File Your Income tax return Now!

Connect with us for filing your income tax and GST filing and all sorts of statutory requirement.

Your Attractive Heading

Call To Action

Connect with us for your income tax return and GST filing. The price starting from Just Rs. 500/

ಸರ್ವ ಮಂಗಳ ಮಾಂಗಲ್ಯ ಶಿವೇ ಸರ್ವಾರ್ಥ ಸಾಧಿಕೆ ಶರಣೆತ್ರ ನೇತ್ರ ಯೆoಬ ಕೇ ಗೌರಿ ನಾರಾಯಣಿ ನಮೋಸ್ತುತೆ.ಜೀವನದಲ್ಲಿ ಹೆಣ್ಣಾಗಿ ಹುಟ್ಟಿದ ಮೇಲೆ ತಾಯ್ತನ ಎಂಬುದು ಪರಮ ಶ್ರೇಷ್ಠವಾದ ಘಟ್ಟ. ಹೆಣ್ಣಾಗಿ ಹುಟ್ಟಿದ ಮೇಲೆ ತಾಯಿಯಾಗದಿದ್ದರೆ ಜೀವನ ವ್ಯರ್ಥ ಎಂದು. ಅದೆಷ್ಟೋ ಹೆಣ್ಣು ಮಕ್ಕಳು ಒಂದೆಡೆ ಮದುವೆ ಆಗದೆ ಇರುವ ಮದುವೆಯಾದ ಮೇಲೆ ಮಕ್ಕಳಾಗಲಿಲ್ಲ ಎಂಬ ಬೇಸರ. ಆದರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂಬುದು ನಮ್ಮ ಹಿಂದೂ ಧರ್ಮದಲ್ಲಿ ಖಂಡಿತವಾಗಿಯೂ ಇದೆ. ನಂಬಿಕೆಗಳು ಕಡಿಮೆಯಾದಾಗ ಇಂತಹ ಪವಾಡಗಳು ನಮ್ಮ ಕಣ್ಣಿಗೆ ಬರುವುದಿಲ್ಲ. ಆದರೆ ಜೀವನದಲ್ಲಿ ಸಮಸ್ಯೆ ಎಂದು ಬಂದಾಗ ಇಂತಹ ಪರಿಹಾರಗಳನ್ನು ಹುಡುಕಿಕೊಂಡು ಹೋಗುತ್ತೇವೆ. ಅಂತಹದೇ ಒಂದು ಪುಣ್ಯ ಪರಿಹಾರ ಕ್ಷೇತ್ರದ (Temple) ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಅದೆಷ್ಟೋ ಸಾವಿರಾರು ಭಕ್ತರು ಮಕ್ಕಳಾಗಲಿಲ್ಲ ಎಂಬ ನೋವಿನೊಂದಿಗೆ ಬಂದು ತಾಯಿಯಲ್ಲಿ ಪ್ರಾರ್ಥನೆ ಮಾಡಿದಾಗ ಮಕ್ಕಳ ರೂಪದಲ್ಲಿ ತಾಯಿಯು ಪ್ರಸಾದವನ್ನು ಕೊಟ್ಟಿದ್ದು ನಾವು ಕಂಡಿದ್ದೇವೆ. ಭಕ್ತರ ಪ್ರಾರ್ಥನೆಯನ್ನು ಈಡೇರಿಸಿದ ಈ ಮಹಾತಾಯಿ ಹಲವು ಮಕ್ಕಳ ತಾಯಿಯಂದೆ ಪ್ರಸಿದ್ಧಿ.

