Business

Gold Rate: ಚಿನ್ನದ ಬೆಲೆ ಪ್ರತಿ 10 ಗ್ರಾಂ ಗೆ 55 ಸಾವಿರಕ್ಕೆ ಕುಸಿಯಲಿದೆ. ಇದು ಯಾವಾಗ ನಡೆಯಬಹುದು? ಇದರ ಹಿಂದಿನ ಕಾರಣಗಳೇನು?

ಭಾರತ ಸೇರಿ ಜಗತ್ತಿನಾದ್ಯಂತ ಚಿನ್ನದ ಬೆಲೆ (Gold rate) ಗಗನಕ್ಕೇರಿದೆ. ಆbದರೂ ಕೂಡ ಚಿನ್ನದ ಬೆಲೆಯಲ್ಲಿ ದಿಡೀರ್ ಕುಸಿತ ಬೀಳುವ ಎಲ್ಲ ಸಾಧ್ಯತೆ ಇದೆಯೆಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಪ್ರತಿ 10 ಗ್ರಾಂ ಚಿನ್ನದ ಬೆಲೆ 55 ಸಾವಿರ ಕ್ಕೆ ಬರಲಿದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಕಾರಣವೇನು? ಇಲ್ಲಿದೆ ವಿಶ್ಲೇಷಕರ ವರದಿ.

ಪ್ರಸ್ತುತ ಸಮಯದಲ್ಲಿ ಚಿನ್ನದ ಬೆಲೆ (Gold rate) ಭಾರತದಲ್ಲಿ ಪ್ರತಿ 10 ಗ್ರಾಂ ಗೆ 90,000 ರೂಪಾಯಿಗಳಿಷ್ಟಿದೆ. ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ ಹಾಗು ಅಮೇರಿಕ ಮೂಲದ ಮಾರ್ನಿಂಗ್ ಸ್ಟಾರ್ ಅನ್ವೇಷಣೆ ಪ್ರಕಾರ ಚಿನ್ನದ ಬೆಲೆಯಲ್ಲಿ 38% ರಷ್ಟು ಕುಸಿತ ಬರುವ ವರ್ಷಗಳಲ್ಲಿ ಕಾಣಲಿದೆ. ಈ ಕುಸಿತದಿಂದ ಭಾರತದಲ್ಲಿ ಪ್ರತಿ 10 ಗ್ರಾಂ ಗೆ 55 ಸಾವಿರ ರೂಪಾಯಿಗಳಷ್ಟು ಬೆಲೆ ಇರಲಿದೆ.

Read this: Repo rate: ರೆಪೋ ರೇಟ್ ಎಂದರೇನು? ಇದು ನಿಮ್ಮ ದೈನಂದಿನ ಜೀವನದಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ?

ಪೂರೈಕೆಯಲ್ಲಿನ ಹೆಚ್ಚಳ ಈ ಕುಸಿತಕ್ಕೆ ಕಾರಣವಾಗಲಿದೆ ಎಂದು ಈ ವರದಿಯಲ್ಲಿ ಹೇಳಲಾಗುತ್ತಿದೆ. 2024 ರ ಎರಡನೇ ತ್ರೈಮಾಸಿಕದಲ್ಲಿ ಗಣಿಗಾರಿಕೆ ಲಾಭವು 950$ ರಷ್ಟು ತಲುಪಿತ್ತು. ಅಲ್ಲದೆ ಜಾಗತಿಕ ಮಟ್ಟದಲ್ಲಿ ಈ ಚಿನ್ನದ ರಿಸರ್ವ್ ಅಂದರೆ ಮೀಸಲಾತಿ 9% ರಷ್ಟು ಏರಿಕೆಯಾಗಿ 216265 ಟನ್ ಗಳಷ್ಟು ತಲುಪಿದೆ. ಚಿನ್ನದ ಪೂರೈಕೆ ಹೆಚ್ಚಾಗಿದೆ ವಿನಃ ಅದಕ್ಕೆ ಬೇಕಾದ ಬೇಡಿಕೆ ಮಾರುಕಟ್ಟೆಯಲ್ಲಿ ಹೆಚಾಗುತ್ತಿಲ್ಲ.

ಇದಲ್ಲದೆ ವರ್ಲ್ಡ್ ಗೋಲ್ಡ್ ಕೌನ್ಸಿಲ್ ಸಮೀಕ್ಷೆ ಪ್ರಕಾರ 71% ಕೇಂದ್ರೀಯ ಬ್ಯಾಂಕ್ ಗಳು ತಮ್ಮ ಚಿನ್ನದ ರಿಸರ್ವ್ ಕಡಿಮೆ ಮಾಡಲಿದೆ ಅಥವಾ ಇವಾಗ ಇರುವಷ್ಟೇ ಇಡಲಿದೆ. ಅದಲ್ಲದೆ ಇತ್ತೀಚಿನ ವರ್ಷಗಳಲ್ಲಿ ಚಿನ್ನದ ಬೆಲೆ ಗಣನೀಯ ರೀತಿಯಲ್ಲಿ ಏರಿಕೆ ಕಂಡಿದೆ. ಇದರಿಂದಾಗಿ ಈ ಬೆಲೆಯಲ್ಲಿನ ಇಳಿಕೆ ಬರುವ ಎಲ್ಲ ಸಾಧ್ಯತೆ ಇದೆಯೆಂದು ಹೇಳಲಾಗುತ್ತಿದೆ. ಇದಕ್ಕೆ ತದ್ವಿರುದ್ಧವಾಗಿ ಅಮೇರಿಕಾದ ಹಣಕಾಸು ಸಂಸ್ಥೆಗಳು ಚಿನ್ನದ ಬೆಲೆಯಲ್ಲಿ (Gold rate) ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಇದು ಭಾರತದ ಲೆಕ್ಕಾಚಾರ ಪ್ರಕಾರ ಪ್ರತಿ 10 ಗ್ರಾಂ ಗೆ 1 ಲಕ್ಷ ರೂಪಾಯಿಗಳಷ್ಟು ಏರಿಕೆ ಕಾಣಲಿದೆ ಎಂದು ಹೇಳಿದೆ.

Leave a Reply

Your email address will not be published. Required fields are marked *