Pan 2.0 ಪಡೆಯುವುದು ಹೇಗೆ? ಪಾನ್ ಕಾರ್ಡ್ ಪಡೆಯುವ ಸುಲಭ ವಿಧಾನ ಇಲ್ಲಿದೆ.
ಕೇಂದ್ರ ಸರಕಾರ ಇತ್ತೀಚಿಗೆ ಪಾನ್ ೨.೦ ಎನ್ನುವ ನಿಯಮ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಈಗಿರೋ ಪಾನ್ ವ್ಯವಸ್ಥೆಯನ್ನು ಉನ್ನತೀಕರಿಸಿ ಡಿಜಿಟಲ್ ಸೆಕ್ಯೂರಿಟಿ ನೀಡಲು ಮುಂದಾಗಿದೆ. ಹೊಸ ಅಪ್ಡೇಟ್ ನೊಂದಿಗೆ ಪಾನ್ ೨.೦ ಜಾರಿಗೆ ಬಂದಿದ್ದು ಹಾಗೆಂದ ಮಾತ್ರಕ್ಕೆ ನಿಮ್ಮ ಬಳಿ ಇರೋ ಪಾನ್ ಗೆ ಬೆಲೆ ಇಲ್ಲ ಎಂದೇನಿಲ್ಲ. ಎರಡು ಜಾರಿಯಲ್ಲಿರುತ್ತದೆ. ಇದು ಸ್ವಲ್ಪ ಅಪ್ಡೇಟೆಡ್ ವರ್ಷನ್ ಅಷ್ಟೇ.
ಈ ಹೊಸ ಪಾನ್ ೨.೦ (Pan 2.0) ಹಂಚಿಕೆ ಹಾಗು ನವೀಕರಣ ಹಾಗೇನೇ ತಿದ್ದುಪಡಿ ಉಚಿತವಾಗಿ ಮಾಡಲಾಗುತ್ತದೆ. ಇದನ್ನು ನಿಮ್ಮ ಮೇಲ್ ಐಡಿ ಗೆ ಕಳುಹಿಸಲಾಗುತ್ತದೆ. ನೀವು ಪಾನ್ ಕಾರ್ಡ್ ಇದ್ದಾರೆ ಒಂದು 50 ರೂಪಾಯಿ ಅರ್ಜಿ ಶುಲ್ಕ ಸಲ್ಲಿಸಬೇಕಾಗುತ್ತದೆ. ನಿಮ್ಮ ಬಳಿ ಇದಕ್ಕಿಂತ ಮೊದಲು ಯಾವುದೇ ಇಮೇಲ್ ನೊಂದಾವಣೆ ಮಾಡದೇ ಇದ್ದಲ್ಲಿ ಪಾನ್ ೨.೦ (Pan 2.0) ಅರ್ಜಿ ವೇಳೆ ದಾಖಲು ಮಾಡಬಹುದು.
ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ.
ಮೊದಲು ಈ ಲಿಂಕ್ ಗೆ ಹೋಗಬೇಕಾಗುತ್ತದೆ : https://www.onlineservices.nsdl.com/paam/requestAndDownloadEPAN.html
ಇಲ್ಲಿ ನಿಮ್ಮ ಪಾನ್, ಆಧಾರ್ ಹಾಗು ಹುಟ್ಟಿದ ದಿನಾಂಕ ನಮೂದಿಸಬೇಕಾಗುತ್ತದೆ. ನಂತರ ನಿಮಗೆ ಅಗತ್ಯವಿರುವ ಟಿಕ್ ಬಾಕ್ಸ್ ಗೆ ಚಿಕ್ ಮಾಡಿ. ಅದಾದ ನಂತರ ಹೊಸ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ಆದಾಯ ತೆರಿಗೆ ಇಲಾಖೆಯೊಂದಿಗೆ ನವೀಕರಿಸಿದಂತೆ ನಿಮ್ಮ ಪ್ರಸ್ತುತ ವಿವರಗಳನ್ನು ಪರಿಶೀಲಿಸಬೇಕು. ಆಮೇಲೆ ಒಟಿಪಿ ಆಯ್ಕೆ ಮಾಡಬೇಕಾಗುತ್ತದೆ.
ಒಟಿಪಿ ನಿಮ್ಮ ಮೊಬೈಲ್ ಗೆ ಬಂದ ನಂತರ ಅದನ್ನು ನಮೂದಿಸಿ. ಮೊದಲೇ ಹೇಳಿದಂತೆ 50 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ. ಅದಾದ ನಂತರ ಇನ್ಕಮ್ ಟ್ಯಾಕ್ಸ್ ಗೆ ನೀಡಿದ ಈ ಮೇಲ್ ಐಡಿ ಗೆ ನಿಮ್ಮ ಹೊಸ ಡಿಜಿಟಲೈಸ್ಡ್ ಪಾನ್ ೨.೦ (Pan 2.0) ಅನ್ನು ಮೇಲ್ ಮಾಡಲಾಗುತ್ತದೆ. ಈ ಪಾನ್ ಅರ್ಜಿ ಸಲ್ಲಿಸಿದ ೩೦ ನಿಮಿಷಗಳ ಒಳಗೆ ನಿಮಗೆ ಹೊಸ ಪಾನ್ ಸಿಗುತ್ತದೆ.