EPFO 3.0 : ಇನ್ನು ಮುಂದೆ PF ಹಣವನ್ನು ಏಟಿಎಂ ಮೂಲಕ ಹಣ ಪಡೆದುಕೊಳ್ಳಬಹುದು. ಕೇಂದ್ರ ಸರಕಾರ ಶೀಘ್ರದಲ್ಲೇ ಪ್ರಕಟಿಸಬಹುದು ಈ ಯೋಜನೆ.
ಕೇಂದ್ರ ಸರಕಾರದ ಪಾನ್ ೨.೦ (PAN 2.0) ಯೋಜನೆ ಪ್ರಕಟಿಸಿದ ಬೆನ್ನಲ್ಲೇ ಇದೀಗ EPFO 3.0 ಯೋಜನೆ ಬಗ್ಗೆಯೂ ಅನೇಕ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದೆ. ಯಾರೆಲ್ಲ ಪಿಎಫ್ (PF) ಚಂದಾದಾರರಾಗಿದ್ದೀರೋ ಅವರಿಗೆ ಅನೇಕ ಹೊಸ ಯೋಜನೆಗಳು ಶೀಘ್ರದಲ್ಲೇ ಜಾರಿಗೆ ಬರಲಿದೆ. ಅದೇ ರೀತಿ ಉದ್ಯೋಗಿಗಳ ಕೊಡುಗೆ ಅಂದರೆ Empolyee contribution ಮೇಲಿನ ಮಿತಿ ಅಂದರೆ ೧೨% ಅನ್ನು ಕೂಡ ತೆಗೆದುಹಾಕುವ ಸೂಚನೆ ಸಿಕ್ಕಿದೆ.
ಪಿಎಫ್ (PF) ಹೊಂದಿರುವವರು ನೇರವಾಗಿ ಏಟಿಎಂ ಮೂಲಕ ಪಿಎಫ್ ಹಣವನ್ನು ಹಿಂಪಡೆಯುವ ಆಯ್ಕೆಯನ್ನು ಶೀಘ್ರದಲ್ಲಿಯೇ ಕೇಂದ್ರ ಸರಕಾರ ಜಾರಿಗೆ ತರಬಹುದು. ಇದು ಜನರಿಗೆ ಹೆಚ್ಚಿನ ಅನುಕೂಲಕರವಾಗಿಸಲು ಕೇಂದ್ರ ಸರಕಾರದ ನಡೆಯಾಗಿದೆ.
ಉದ್ಯೋಗಿಗಳು ತಮ್ಮ ಉಳಿತಾಯದ ಆದ್ಯತೆ ಮೇಲೆ ತಮ್ಮ ಪಿಎಫ್ (PF) ಖಾತೆಗಳಿಗೆ ಕೊಡುಗೆ ನೀಡುವ ಬಗ್ಗೆ ಶೀಘ್ರದಲ್ಲೇ ಸರಕಾರದ ಸಹಮತ ಬರಬಹುದಾಗಿದೆ. ಅದೇ ರೀತಿ ಲಿಮಿಟ್ ಮೀರಿ ಕೂಡ ಉಳಿತಾಯ ಮಾಡುವ ವ್ಯವಸ್ಥೆ ಕೂಡ ಈ ಯೋಜನೆಯಲ್ಲಿ ಇರಲಿದೆ. ಆದರೆ ಎಂಪ್ಲಾಯರ್ ಕೊಡುಗೆ (Employer Contribution) ಸಂಬಳದ ಮೇಲೆ ಇವಾಗ ಎಷ್ಟಿದೆಯೋ ಅಷ್ಟೇ ಇರಲಿದೆ.
ಈ ಯೋಜನೆ ಇದೀಗ ಪ್ರಾಥಮಿಕ ಹಂತದಲ್ಲಿದೆ. ಜನರು ಹಣವನ್ನು ಹೆಚ್ಚು ಉಳಿತಾಯ (Higher savings) ಮಾಡುವಂತೆ ಪ್ರೋತ್ಸಾಯಿಸಲು ಈ ಯೋಜನೆ ಜಾರಿಗೆ ತರಲಾಗುತ್ತಿದೆ ಎನ್ನಲಾಗುತ್ತಿದೆ. ಹೆಚ್ಚು ಹಣವನ್ನ ಮುಂದಿನ ಪೆನ್ಷನ್ ಗಾಗಿ (Pension) ಕೂಡ ಬದಲು ಮಾಡುವ ಆಯ್ಕೆ ಈ ಹೊಸ ಯೋಜನೆಯಲ್ಲಿ ಇರಲಿದೆ ಎನ್ನಲಾಗುತ್ತಿದೆ. ಈ ಯೋಜನೆ ಮುಂಬರುವ ಜೂನ್ ೨೦೨೫ ರೊಳಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.