ಜೂಲೈ 1 ಹೊಸ ನಿಯಮಗಳೊಂದಿಗೆ (New Rules) ಬರುತ್ತಿದೆ. ಈ ಆರಂಭವು ಅನೇಕ ಬದಲಾವಣೆಯ ನಿಯಮಗಳನ್ನು ಒಳಗೊಂಡಿದೆ. ರೈಲ್ವೆ ಟಿಕೆಟ್ ಬುಕಿಂಗ್, ಕ್ರೆಡಿಟ್ ಕಾರ್ಡ್ ಪಾವತಿ, ಆನ್ಲೈನ್ ವಾಲ್ಲೆಟ್ ಹಾಗು ಪಾನ್ ಕಾರ್ಡ್ ನಂತಹ ಪ್ರಮುಖ ಕೆಲಸಗಳ ನಿಯಮಗಳು ಬದಲಾಗಲಿವೆ.
ತತ್ಕಾಲ್ ಟಿಕೆಟ್ ಬುಕಿಂಗ್
ಮೊದಲನೆಯದಾಗಿ ರೈಲ್ವೆ ಟಿಕೆಟ್ ಬುಕಿಂಗ್ ಬಗ್ಗೆ ಹೇಳುವುದಾದರೆ, ತತ್ಕಾಲ್ ಟಿಕೆಟ್ ಬುಕ್ ಮಾಡುವ ವಿಧಾನ ಬದಲಾಗುತ್ತಿದೆ. irctc ವೆಬ್ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಅಲ್ಲಿ ಬುಕಿಂಗ್ ಮಾಡುವಾಗ ಪ್ರಯಾಣಿಕರ ಮೊಬೈಲ್ ಗೆ ಒಟಿಪಿ ಕಲಿಸಲಾಗುತ್ತದೆ. ಪ್ರಯಾಣಿಕರ ಒಟಿಪಿ ವೆಬ್ಸೈಟ್ ಅಲ್ಲಿ ನಮೂದಿಸುವವರೆಗೆ ಟಿಕೆಟ್ ದೃಡೀಕರಣ ಮಾಡಲಾಗುವುದಿಲ್ಲ. ಈ ಹೊಸ ಪ್ರಕ್ರಿಯೆಯು ಟಿಕೆಟ್ ಗಳ ಸುರಕ್ಷತೆ ಹಾಗು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ.

ಕ್ರೆಡಿಟ್ ಕಾರ್ಡ್ ಸಂಬಂಧಿಸಿದಂತೆ ನಿಯಮಗಳಲ್ಲಿ ಬದಲಾವಣೆ.
ಬ್ಯಾಂಕಿಂಗ್ ವಲಯದಲ್ಲಿ ಮಹತ್ತರ ಬದಲಾವಣೆ (New rules) ಆಗಲಿದೆ. HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಬ್ಯಾಂಕ್ ಕೆಲವು ಹೊಸ ಶುಲ್ಕವನ್ನು ಹಾಕಲಿದೆ. HDFC ಕಾರ್ಡ್ ಬಳಸಿ ಡ್ರೀಮ್ 11, MPL ಹಾಗು ರಮ್ಮಿ ಕಲ್ಚರ್ ನಂತಹ ಗೇಮಿಂಗ್ ಅಪ್ಲಿಕೇಶನ್ ಗಳಲ್ಲಿ ನೀವು ಒಂದು ತಿಂಗಳಲ್ಲಿ 10 ಸಾವಿರಕ್ಕಿಂತ ಹೆಚ್ಚು ಖರ್ಚು ಮಾಡಿದರೆ ನೀವು 1% ಹೆಚ್ಚಿನ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಪೆಟಿಎಂ, ಮೊಬೈಕ್ವಿಕ್, ಫ್ರೀಚಾರ್ಜ್ ನಂತಹ ವಾಲ್ಲೆಟ್ ಗಳಲ್ಲಿ 10 ಸಾವಿರಕ್ಕಿಂತ ಹೆಚ್ಚಿನ ನಗದು ಲೋಡ್ ಮಾಡಿದರೆ 1% ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ.
