Business

ಅವದಿ ಮುನ್ನ Fixed Deposit ಪಡೆದುಕೊಂಡರೆ ಬ್ಯಾಂಕ್ ಗಳು ನಿಮಗೆ ಎಷ್ಟು ಹಣ ಹಿಂದಿರುಗಿಸುತ್ತದೆ? ಬ್ಯಾಂಕ್ ಗಳು ಹಾಕುವ ಪೆನಾಲ್ಟಿ ಎಷ್ಟು?

ಭಾರತದಲ್ಲಿ ಲಕ್ಷಾಂತರ ಜನರು ಇಂದಿಗೂ ಶೇರ್ ಮಾರ್ಕೆಟ್ ಗಿಂತ ಫಿಕ್ಸೆಡ್ ಡೆಪಾಸಿಟ್ (Fixed Deposit) ಅಲ್ಲಿ ಹಣ ಉಳಿತಾಯ ಮಾಡಲು ಬಯಸುತ್ತಾರೆ. ಇದೊಂದು ಸುರಕ್ಷಿತ ಹಾಗು ಬ್ಯಾಂಕ್ ಗಳು ಹೇಳಿದ ಪ್ರತಿಶತ ಹಣ ವಾಪಸ್ಸು ನೀಡಿಯೇ ನೀಡುತ್ತದೆ. ರೆಪೋ ರೇಟ್ ಹೆಚ್ಚಾಗುತ್ತಿದ್ದಂತೆಯೇ ಇದೀಗ ಬ್ಯಾಂಕ್ ಗಳು ಉಳಿತಾಯ ಖಾತೆಗೆ ನೀಡುವ ಬಡ್ಡಿ ದರದಲ್ಲಿಯೂ ಕೂಡ ಹೆಚ್ಚಾಗುತ್ತಿದೆ. ಫಿಕ್ಸೆಡ್ ಡೆಪಾಸಿಟ್ ನಾವು ಸಾಮಾನ್ಯವಾಗಿ 1 ವರ್ಷ ಹಾಗು ಅದಕ್ಕಿಂತ ಜಾಸ್ತಿ ವರ್ಷಗಳಿಗೆ ಇಡುತ್ತೇವೆ. ಆದರೆ ಕೆಲವೊಮ್ಮೆ ಅಗತ್ಯ ಬಿದ್ದಾಗ ಜನರು ತಮ್ಮ ಫಿಕ್ಸೆಡ್ ಡೆಪಾಸಿಟ್ ಹಣವನ್ನು ಅವಧಿಗೂ ಮುನ್ನವೇ ಪಡೆದುಕೊಳ್ಳುತ್ತಾರೆ. ಇಂತಹ ಸಂಧರ್ಭದಲ್ಲಿ ಜನರು ಬ್ಯಾಂಕ್ ಗಳಿಂದ ಕಡಿಮೆ ಬಡ್ಡಿ ಹಣ ಪಡೆಯುವುದು ಮಾತ್ರವಲ್ಲದೆ ಪೆನಾಲ್ಟಿ ಕೂಡ ಕಟ್ಟಬೇಕಾಗುತ್ತದೆ.

ರೆಪೋ ರೇಟ್ ಅಂದರೇನು? ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಸಾಮಾನ್ಯವಾಗಿ ನೀವು ಅವಧಿ ಪೂರ್ವ ಉಳಿತಾಯ (Fixed Deposit) ಹಿಂಪಡೆದುಕೊಂಡರೆ ಬ್ಯಾಂಕ್ ಗಳು ಹೇಳಿದ ಬಡ್ಡಿ ನೀಡುವುದಿಲ್ಲ. ಅದು ಮಾತ್ರವಲ್ಲದೆ ನಿಮ್ಮ ಉಳಿತಾಯದ ಹಣದಿಂದ ಪೆನಾಲ್ಟಿ ರೂಪದಲ್ಲಿ ಸ್ವಲ್ಪ ಹಣ ತೆಗೆದುಕೊಳ್ಳುತ್ತದೆ. ಈ ಪೆನಾಲ್ಟಿ ಹಾಗು ನಿಯಮ ಎಲ್ಲ ಬ್ಯಾಂಕ್ಗಳಲ್ಲಿ ಒಂದೇ ರೀತಿ ಇರದೇ ಭಿನ್ನವಾಗಿರುತ್ತದೆ.

