File Your Income tax return Now!

Connect with us for filing your income tax and GST filing and all sorts of statutory requirement.

Your Attractive Heading

Call To Action

Connect with us for your income tax return and GST filing. The price starting from Just Rs. 500/

Price Hike: ಇಂದಿನಿಂದ ದೇಶದಲ್ಲಿ ಈ 5 ಬದಲಾವಣೆ ಜಾರಿಯಾಗಿದೆ. ಏಟಿಎಂ ಬಳಕೆ ಮಾಡುವ ಮೊದಲು ಈ ನಿಯಮ ಇಂದೇ ತಿಳಿದುಕೊಳ್ಳಿ.

ಮೇ 1 ಹೊಸ ತಿಂಗಳು ಶುರುವಾಗಿದೆ. ಇದರೊಂದಿಗೆ ದೇಶದಲ್ಲಿ ಕೆಲವು ಬದಲಾವಣೆಗಳು ಕೂಡ ಆಗಿದೆ. ಇಂದಿನಿಂದ ಏಟಿಎಂ ಶುಲ್ಕದಿಂದ ಹಿಡಿದು ಹಾಲು ಸಿಲಿಂಡರ್ ಬೆಲೆಗಳ ಮೇಲು ಬದಲಾವಣೆ (Price Hike) ಆಗಿದೆ. ಇದೆ ಸಮಯದಲ್ಲಿ ರೈಲ್ವೆ ಟಿಕೆಟ್ ಬುಕಿಂಗ್ ನಿಯಮದಲ್ಲೂ ಮಹತ್ತರ ಬದಲಾವಣೆ ಆಗಿದೆ. ಇವುಗಳು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮಗಳನ್ನು ಬೀರಲಿವೆ. ಈ ಬದಲಾವಣೆಗಳೇನು? ಇಲ್ಲಿದೆ ಈ ಪ್ರಮುಖ 5 ಬದಲಾವಣೆ.

1.ಏಟಿಎಂ ವಹಿವಾಟು ನಿಯಮಗಳಲ್ಲಿ ಬದಲಾವಣೆ:

ಮೇ 1 ರಿಂದ ಗ್ರಹಕಾರ ಮಾಸಿಕ ವಹಿವಾಟಿನ ಮಿತಿ ಮೀರಿದ ನಂತರ ಪ್ರತಿ ವಹಿವಾಟಿಗೆ ಹೆಚ್ಚುವರಿಯಾಗಿ (Price Hike) 2 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಏಪ್ರಿಲ್ 30 ರವರೆಗೆ ಉಚಿತ ವಹಿವಾಟಿನ ನಂತರ ಪ್ರತಿ ವಹಿವಾಟಿಗೆ 21 ರೂಪಾಯಿ ಶುಲ್ಕ ವಿದಿಸುತ್ತಿದ್ದವು. ಆದರೆ ಇನ್ನು ಮುಂದೆ ಇದರ ಶುಲ್ಕ 23 ಆಗಲಿದೆ. ಉಚಿತ ವಹಿವಾಟಿನ ಮಿತಿ ಮೊದಲಿನಷ್ಟೇ ಇರಲಿದೆ. ಮೆಟ್ರೋ ನಗರಗಳಲ್ಲಿ 3 ಉಚಿತ ಮಿತಿ ಹಾಗು ಮೆಟ್ರೋ ನಗರವಲ್ಲದ ಕಡೆಯಲ್ಲಿ 5 ಉಚಿತ ವಹಿವಾಟಿನ ಮಿತಿ ಇರಲಿದೆ.

