Interesting

Traffic Rules: ಟ್ರಾಫಿಕ್ ಚಲನ್ ಕಟ್ಟದೆ ಹೋದರೆ ನಿಮ್ಮ ಲೈಸನ್ಸ್ ರದ್ದು. ಹೊಸ ನಿಯಮ ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ.

ಟ್ರಾಫಿಕ್ ನಿಯಮ (traffic Rules) ಉಲ್ಲಂಘನೆ ಮಾಡುವವರಿಗೆ ಕಠಿಣ ಕಾನೂನು ಕ್ರಮ ಏಪ್ರಿಲ್ 1 ರಿಂದ ಜಾರಿಗೆ ಬಂದಿದೆ. ಬಹಳ ಸಮಯದಿಂದ ಟ್ರಾಫಿಕ್ ಉಲ್ಲಂಘನೆ ಮಾಡಿ ಚಲನ್ ಕಟ್ಟದೆ ಇರುವವರಿಗೆ ಕಠಿಣ ಕ್ರಮ ದ ಎಚ್ಚರಿಕೆ ಟ್ರಾಫಿಕ್ ಪೊಲೀಸ್ ಇಲಾಖೆ ನೀಡಿದೆ. ಚಲನ್ ಮೊತ್ತ ಕಟ್ಟದೆ ಇರುವವರ ಲೈಸನ್ಸ್ ರದ್ದು ಮಾಡುವುದಾಗಿ ಇಲಾಖೆ ಹೇಳಿದೆ. ಇನ್ನು ಆನ್ಲೈನ್ ಚಲನ್ ಕಟ್ಟುವವರ ಸಂಖ್ಯೆ ತೀರಾ ಕಡಿಮೆ ಇದೆ. ಇದನ್ನು ಸರಿದೂಗಿಸಲು ಸರಕಾರ ಈ ಚಿಂತನೆ ನಡೆಸಿದೆ.

ಹೊಸ (Traffic Rule) ನಿಯಮ ಏಪ್ರಿಲ್ 1 ರಿಂದ ಬರುವ ಪ್ರಕಾರ ಒಬ್ಬ ವ್ಯಕ್ತಿ ನಿಯಮ ಉಲ್ಲಂಘನೆ ಮಾಡಿದಕ್ಕೆ ಚಲನ್ ಆನ್ಲೈನ್ ಮೊತ್ತ ಪಾವತಿ ಮಾಡಬೇಕಾಗುತ್ತದೆ. ಒಂದು ವೇಳೆ 3 ತಿಂಗಳ ಒಳಗೆ ಈ ಪೆನಾಲ್ಟಿ ಕಟ್ಟದೆ ಹೋದರೆ ಆತನ ಡ್ರೈವಿಂಗ್ ಲೈಸನ್ಸ್ 3 ತಿಂಗಳವರೆಗೆ ಅಮಾನತು ಮಾಡಲಾಗುತ್ತದೆ. ಒಂದು ಆರ್ಥಿಕ ವರ್ಷದಲ್ಲಿ 3 ಬಾರಿ ಕೆಂಪು ದೀಪ ಅಥವಾ careless ಚಲನೆಗೆ ಮೂರೂ ತಿಂಗಳ ಲೈಸನ್ಸ್ ಅಮಾನತಾಗುತ್ತದೆ. ಹಾಗೇನೇ ಆನ್ಲೈನ್ ಚಲನ್ ಪಾವತಿದಾರರ ಸಂಖ್ಯೆ ಕೇವಲ 40% ಅಷ್ಟೇ ಇದೆ ಎಂದು ಮಾಧ್ಯಮ ವರದಿ ಹೇಳುತ್ತದೆ.

ಈ ಕಠಿಣ ನಿಯಮದ ಜೊತೆಗೆ ಸರಕಾರ ಇನ್ನೊಂದು ಹೆಜ್ಜೆ ತಗೊಂಡಿದೆ. 2 ಚಲನ್ ಕಟ್ಟದೆ ಹೋದಂತಹವರಿಗೆ ಇನ್ಶೂರೆನ್ಸ್ ಪ್ರೀಮಿಯಂ ಹಣ ಕೂಡ ಹೆಚ್ಚು ಮಾಡುವ ಚಿಂತನೆ ಸರಕಾರ ನಡೆಸಿದೆ. ಅದೇ ರೀತಿ ಸಿಸ್ಟಮ್ ಎರರ್ ಅಥವಾ ಲೇಟ್ ಆಗಿ ಚಲನ್ ತಲುಪುವ ಸಮಸ್ಯೆ ಬಗೆಹರಿಸುವ ಬಗೆಯು ಸರಕಾರ ಕ್ರಮ ಕೈಗೊಳ್ಳಲಿದೆ. ಅದೇ ರೀತಿ ನಿಮ್ಮ ಮೊಬೈಲ್ ಗೆ ಟೆಕ್ಸ್ಟ್ ಮೆಸೇಜ್ ಕಲಿಸುವ ಸೌಲಭ್ಯ ಕೂಡ ಬರಲಿದೆ. ಇನ್ನು ಚಲನ್ ಹಣ ಕಟ್ಟುವವರ ರಾಜ್ಯವಾರು ಸಂಖ್ಯೆ ನೋಡಿದರೆ ದೆಹಲಿಯಲ್ಲಿ ಕೇವಲ 14%, ಕರ್ನಾಟಕದಲ್ಲಿ 21% ಆನ್ಲೈನ್ ಮೂಲಕ ಕಟ್ಟಲಾಗುತ್ತಿದೆ. ಇನ್ನು ತಮಿಳ್ ನಾಡು ಹಾಗು ಉತ್ತರಪ್ರದೇಶದಲ್ಲಿ 27% ಜನರು ಆನ್ಲೈನ್ ಪಾವತಿ ಮಾಡುತ್ತಾರೆ. ಮಹಾರಾಷ್ಟ್ರದಲ್ಲಿ 62% ಹಾಗು ಹರ್ಯಾಣದಲ್ಲಿ 76% ಚಲನ್ ರಿಕವರಿ ಆಗಿದೆ.

Leave a Reply

Your email address will not be published. Required fields are marked *