BusinessTrending

Budget 2025: ಮಾಧ್ಯಮ ವರ್ಗದ ಜನರಿಗೆ ಸಿಗಲಿದೆಯೇ ಸಿಹಿ ಸುದ್ದಿ? 15 ಲಕ್ಷದವರೆಗಿನ ಆದಾಯದ ಮೇಲೆ ತೆರಿಗೆ ವಿನಾಯಿತಿ ಘೋಷಣೆ ಮಾಡಲಿದ್ದಾರೆಯೇ ನಿರ್ಮಲ ಸೀತಾರಾಮನ್?

ಮಾಧ್ಯಮ ವರ್ಗದವರಿಗೂ (Middle Class) ಸರಕಾರ ಆದಾಯ ತೆರಿಗೆ ವಿನಾಯಿತಿ (Tax Exemption) ನೀಡಬಹುದು ಮುಂದಿನ ದಿನಗಳಲ್ಲಿ. ಇದರ ಬಗ್ಗೆ ಇನ್ನು ಯಾವ ಘೋಷಣೆಗಳು ಆಗಿಲ್ಲ. ಫೆಬ್ರವರಿ 1 ರಂದು ಮಂಡಿಸಲಿರುವ ಸಾಮಾನ್ಯ ಬಜೆಟ್ ನಲ್ಲಿ (Budget 2025) ಈ ಘೋಷಣೆ ಮಾಡಬಹುದು ಎಂದು ಹೇಳಲಾಗುತ್ತಿದೆ. ರಿಯುಟರ್ಸ್ ಸುದ್ದಿಸಂಸ್ಥೆ ಈ ಸುದ್ದಿ ಪ್ರಸಾರ ಮಾಡಿದ್ದು 15 ಲಕ್ಷ ವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಸಿಗಲಿದೆ ಎಂದು ಹೇಳಿದೆ.

ಮಾಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ನೀಡಲು ಸರಕಾರ ಬಯಸಿದೆ. ದೇಶ ಆರ್ಥಿಕ ಹಿಂಜರಿತದಿಂದ ಮೇಲೇಳಲು ಹಾಗೇನೇ ಜನರು ಇನ್ನಷ್ಟು ಹೆಚ್ಚಿನ ವಸ್ತುಗಳನ್ನು ಖರೀದಿ ಮಾಡಲು ಪ್ರೋತ್ಸಾಹಿಸಲು ಈ ನಿರ್ಧಾರ ಸರಕಾರ ತಗೋಳಲಿದೆ ಎಂದು ಹೇಳಲಾಗುತ್ತಿದೆ. ಇದು ನಡೆದರೆ ಕೋಟ್ಯಂತರ ತೆರಿಗೆ ದಾರರು ಲಾಭ ಪಡೆಯಲಿದ್ದಾರೆ.

ವಾರ್ಷಿಕವಾಗಿ 15 ಲಕ್ಷ ಆದಾಯ ದ ಮೇಲೆ ಎಷ್ಟು ತೆರಿಗೆ ವಿನಾಯಿತಿ ಸಿಗಲಿದೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇದುವರೆಗೂ ಬಹಿರಂಗವಾಗಿಲ್ಲ. ಕಡಿತದ ಗಾತ್ರದ ಬಗ್ಗೆಯೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡರು ಫೆಬ್ರವರಿ 1 ರಂದು ನಿರ್ಮಲ ಸೀತಾರಾಮನ್ (Nirmala Sitaraman) ಅವರು ಮಂಡಿಸಲಿರುವ ಸಾಮಾನ್ಯ ಬಜೆಟ್ ರಂದು ಗೊತ್ತಾಗಲಿದೆ.

ಸದ್ಯಕ್ಕೆ ಇರುವ ಆದಾಯ ತೆರಿಗೆ ಪದ್ದತಿಯಲ್ಲಿ ಎರಡು ವಿಧಗಳಿವೆ. ಒಂದು ಹೊಸದು ಮತ್ತೊಂದು ಹಳೆಯ ತೆರಿಗೆ ಪದ್ಧತಿ. ಹೊಸ ತೆರಿಗೆ ಪದ್ಧತಿ 2020 ರಲ್ಲಿ ಜಾರಿಗೊಡಿದ್ದು ಈ ಪದ್ದತಿಯಲ್ಲಿ ಯಾವುದೇ HRA ಹಾಗು ಇನ್ನಿತರ ಅಲವೆನ್ಸ್ ಕಡಿತ ಇಲ್ಲದೆ ನೇರವಾಗಿ 7 ಲಕ್ಷದ ವರೆಗೆ ತೆರಿಗೆ ವಿನಾಯಿತಿ ಸಿಗುತ್ತಿತ್ತು. ಈ ಪದ್ದತಿಯಲ್ಲಿ 3 ಲಕ್ಷದಿಂದ 15 ಲಕ್ಷದವರೆಗಿನ ಆದಾಯಕ್ಕೆ ಶೇಕಡಾ 5% ರಿಂದ 20% ರ ವರೆಗೆ ತೆರಿಗೆ ವಿಧಿಸಲಾಗುತ್ತಿತ್ತು. ಇದಕ್ಕಿಂತ ಹೆಚ್ಚಿನ ಸಂಬಳದ ಮೇಲೆ 30% ತೆರಿಗೆ ಹಾಕಲಾಗುತ್ತದೆ.