ಹಲವು ಮಕ್ಕಳ ತಾಯಿ ಎಂದೇ ಪ್ರಸಿದ್ದಿ ಪಡೆದಿರುವ ಅಮೃಶ್ವರಿ ದೇವಿ ದೇವಸ್ಥಾನ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು, ಕೋಟೇಶ್ವರ ಎಂಬ ತಳದಲ್ಲಿ ಸ್ಥಿತವಾಗಿದೆ. ಕೋಟೇಶ್ವರ ಫ್ಲೈ ಓವರ್ ಎಡಭಾಗದಲ್ಲಿ ಈ ದೇವಸ್ಥಾನವನ್ನು (Temple) ಕಾಣಬಹುದು. ದೇವಸ್ಥಾನದಲ್ಲಿ ನೀವು ಗಮನಿಸಿದರೆ ತಾಯಿಯ ಗರ್ಭಗುಡಿಯ ಸುತ್ತಲೂ ಸಣ್ಣ ಸಣ್ಣ ಲಿಂಗಗಳು ಮೂಡಿವೆ. ದಿನ ಹೋದಂತೆ ಬೆಳೆಯುತ್ತಲೂ ಇದೆ. ಹಿರಿಯರು ಹೇಳುವ ಪ್ರಕಾರ ಇದು ಬಂಜೆ ತಾಯಂದಿರು ಹೇಳಿರುವ ಹರಕೆ ಫಲ ಪ್ರದವಾಗಿ ಸಂತಾನ ರೂಪದಲ್ಲಿ ಹೊರ ಕೊಟ್ಟಾಗ ಒಂದೊಂದು ಲಿಂಗಗಳು ಮೂಡುತ್ತವೆ. ಮಕ್ಕಳು ಬೆಳೆಯುತ್ತಿದ್ದಂತೆ ಈ ಲಿಂಗಗಳು ಕೂಡ ಬೆಳೆಯುತ್ತವೆ.

Read this : Adhar Card: 5 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಬಾಲ ಆಧಾರ್ ಕಾರ್ಡ್ ಮಾಡಿಸಬಹುದು. ಹೇಗೆ ಮಾಡುವುದು? ಮಾಡಿಸುವ ವಿಧಾನ ಇಲ್ಲಿದೆ.

ಈ ಜಗನ್ಮಾತೆಯ ಕಾರ್ಣಿಕ ಎಲ್ಲೆಡೆಯು ಪಸರಿಸಿದೆ ಕುಟುಂಬಗಳಿಗೆ ನಂದಾ ದೀಪದ ಬೆಳಕಾಗಿದೆ ಈ ಪುಣ್ಯಕ್ಷೇತ್ರ. ಅದೆಷ್ಟೋ ಜನರು ಮಕ್ಕಳು ಇಲ್ಲ ಎಂಬ ಕೊರಗಿನಿಂದಲೇ ಇರುತ್ತಾರೆ ಅವರು ಈ ಕ್ಷೇತ್ರಕ್ಕೆ ಬಂದು ಪ್ರಾರ್ಥನೆ ಮಾಡಿ, ಅರ್ಚಕರ ಕೊಟ್ಟ ಪ್ರಸಾದವನ್ನು 42 ದಿನಗಳ ಕಾಲ ಸೇವನೆ ಮಾಡಿ ತಾಯಿಯ ಭಕ್ತಿಯನ್ನು ಮಾಡಿದಲ್ಲಿ ಖಂಡಿತವಾಗಿಯೂ ನಿಮಗೆ ಒಂದು ವರ್ಷದ ಒಳಗೆ ಸಂತಾನ ಪ್ರಾಪ್ತಿ ಆಗುತ್ತದೆ. ನಿಮ್ಮ ಕುಟುಂಬ ಸ್ನೇಹಿತರು ಬಂಧು ಬಳಗದಲ್ಲಿಯೂ ಇಂತಹ ಒಂದು ನೋವಿನಿಂದ ಬಳಲುತ್ತಿರುವ ಕುಟುಂಬಗಳಿಗೆ ಇದನ್ನು ಶೇರ್ ಮಾಡಿ. ಒಂದು ಕುಟುಂಬದ ಸಂತಸದ ಕಾರಣರಾಗಿ.

By Admin

News junkie, love to write political, current affairs, financial literate and general knowledge content.

Leave a Reply

Your email address will not be published. Required fields are marked *