Business

Electric scooter: ಒಂದು ಚಾರ್ಜ್ ನಲ್ಲಿ 80KM ಓಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಇದರ ಬೆಲೆ 60 ಸಾವಿರಕ್ಕಿಂತಲೂ ಕಡಿಮೆ.

ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಲಿಮಿಟೆಡ್ (GEML) ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್ ನ ಆಂಪಿಯರ್ ರಿಯೋ ಕಡಿಮೆ ಬಜೆಟ್ ನ ಎಲೆಕ್ಟ್ರಿಕ್ ಸ್ಕೂಟರ್ (Electric scooter) ನ ಬಿಡುಗಡೆ ಮಾಡಿದೆ. ಇದರ ಎಕ್ಸ್ ಷೋರೂಮ್ ಬೆಲೆ 59,900. ಹೊಸ ಮಾದರಿಯನ್ನು ಆರಂಭಿಕ ಹಂತದಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇದಕ್ಕೆ ಯಾವುದೇ ಪರವಾನಿಗೆ ಅಥವಾ ನೋಂದಣಿ ಅಗತ್ಯವಿಲ್ಲ. ಇದರ ಗರಿಷ್ಟ ವೇಗ 25 km ಗಿಂತ ಕಡಿಮೆ. ರಿಯೋ 80 ಬಣ್ಣದ LCD ಡಿಸ್ಪ್ಲೇ, LEP ಬ್ಯಾಟರಿ ತಂತ್ರಜ್ಞಾನ ಹಾಗು ಮುಂಭಾಗದ ಡಿಸ್ಕ್ ಬ್ರೇಕ್ ಮತ್ತು ಕೀ ರಹಿತ ಗಾಡಿ ಸ್ಟಾರ್ಟ್ ವೈಶಿಷ್ಟ್ಯ ಹೊಂದಿದೆ. ಕೆಂಪು ಬಿಳಿ ಹಾಗು ನೀಲಿ ಬಣ್ಣದಲ್ಲಿ ಈ ವಾಹನಗಳು ನಿಮಗೆ ದೊರೆಯಲಿದೆ.

ಕಂಪನಿ ಅಧಿಕಾರಿಗಳ ಮಾಹಿತಿ ಪ್ರಕಾರ ಈ ದ್ವಿಚಕ್ರ ವಾಹನ (Electric Scooter) ಈ ತಿಂಗಳು ಭಾರತದಾದ್ಯಂತ ವಿತರಣೆ ಪ್ರಾರಂಭ ಮಾಡಲಿದೆ. ಈ ಕಂಪನಿ CEO ವಿಜಯ್ ಕುಮಾರ್ ಅವರು ಈ ವಾಹನದ ಬಿಡುಗಡೆ ವಿದ್ಯುತ್ ಚಾಲಿತ ವಾಹನಗಳ ಚಲನಶೀಲತಯನ್ನು ಹೆಚ್ಚು ಮಾಡುವ ದೃಷ್ಟಿಕೋನ ಹೊಂದಿದೆ ಎಂದು ಹೇಳಿದ್ದಾರೆ.

ಹೆಚ್ಚುತ್ತಿರುವ ಇಂಧನ ಬೆಲೆ ಹಾಗು ಪರಿಸರ ದ ಕಾಳಜಿಗಳ ನಡುವೆ ಗ್ರಾಹಕರು ಇಂಧನ ವಾಹನಗಳ ಪರ್ಯಾಯ ಹುಡುಕುತ್ತಿರುವಾಗ, ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಮಾರುಕಟ್ಟೆ ಸ್ಥಿರವಾಗಿ ಬೆಳೆಯುತ್ತಿದೆ. ಈ ರಿಯೋ ವಾಹನ ವಿದ್ಯಾರ್ಥಿಗಳು, ಕಡಿಮೆ ದೂರದ ಪ್ರಯಾಣಕ್ಕೆ ಹಾಗು ವೃದ್ಧರಿಗೆ ಸಹಾಯವಾಗಲಿದೆ. 2025 ರ ಮಾರ್ಚ್ ಈ ಗ್ರೀವ್ಸ್ ಕಂಪನಿ ವಾಹನ ಮಾರಾಟವು 6000 ದಷ್ಟಿದೆ. 165 ವರ್ಷಗಳ ಇತಿಹಾಸ ಹೊಂದಿರುವ ಈ ಕಂಪನಿ ಸಿಂಗಲ್ ಎಂಜಿನ್ ತಯಾರಿಸುತ್ತಿದೆ.

Leave a Reply

Your email address will not be published. Required fields are marked *