income tax relief
xr:d:DAFWHHYUTLY:473,j:2186894183751379576,t:23071504

ಮಾಧ್ಯಮ ವರ್ಗದವರ ಮೇಲೆ ಯಾಕೆ ಮೋದಿ ಸರಕಾರದ ಫೋಕಸ್?

ಮಾಧ್ಯಮ ವರ್ಗದವರಿಗೆ ಸರಕಾರ ಆದಾಯ ತೆರಿಗೆ ಕಡಿತಗೊಳಿಸಿದರೆ ಅಂತವರ ಕೈಗೆ ಹೆಚ್ಚು ಹಣ ಬರುತ್ತದೆ. ಈ ಹಣ ದೇಶದ ಆರ್ಥಿಕತೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ವಾಸ್ತವವಾಗಿ ಸೆಪ್ಟೆಂಬರ್ ತ್ರೈ ಮಾಸಿಕದಲ್ಲಿ ದೇಶದ ಜಿಡಿಪಿ (GDP) 7% ಗಿಂತ ಕಡಿಮೆ ದಾಖಲಾಗಿತ್ತು. ಈ ತೆರಿಗೆ ಕಡಿತದಿಂದ ಜನರ ಕೈಗೆ ಹೆಚ್ಚು ಹಣ ಬರುತ್ತದೆ ಹಾಗೇನೇ ಅವರು ಈ ಹಣದಿಂದ ಹೆಚ್ಚಿನ ಖರ್ಚು ಮಾಡುತ್ತಾರೆ. ಇದರಿಂದ ದೇಶದ ಕುಂಠಿತಗೊಂಡ ಜಿಡಿಪಿ ಸುಧಾರಿಸುತ್ತದೆ ಎನ್ನುವುದು ಸರಕಾರದ ಆಲೋಚನೆ.

ಆರ್ಥಿಕತೆ ಮಾತ್ರವಲ್ಲದೆ ಸರಕಾರ ಪ್ರಸ್ತುತವಾಗಿ ಮಾಧ್ಯಮ ವರ್ಗದ ಜನರಿಂದ ಅನೇಕ ರೀತಿಯ ಟೀಕೆಗಳನ್ನು ಎದುರಿಸುತ್ತಿದೆ. ಮಾಧ್ಯಮ ವರ್ಗದವರು ಹಣದುಬ್ಬರದಿಂದ (Inflation) ಹೆಚ್ಚಿನ ಹಾನಿಗೊಳಗಾಗುತ್ತಿದ್ದಾರೆ. ಮಾಧ್ಯಮ ವರ್ಗಕ್ಕೆ ಸರಕಾರದ ವತಿಯಿಂದ ಯಾವುದೇ ವಿಶೇಷ ಪರಿಹಾರ ಸಿಗುತ್ತಿಲ್ಲ. ಹಣದುಬ್ಬರಕ್ಕೆ ಹೋಲಿಸಿದರೆ ಸಂಬಳದ ಹೆಚ್ಚಳ ತುಂಬಾ ಕಡಿಮೆಯಾಗಿದೆ. ಹಣದುಬ್ಬರದಿಂದಾಗಿ ಸಾಬೂನು ನಿಂದ ಹಿಡಿದು ದ್ವಿಚಕ್ರ ವಾಹನ, ಕಾರುಗಳ ವರೆಗೆ ಬೇಡಿಕೆ ಕಡಿಮೆಯಾಗಿದೆ. ಮಾಧ್ಯಮ ವರ್ಗದ ಜನರೇ ಈ ವಸ್ತುಗಳ ಮುಖ್ಯ ಖರೀದಿದಾರರು. ಆದಾಯ ತೆರಿಗೆ ವಿನಾಯಿತಿ ನೀಡುವ ಮೂಲಕ ಮಾಧ್ಯಮ ವರ್ಗದವರನ್ನು ಖುಷಿ ಪಡಿಸಲು ಸರಕಾರ ಯೋಚಿಸುತ್ತಿದೆ.

Leave a Reply

Your email address will not be published. Required fields are marked *