F-35 ಹಾಗು ಇತರ ಯುದ್ಧ ವಿಮಾನಗಳ ಪೈಲಟ್ ಹೆಲ್ಮೆಟ್ ಬೆಲೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಎರೆಡೆರಡು ವಿಶ್ವಯುದ್ಧ ನಡೆದು ಎಲ್ಲ ದೇಶಗಳು ತಮ್ಮ ಅಧಾಯದ ೫೦% ದೇಶದ ಭದ್ರತೆಗೆ ಮೀಸಲು ಇಡುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳಿಂದ ಹಿಡಿದು ಸಣ್ಣ ಪುಟ್ಟ ದೇಶಗಳು ಕೂಡ ದೇಶದ ಭದ್ರತೆ ಹಾಗು ಸಂಶೋಧನೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಪ್ರಪಂಚದಲ್ಲಿ ಅಮೇರಿಕ ದೇಶ ತನ್ನ ದೇಶದ ಭದ್ರತೆಗೆ ಅತಿ ಹೆಚ್ಚು ಮಹತ್ವ ನೀಡುತ್ತಿದು ಮಾರಕ ಅಸ್ತ್ರ ಹಾಗು ಯುದ್ಧ ವಿಮಾನ ತಯಾರಿಕೆಯಲ್ಲಿ ಮುಂದಿದೆ. ಲಾಕ್ಹೀಡ್ ಮಾರ್ಟಿನ್ ಎಫ್ -35 ಫೈಟರ್ ಜೆಟ್‌ಗಳನ್ನು ತಯಾರಿಸಿದ್ದು, ಅತ್ಯಾಧುನಿಕ ಜೆಟ್‌ಗಳಲ್ಲಿ ಒಂದಾಗಿದೆ. ಎಫ್ -35 ಅತ್ಯಾಧುನಿಕ ಮತ್ತು ಅತ್ಯಂತ ದುಬಾರಿ ಫೈಟರ್ ಜೆಟ್ ಅನ್ನು ತಯಾರಿಸುವುದು ಮಾತ್ರವಲ್ಲ, ಅದರ ಘಟಕಗಳು ಮತ್ತು ಬೆಂಬಲ ವ್ಯವಸ್ಥೆಗಳು ಸಹ ಸೂಪರ್ ದುಬಾರಿ ಮತ್ತು ವಿಶಿಷ್ಟವಾಗಿವೆ. ನಾವು ಇಲ್ಲಿ ಎಲ್ಲಾ ಯುದ್ಧ ವಿಮಾನಗಳ ಪೈಲಟ್ಗಳು ಹಾಕುವ ಹೆಲ್ಮೆಟ್ ಬಗ್ಗೆ ಮಾತನಾಡುತ್ತಿದ್ದೇವೆ. ಮತ್ತು ಇದರ ಬೆಲೆ ಸುಮಾರು 2.8 ಕೋಟಿ ರೂ.

2015 ರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಯುಎಸ್ ವಾಯುಪಡೆಯ ಮುಖ್ಯಸ್ಥ ಮಾರ್ಕ್ ಎ. ವೆಲ್ಷ್ III, ಎಫ್ -35 ರ ಪೈಲಟ್ ಹೆಲ್ಮೆಟ್ ಹೆಲ್ಮೆಟ್ಗಿಂತ ಒಂದು ಆಯುಧ ಕೂಡ ಆಗಿದೆ,ಹಿಂದಿನ ಕಾಲದಲ್ಲಿ ಹೆಪ್ಪುಗಟ್ಟುವಿಕೆಯಿಂದ ರಕ್ಷಿಸಿಕೊಳ್ಳಲು ಪೈಲಟ್‌ಗಳು ಒಂದು ಜೋಡಿ ಕನ್ನಡಕಗಳು ಮತ್ತು ಚರ್ಮದ ಟೋಪಿ ಧರಿಸುತ್ತಿದ್ದರು, ಹೊಸ ಎಫ್ -35 ವಿಮಾನದ ಹೆಲ್ಮೆಟ್ ತಾನೇ ಒಂದು ಆಯುಧವಾಗಿದೆ. ಆದ್ದರಿಂದ, ಹೆಲ್ಮೆಟ್‌ನ ಕೆಲವು ವೈಶಿಷ್ಟ್ಯಗಳು ಇಲ್ಲಿವೆ. ಈ ಹೆಲ್ಮೆಟ್ ಅಲ್ಲಿ ಎಕ್ಷ ರೇ ವಿಷನ್ ಇದ್ದು ವಿಮಾನದ ಒಳಗಿರುವ ೬ ಕ್ಯಾಮೆರಾಗಳಿಗೆ ಆಕ್ಸೆಸ್ ನೀಡುತ್ತದೆ, ಪೈಲಟ್ ವಿಮಾನದಲ್ಲಿ ಯಾವ ಕಡೆ ಬಾಗಿದರೂ ಕ್ಯಾಮೆರಾ ಫೀಡ್ ಸ್ಪಷ್ಟ ದೃಷ್ಟಿ ಒದಗಿಸುತ್ತದೆ. ಎಲ್ಲ ಸಮಯದಲ್ಲೂ ಎಷ್ಟೇ ವೇಗವಾಗಿದ್ದರು ತನ್ನ ಟಾರ್ಗೆಟ್ ಬಗ್ಗೆ ನಿಖರ ಮಾಹಿತಿ ನೀಡುತ್ತದೆ. ಇದು ರಾತ್ರಿ ಸಮಯದಲ್ಲೂ ನೋಡಲು ಯಾವುದೇ ತೊಂದರೆ ಆಗುವುದಿಲ್ಲ, ಇದರಲ್ಲಿ ನೈಟ್ ವಿಷನ್ ಕ್ಯಾಮೆರಾ ಅಳವಡಿಸಿದರಿಂದ ಟಾರ್ಗೆಟ್ ಸ್ಪಷ್ಟ ಗೋಚರವಾಗುತ್ತದೆ. ಈ ಹೆಲ್ಮೆಟ್ ಬುಲೆಟ್ ಪ್ರೂಫ್ ಕೂಡ ಆಗಿದೆ.

Comments (0)
Add Comment