ಭಾರತದ ಅತಿ ದೊಡ್ಡ ಬ್ಯಾಂಕ್ SBI ನಿಯಮದ ಪ್ರಕಾರ, ಒಂದು ವೇಳೆ FD (Fixed Deposit) ಅವಧಿ ಪೂರ್ವದಲ್ಲಿ ವಾಪಸು ಪಡೆದುಕೊಂಡರೆ, ಬಡ್ಡಿ 1% ರಷ್ಟು ಕಡಿತವಾಗುತ್ತದೆ. ಇದರ ಜೊತೆಗೆ ದಂಡ ಕೂಡ ಹಾಕಲಾಗುತ್ತದೆ. ಉದಾಹರಣೆಗೆ ನೀವು 5 ಲಕ್ಷಕ್ಕಿಂತ ಕಡಿಮೆ ಹಣ FD ಇಟ್ಟಿದ್ದಾರೆ ಅವಧಿ ಪೂರ್ವ ಕ್ಲೋಸ್ ಮಾಡಿದರೆ 0.5% ರಷ್ಟು ದಂಡ ಹಾಕಲಾಗುತ್ತದೆ. ಹಾಗೇನೇ FD ಹಣ 5 ಲಕ್ಷಕ್ಕಿಂತ ಹೆಚ್ಚು ಹಾಗು 1 ಕೋಟಿ ಗಿಂತ ಕಡಿಮೆ ಆಗಿದ್ದರೆ 1% ನಷ್ಟು ದಂಡ ಬ್ಯಾಂಕ್ ಹಾಕುತ್ತದೆ.

Fixed deposit
Fixed Deposit

ಉದಾಹರಣೆಗೆ 1 ಲಕ್ಷದಷ್ಟು ಹಣ 1 ವರ್ಷಕ್ಕೆ ನೀವು ಫಿಕ್ಸೆಡ್ ಡೆಪಾಸಿಟ್ (Fixed Deposit) ನಲ್ಲಿ ಇಟ್ಟರೆ ನಿಮಗೆ 6% ರಷ್ಟು ಬಡ್ಡಿ ಸಿಗುತ್ತದೆ. ಒಂದು ವೇಳೆ ನೀವು ಅದನ್ನು 1 ವರ್ಷದ ಒಳಗೆ ವಾಪಸು ಪಡೆದುಕೊಂಡರೆ, 6% ಬದಲು ಕೇವಲ 5% ರಷ್ಟು ಮಾತ್ರ ಬಡ್ಡಿ ಸಿಗುತ್ತದೆ. ಅದೇ ರೀತಿ ದಂಡದ ರೂಪದಲ್ಲಿ 0.5% ರಷ್ಟು ಕಡಿತವಾಗುತ್ತದೆ. ಒಟ್ಟಾರೆ ನಿಮಗೆ ಅವಾಗ ಸಿಗುವುದು ಕೇವಲ 4.5% ರಷ್ಟು ಬಡ್ಡಿ ಮಾತ್ರ.

ಜೀವನದಲ್ಲಿ ಯಾವುದೇ ಸಮಯದಲ್ಲಿ ಹಣದ ಅವಶ್ಯಕತೆ ಬರುವದರಿಂದ, ಬ್ಯಾಂಕ್ ನಲ್ಲಿ ಉಳಿತಾಯ ದಲ್ಲಿ ಇಟ್ಟ ಹಣ ತುರ್ತು ಸಂಧರ್ಭದಲ್ಲಿ ಹಿಂದಕ್ಕೆ ಪಡೆಯಬೇಕಾಗುತ್ತದೆ. ಆದರೆ ಈ ಸಮಯದಲ್ಲಿ ನೀವು ಬಡ್ಡಿ ಯಾ ನಷ್ಟ ಅನುಭವಿಸತ್ತಿರ. ಇದನ್ನು ತಪ್ಪಿಸಲು ನೀವು 2 ವಿಧಾನ ಬಳಸಬಹುದು. ಮೊದಲನೆಯದಾಗಿ, ಸಂಪೂರ್ಣ ಹಣವನ್ನ ಒಂದೇ ಫಿಕ್ಸೆಡ್ ಡೆಪಾಸಿಟ್ (Fixed Deposit) ನಲ್ಲಿ ಇಡದೆ, ಹಲವು ಸಣ್ಣ ಸಣ್ಣ ಕಡಿಮೆ ಅವಧಿಯ ಫಿಕ್ಸೆಡ್ ಡೆಪಾಸಿಟ್ ಮಾದರಿಯಲ್ಲಿ ಇಡಿ. ಎರಡನೆಯದು ಈ ಫಿಕ್ಸೆಡ್ ಡೆಪಾಸಿಟ್ ಹಣವನ್ನು ಸಂಪೂರ್ಣವಾಗಿ ಮುಚ್ಚುವ ಬದಲು ಇದರ ಮೇಲೆ ಸಾಲ ಪಡೆಯಿರಿ.

Leave a Reply

Your email address will not be published. Required fields are marked *