ಪ್ರತಿ ತಿಂಗಳು ಉದ್ಯೋಗಿಯ ಸಂಬಳದ ಸ್ವಲ್ಪ ಭಾಗ PF ಖಾತೆಗೆ ಗೆ ಜಮಾವಣೆ ಮಾಡಲಾಗುತ್ತದೆ. ಈ ಉಳಿತಾಯವನ್ನು EPFO ನಿಯಂತ್ರಣ ಮಾಡುತ್ತದೆ. ಠೇವಣಿ ಇಟ್ಟ ಉಳಿತಾಯದ ಹಣದ ಜೊತೆಗೆ ಬಡ್ಡಿಯನ್ನು ಕೂಡ ಕಾಲ ಕಾಲಕ್ಕೆ ಜಮಾವಣೆ EPFO ಮಾಡುತ್ತದೆ.
ಮಾಧ್ಯಮ ವರದಿಗಳ ಪ್ರಕಾರ EPFO ನಿಂದ ಉಳಿತಾಯದ ಮೇಲಿನ ಬಡ್ಡಿಯನ್ನು ವರ್ಷಾಂತ್ಯಕ್ಕೆ ಅಂದರೆ ಜೂನ್ ನಿಂದ ಆಗಸ್ಟ್ ತಿಂಗಳ ನಡುವೆ ನೀಡಲಾಗುತ್ತದೆ. PF ಮೇಲಿನ ಬಡ್ಡಿಯನ್ನು ಮಾಸಿಕ ಆಧಾರದಲ್ಲಿ ಲೆಕ್ಕ ಮಾಡಲಾಗುತ್ತದೆ. ವಾರ್ಷಿಕವಾಗಿ ಇದನ್ನು ಗ್ರಾಹಕರ ಖಾತೆಗೆ ಜಮಾವಣೆ ಮಾಡಲಾಗುತ್ತದೆ. ಒಂದೇ ಬಾರಿ ನಿಮಗೆ ಬಡ್ಡಿ ಹಣ ಜಮಾವಣೆ ಆಗುತ್ತದೆ ಎಂದು ಹೇಳಬಹುದು. ನಿಮ್ಮ ಖಾತೆಗೆ ಬಡ್ಡಿ ಬಂದಿದೆಯೇ ಇಲ್ಲವೇ ಎಂದು ಹೇಗೆ ಕಂಡು ಹಿಡಿಯುವುದು?

- ವೆಬ್ಸೈಟ್ ನಿಂದ ಪತ್ತೆ ಹಚ್ಚಬಹುದು- ಮೊದಲು ನೀವು EPFO ವೆಬ್ಸೈಟ್ ಗೆ ಹೋಗಿ. Employee ಸೆಕ್ಷನ್ ಗೆ ಹೋಗಿ. ಇಲ್ಲಿ ಮೆಂಬರ್ ಪಾಸುಬೂಕ್ ಕ್ಲಿಕ್ ಮಾಡಿ. ನಿಮ್ಮ ಯೂಸರ್ ಐಡಿ ಅಂದರೆ UAN ನಂಬರ್ ನಿಂದ ಪಾಸ್ವರ್ಡ್ ಹಾಕಿ ಲಾಗಿನ್ ಆಗಿ. ಇಲ್ಲಿ ಜಮಾವಣೆ ಆದ ಎಲ್ಲ ಟ್ರಾನ್ಸಾಕ್ಷನ್ ದಾಖಲಾಗಿ ಇರುತ್ತದೆ.
2. UMANG ಮೊಬೈಲ್ ಅಪ್ಲಿಕೇಶನ್- ಇಲ್ಲಿ ಕೂಡ ನೀವು EPFO ಗೆ ಕ್ಲಿಕ್ ಮಾಡಿ ಅಲ್ಲಿ ಪಾಸ್ಬುಕ್ ಗೆ ಕ್ಲಿಕ್ ಮಾಡಿದ ನಂತರ UAN ಹಾಗು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ. ಇಲ್ಲಿ ಕೂಡ ನಿಮ್ಮ ಪಸುಬೂಕ್ ಟ್ರಾನ್ಸಾಕ್ಷನ್ ಅನ್ನು ನೋಡಬಹುದು.
3. SMS ಮೂಲಕ- EPFOHO UAN ENG ಎಂದು ಮೆಸೇಜ್ ಅನ್ನು 7738299899 ಗೆ ಸೆಂಡ್ ಮಾಡಿ. ನೀವು ಇಂಗ್ಲಿಷ್ ಬಿಟ್ಟು ಬೇರೆ ಯಾವುದೇ ಭಾಷೆಯಲ್ಲಿ ಬ್ಯಾಲೆನ್ಸ್ ನೋಡಬೇಕೆಂದಾದರೆ ಕೊನೆಯ ಮೂರೂ ಅಕ್ಷರ ಬದಲಾವಣೆ ಮಾಡಿ. ಉದಾಹರಣೆಗೆ ಮೇಲೆ ENG ಅನ್ನುವ ಬದಲು KAN ಎಂದು ಟೈಪ್ ಮಾಡಿ ಉಳಿದದ್ದು ಹಾಗೆಯೆ ಇದ್ದು ಕಳಿಸಿ. ಈ ವಿಧಾನದಲ್ಲಿ ನೀವು ಬ್ಯಾಲೆನ್ಸ್ ಅಷ್ಟೇ ನೋಡಬಹುದು ವಿನಃ ಯಾವುದೇ ಟ್ರಾನ್ಸಾಕ್ಷನ್ ನೋಡಲು ಸಾಧ್ಯವಿಲ್ಲ.