ಇನ್ನು ಐಸಿಐಸಿಐ ಬ್ಯಾಂಕ್ ನಲ್ಲಿ ತನ್ನ ಗ್ರಾಹಕರಿಗೆ ಏಟಿಎಂ ವಹಿವಾಟುಗಳಿಗೆ ಸಂಬಂದಿಸಿದ ನಿಯಮಗಳನ್ನು ಬದಲಾವಣೆ ಮಾಡಿದೆ. ಐಸಿಐಸಿಐ ಗ್ರಾಹಕರು ಬೇರೆ ಯಾವುದೇ ಬ್ಯಾಂಕ್ ಇಂದ ಪ್ರತಿ ತಿಂಗಳಿಗೆ 3 ಕಿಂತ ಹೆಚ್ಚಿನ ಹಣವನ್ನು ಹಿಂತೆಗೆದುಕೊಂಡರೆ ಪ್ರತಿ ಹೆಚ್ಚುವರಿ ಹಣಕಾಸು ವಹಿವಾಟಿಗೆ 23 ರೂಪಾಯಿ ಮತ್ತು ಹೆಚ್ಚುವರಿ 8.50 ರೂಪಾಯಿ ವಿದಿಸುತ್ತಿದ್ದಾರೆ. ಇದು ಬ್ಯಾಂಕಿಂಗ್ ಸಂಬಂದಿಸಿದ ಹಾಗೆ ವೆಚ್ಚಗಳನ್ನು ಹೆಚ್ಚುಸುತ್ತದೆ.
ಇನ್ನು RBI ಕೂಡ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದಂತೆ ಹೊಸ ನೀತಿಯನ್ನು (New Rules) ಜಾರಿಗೆ ತಂದಿದೆ. ಜೂಲೈ 1 ರಿಂದ ಎಲ್ಲ ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನೂ ಭಾರತ್ ಬಿಲ್ ಪಾವತಿ ವ್ಯವಸ್ಥೆ (BBPS) ಮೂಲಕ ಮಾತ್ರ ಪಾವತಿ ಮಾಡಬೇಕಾಗುತ್ತದೆ. ಇದಕ್ಕಿಂತ ಮೊದಲು ಬಿಲ್ ಡೆಸ್ಕ್ ಗಳು ಬೇರೆ ಬೇರೆ ಪಾವತಿ ಮಾಧ್ಯಮ ಬಳಸುತ್ತಿದ್ದವು. ಇದು ಫೋನ್ ಫೆ, ಗೂಗಲ್ ಪೆ ಹಾಗು ಕ್ರೆಡ್ ನಂತಹ ಪ್ಲಾಟ್ಫಾರ್ಮ್ ಮೇಲೆ ಪರಿಣಾಮ ಬೀಳಬಹುದು.
ಪಾನ್-ಆಧಾರ್ ಲಿಂಕ್.
ಪಾನ್ ಕಾರ್ಡ್ ಹಾಗು ಆಧಾರ್ ಕಾರ್ಡ್ (Pan-adhar card Link) ಲಿಂಕ್ ಮಾಡುವುದು ಕಡ್ಡಾಯವಾಗಿದೆ. ನೀವು ಎರಡನ್ನು ಹೊಂದಿದ್ದಾರೆ ಅದನ್ನು ಕೂಡಲೇ ಲಿಂಕ್ ಮಾಡಿಸುವುದು ಅತ್ಯವಶ್ಯಕವಾಗಿದೆ. ಇಲ್ಲವಾದರೆ ನಿಮ್ಮ ಪಾನ್ ಕಾರ್ಡ್ ಮಾನ್ಯವಾಗಿರುವುದಿಲ್ಲ. ಇದಕ್ಕಾಗಿ ಡಿಸೆಂಬರ್ 31, 2025 ರವರೆಗೆ ಸಮಯವನ್ನು ನೀಡಲಾಗಿದೆ. ಈ ಪಾನ್ ಲಿಂಕ್ ಮಾಡಲು ಶುಲ್ಕ ಕೂಡ ಹೆಚ್ಚಾಗ ಬಹುದು. ನೀವು ಈ ಕೆಲಸ ಬಹಳ ವೇಗವಾಗಿ ಮಾಡುವುದು ಉತ್ತಮ.