2. ಬೆಳಗಿನ ಚಹಾ ದುಬಾರಿಯಾಗಲಿದೆ:

ಅಮುಲ್ ತನ್ನ ಹಾಲಿನ ಬೆಲೆಯಲ್ಲಿ 2 ರೂಪಾಯಿ ಹೆಚ್ಚಳ (Price Hike) ಮಾಡಿದೆ. ಇದಲ್ಲದೆ ಮದರ್ ಡೇರಿ ಕೂಡ ತನ್ನ ಹಾಲಿನ ಬೆಲೆಯಲ್ಲಿ ಹೆಚ್ಚಳ ಮಾಡಿದೆ. ಸಂಗ್ರಹಣಾ ವೆಚ್ಚ ಹೆಚ್ಚಾದ ಕಾರಣಕ್ಕೆ ಈ ಹಾಲಿನ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಈ ಕಂಪನಿ ಗಳು ಹೇಳಿದೆ. ಇನ್ನು ಕರ್ನಾಟಕದಲ್ಲಿ ನಂದಿನಿ ಹಾಲಿನ ಬೆಲೆ ತಿಂಗಳ ಮೊದಲೇ ಏರಿಕೆಯಾಗಿದೆ.

3. ರೈಲ್ವೆ ನಿಯಮದಲ್ಲಿ ಬದಲಾವಣೆ:

ಇನ್ನು ಮೇ 1 ರಿಂದ ರೈಲ್ವೆ ನಿಯಮದಲ್ಲಿ ಕೂಡ ಬದಲಾವಣೆ ಆಗಲಿದೆ. ಟಿಕೆಟ್ ಬುಕಿಂಗ್ ವಿಷಯದಲ್ಲಿ ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ಟಿಕೆಟ್ ವೈಟಿಂಗ್ ಲಿಸ್ಟ್ ನಿಯಮ ಕೇವಲ ಜನರಲ್ ಬೋಗಿಗಳಲ್ಲಿ ಇರಲಿದೆ. ಅಂದರೆ ಈ ನಿಯಮ ಇನ್ನು ಮುಂದೆ ಸ್ಲೀಪರ್ ಬೋಗಿಗಳಿಗೆ ಲಭ್ಯವಿರಲ್ಲ. ಹಾಗೇನೇ ಇನ್ನು ಮುಂದೆ ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಅವಧಿ 120 ರಿಂದ 60 ದಿನಗಳಿಗೆ ಇಳಿಸಲಾಗಿದೆ.

4. 19ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಕೆ:

ಪ್ರತಿ ತಿಂಗಳ ಮೊದಲ ದಿನದಂದು ತೈಲ ಕಂಪನಿಗಳು ಎಲ್ಪಿಜಿ ಸಿಲಿಂಡರ್ ಗಳ ಬೆಳೆಯನ್ನು ಸಹ ಬದಲಾವಣೆ ಮಾಡುತ್ತದೆ. ಇಂದು ಮೇ 1 ರಂದು OMC ಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಳೆಯನ್ನು ಕಡಿಮೆ ಮಾಡಿದೆ. ಹೊಸ ಬೆಳೆಗಳು ಇಂದಿನಿಂದ ಜಾರಿಗೆ ಬರಲಿವೆ ಹಾಗೇನೇ ಇದು ಮುಂದಿನ ತಿಂಗಳು ವರೆಗೆ ಮುಂದುವರೆಯಲಿದೆ. 19 ಕೆಜಿ ಯಾ ಸಿಲಿಂಡರ್ ಬೆಲೆ 14.5 ರೂಪಾಯಿ ಗಳಷ್ಟು ಕಡಿಮೆ ಮಾಡಿದೆ.

5. ಜೆಟ್ ಇಂಧನ ಬೆಲೆಯಲ್ಲಿ ಮೇ 1 ರಿಂದ ಕಡಿಮೆ ಆಗಿದೆ. ಇದರಿಂದ ವಿಮಾನಯಾನದಲ್ಲಿ ಟಿಕೆಟ್ ಬೆಳೆಗಳು ಕಡಿಮೆ ಆಗುವ ಸಂಭಾವನೆ ಇದೆ. 3954/KL ನಷ್ಟು ಬೆಲೆ ಇಳಿಕೆಯಾಗಿದೆ. ಹೊಸ ನಿಯಮಗಳು ಇಂದಿಂದಲೇ ಜಾರಿಗೆ ಬರಲಿದೆ.

Leave a Comment

Your email address will not be published. Required fields are marked *

Scroll to Top