಿ.