Waqf Amendment :ವಕ್ಫ್ ಬೋರ್ಡ್ ಕುರಿತು JPC ಮಹತ್ವದ ನಿರ್ಧಾರ ಕೈಗೊಂಡಿದೆ. ಈ 3 ಪ್ರಮುಖ ಬದಲಾವಣೆಯನ್ನು ಈ ಮಸೂದೆಯಲ್ಲಿ ಮಾಡಲಾಗುವುದು.
ವಕ್ಫ್ ತಿದ್ದುಪಡಿ ಮಸೂದೆ ಕುರಿತಾಗಿ ಮುಸ್ಲಿಂ ಸಮುದಾಯ ನೀಡಿದ ಅನೇಕ ದೂರುಗಳನ್ನು ಪರಿಹರಿಸಲಾಗಿದೆ. ಎಲ್ಲ ಪಕ್ಷಗಳ ನಾಯಕರೊಂದಿಗೆ ಚರ್ಚಿಸಿದ ನಂತರ ಜಂಟಿ ಸಂಸದೀಯ ಸಮಿತಿ ಅಂದರೆ JPC ಮಸೂದೆಯಲ್ಲಿ 14 ಬದಲಾವಣೆಗಳನ್ನು ಅಂಗೀಕಾರ ಮಾಡಿದೆ. ಆದರೆ 3 ಮುಖ್ಯ ಬದಲಾವಣೆಗಳು ಮುಸ್ಲಿಂ ಸಮುದಾಯದ ಜನರಿಂದ ಕೂಡ ಬೇಡಿಕೆಯಿದೆ. ಈ ಮಸೂದೆಯನ್ನು ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಮಂಡಿಸಲಾಗುವುದು. ಇಲ್ಲಿ ಅಂಗೀಕಾರ ಗೊಂಡರೆ ಇದು ಹೊಸ ಕಾನೂನಾಗಿ ಜಾರಿಗೆ ಬರಲಿದೆ.
JPC ಅಧ್ಯಕ್ಷತೆ ವಹಿಸಿದ ಜಗದಂಬಿಕಾ ಪಾಲ್ ಮಾತಾಡಿ, ಸಂಸದೀಯ ಸಮಿತಿ ಸದಸ್ಯರಿಂದ ತಿದ್ದುಪಡಿಗಳನ್ನ ಕೋರಿದ್ದೇವೆ. ಮಸೂದೆಯಲ್ಲಿ ಒಟ್ಟು 572 ತಿದ್ದುಪಡಿ ಮಾಡಲು ಸಲಹೆ ನೀಡಿದ್ದರು. ಇದರಲ್ಲಿ 44 ತಿದ್ದುಪಡಿಗಳ ಬಗ್ಗೆ ಚರ್ಚೆ ನಡೆಸಿದ್ದೇವೆ. ಬಹುಮತದ ಆಧಾರದಲ್ಲಿ ಸಮಿತಿಯು 14 ತಿದ್ದುಪಡಿಗಳನ್ನ ಅಂಗೀಕಾರ ಮಾಡಿದೆ.
ವಕ್ಫ್ ನಲ್ಲಿ 3 ದೊಡ್ಡ ಬದಲಾವಣೆಯನ್ನ JPC ಅನುಮೋದಿಸಿದೆ.
1. ಆಸ್ತಿಗಳು ವಕ್ಫ್ ನದ್ದು ಆಗಿದೆಯೋ ಇಲ್ಲವೇ ಎನ್ನುವುದನ್ನು ನಿರ್ಧರಿಸುವ ಹಕ್ಕನ್ನು ಜಿಲ್ಲಾಧಿಕಾರಿಗೆ ಮಸೂದೆಯಲ್ಲಿ ನೀಡಲಾಗಿತ್ತು. JPC ಅಲ್ಲಿ ಇದರ ಬದಲಾವಣೆ ಮಾಡಿದೆ. ಜಿಲ್ಲಾಧಿಕಾರಿ ಬದಲಿಗೆ ರಾಜ್ಯ ಸರ್ಕಾರ ಸೂಚಿಸಿದ ಅಧಿಕಾರಿ ಇದು ವಕ್ಫ್ ಅಸ್ತಿ ಹೌದೋ ಅಲ್ಲವೋ ಎಂದು ನಿರ್ಧಾರ ಮಾಡುತ್ತಾರೆ.
2. ರಾಜ್ಯ ಹಾಗು ಕೇಂದ್ರ ವಕ್ಫ್ ಕೌನ್ಸಿಲ್ ನಲ್ಲಿ ಕನಿಷ್ಠ ಇಬ್ಬರು ಮುಸ್ಲಿಮೇತರ ಸದಸ್ಯರು ಇರಬೇಕೆನ್ನುವ ನಿಯಮವಿದೆ. ಈ ಸಮಿತಿಯಲ್ಲಿ ಇದಕ್ಕೆ ಒಪ್ಪಿಗೆ ನೀಡಲಾಗಿದೆ.
3. ವಿವಾದಿತ ಆಸ್ತಿಗಳು ಅಥವಾ ಪ್ರಶ್ನಾರ್ಹ ಆಸ್ತಿಗಳು ಈಗಾಗಲೇ ನೋಂದಾಯಿಸಿರುವವರಿಗೆ ಹಿಂದಿನ ಕಾನೂನು ಅನ್ವಯಿಸುವುದಿಲ್ಲ. ವಕ್ಫ್ ನ 90% ಹೆಚ್ಚಿನ ಆಸ್ತಿಗಳು ನೋಂದಾಯಿಸಿಲ್ಲ ಹಾಗಾಗಿ ಕಾಂಗ್ರೆಸ್ ಹಾಗು jpc ಸದಸ್ಯ ಇಮ್ರಾನ್ ಮಸೂದ್ ಇದಕ್ಕೆ ಆಕ್ಷೇಪ ಹೇರಿದ್ದಾರೆ. ಇದರ ಬಗೆಗಿನ ಇನ್ನು ಸ್ಪಷ್ಟ ಮಾಹಿತಿ ಇನ್ನು ಸಿಗಬೇಕಾಗಿದೆ.