Adhar voter ID link: ಮನೆಯಲ್ಲೇ ಕುಳಿತು ಆಧಾರ್ ಕಾರ್ಡ್ ಹಾಗು ವೋಟರ್ ಐಡಿ ಲಿಂಕ್ ಮಾಡಬಹುದು. ಸರಳ ಪ್ರಕ್ರಿಯೆ ವಿಧಾನ ತಿಳಿಯಿರಿ.
ನಮ್ಮ ದೈನಂದಿನ ಯಾವುದೇ ಪ್ರಮುಖ ಕೆಲಸ ವಿರಲಿ ಅದನ್ನು ನಡೆಸಲು ಬೇಕಾಗುವುದು ಆಧಾರ್ ಕಾರ್ಡ್. ಇದು ಕೇವಲ ಗುರುತಿನ ಚೀಟಿ ಅಷ್ಟೇ ವಿನಃ ನಾಗರೀಕ ಚೀಟಿ ಅಲ್ಲ. ಚುನಾವಣಾ ಆಯೋಗವು ಮತದಾನ ಚೀಟಿ ಹಾಗು ಆಧಾರ್ ಕಾರ್ಡ್ ಎರಡನ್ನು ಲಿಂಕ್ (adhar voter id link) ಮಾಡುವ ಬಗ್ಗೆ ಪ್ರಸ್ತಾವ ಇಟ್ಟಿದೆ. ಇದನ್ನು ಮಾಡುವ ವಿಧಾನ ಬಹಳ ಸುಲಭ ಇದೆ. ಈ ಪ್ರಕ್ರಿಯೆ ಆನ್ಲೈನ್ ಹಾಗು ಆಫ್ಲೈನ್ ಎರಡು ವಿಧಾನದಲ್ಲಿ ಮಾಡಬಹುದು. ನಿಮಗೆ ಗೊತ್ತಿಲ್ಲದಿದ್ದರೆ ಇಂದು ನಿಮಗೆ ಪ್ರಕ್ರಿಯೆ ತಿಳಿಸಲಿದ್ದೇವೆ.
ಆಫ್ಲೈನ್ ಲಿಂಕಿಂಗ್:
ನಿಮ್ಮ ಹತ್ತಿರದ ಬೂತ್ ಮಟ್ಟದ ಆಫೀಸರ್ ಬಳಿ ಹೋಗಿ. ಈ ಬೂತ್ ಆಫೀಸರ್ ಬಗ್ಗೆ ಗೊತ್ತಿಲ್ಲದೇ ಇದ್ದಾರೆ ನಿಮಗೆ ಚುನಾವಣಾ ಆಯೋಗದ ಅಧಿಕೃತ ವೆಬ್ಸೈಟ್ ಅಲ್ಲಿ ನಿಮಗೆ ಮಾಹಿತಿ ಸಿಗುತ್ತದೆ. ಲಿಂಕ್ ಮಾಡಲು ಬೇಕಾದ ಅರ್ಜಿಯನ್ನು ಪೂರ್ತಿ ಮಾಡಿ ಅಲ್ಲಿ ಹತ್ತಿರದ BLO ನೀಡಬೇಕಾಗುತ್ತದೆ. ಈ ದಾಖಲಾತಿ ಪರಿಶೀಲನೆ ಆದ ನಂತರ ನಿಮ್ಮ ಆಧಾರ್ ಹಾಗು ವೋಟರ್ ಐಡಿ ಲಿಂಕ್ ಆಗುತ್ತದೆ. (Adhar voter id link)

ಆನ್ಲೈನ್ ಲಿಂಕಿಂಗ್ :
ಲಿಂಕ್ ವೋಟರ್ ಕಾರ್ಡ್ ಹಾಗು ಆಧಾರ್ ನ್ಯಾಷನಲ್ ವೋಟರ್ ಸರ್ವಿಸ್ ಪೋರ್ಟಲ್ (NVSP). ಮೊದಲು ನೀವು ಈ ಅಧಿಕೃತ ವೆಬ್ಸೈಟ್ ಗೆ ಹೋಗಿ ರಿಜಿಸ್ಟರ್ ಆಗಬೇಕು. ನಂತರ ಆಧಾರ್ ಕಲೆಕ್ಷನ್ ಆಯ್ಕೆ ಮಾಡಬೇಕಾಗುತ್ತದೆ. ಇಲ್ಲಿ ನಿಮಗೆ ಫಾರಂ 6ಬಿ ಸಿಗುತ್ತದೆ. ನಿಮ್ಮ ವೋಟರ್ ಐಡಿ ಇಂದ ಇದಕ್ಕೆ ಲಿಂಕ್ ಮಾಡಬೇಕು. ಅಥವಾ EPCI ನಂಬರ್ ಇಂದ ಕೂಡ ಲಿಂಕ್ ಮಾಡಬಹುದು. ಇಲ್ಲಿ ನಂತರ ನಿಮ್ಮ ಗುರುತನ್ನು ಪರಿಶೀಲನೆ ಮಾಡಬೇಕು. ನಂತರ ಈ ಅರ್ಜಿಯನ್ನು ಸಬ್ಮಿಟ್ ಮಾಡಬೇಕು.
ನೀವು ಆಧಾರ್ ಹಾಗು ವೋಟರ್ ಐಡಿ ಯನ್ನು ಮೊಬೈಲ್ ಮೂಲಕ ಕೂಡ ಮಾಡಬಹುದು. 1950 ನಂಬರ್ ಗೆ ಕರೆ ಮಾಡು ನಿಮ್ಮ ಆಧಾರ್ ನಂಬರ್ ಹಾಗು EPIC ನಂಬರ್ ಮಾಹಿತಿ ನೀಡಬೇಕು. ಒಂದು ಬಾರಿ ದಾಖಲಾತಿ ಪರಿಶೀಲನೆ ಆದ ನಂತರ ನಿಮ್ಮ ಆಧಾರ್ ಹಾಗು ವೋಟರ್ ಐಡಿ ಲಿಂಕ್ ಆಗುತ್ತದೆ.