ಮಹಿಳೆಯರ ರೀತಿಯಲ್ಲಿ ಉಡುಗೆ ತೊಟ್ಟು ಗರ್ಬ (Garba ) ನೃತ್ಯ ಆಡುವ ಜನರು! ಇದರ ಹಿಂದಿನ ಕಥೆ ಏನು?

0

ಭಾರತದ ಉದ್ದಗಲಕ್ಕೂ ಭಿನ್ನ ಭಿನ್ನ ಸಂಪ್ರದಾಯ ಆಚರಣೆಗಳು ಚಾಲ್ತಿಯಲ್ಲಿದೆ. ಭಾರತದ ಭಿನ್ನ ವಿಭಿನ್ನ ಆಚರಣೆಗಳ ಕಾರಣದಿಂದ ಪ್ರಪಂಚಾದಾದ್ಯಂತ ಹೆಸರುವಾಸಿ ಆಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ಆಚರಣೆಗಳು ನಡೆಯುತ್ತದೆ. ಹಬ್ಬ ಒಂದೇ ಆದರೂ ಬೇರೆ ಬೇರೆ ಹೆಸರಿನಲ್ಲಿ ವಿಭಿನ್ನವಾಗಿ ಆಚರಿಸಲ್ಪಡುತ್ತದೆ. ನಿನ್ನೆಯಷ್ಟೇ ಮುಕ್ತಾಯಗೊಂಡ ನವರಾತ್ರಿ ಹಬ್ಬವನ್ನೇ ತೆಗೆದುಕೊಂಡರೆ ದೇಶದ ಬೇರೆ ಬೇರೆ ಭಾಗಗದಲ್ಲಿ ಆಯಾ ಪ್ರದೇಶಕ್ಕೆ ಅನುಗುಣವಾಗಿ ಆಚರಣೆ ನಡೆಯುತ್ತದೆ. ಗುಜರಾತಿನ ಅಹ್ಮದಬಾದ್ ನಲ್ಲಿ ಗರ್ಬ ನೃತ್ಯ ಬಹಳ ಚಿರಪರಿಚಿತ.

ಗುಜರಾತಿನಲ್ಲಿ ಗರ್ಬ ನೃತ್ಯಗಳು ಬಹಳ ಹಾಸುಹೋಕ್ಕಾಗಿದೆ. ಇದು ಅಲ್ಲಿನ ಜನರ ಸಂಪ್ರದಾಯ. ನವರಾತ್ರಿ ಸಂಧರ್ಭ ಎಲ್ಲಾ ಕಡೆಗಳಲ್ಲೂ ಜನರೆಲ್ಲಾ ಒಟ್ಟಾಗಿ ಸೇರಿ ದೇವಿಯ ಆರಾಧನೆ ಮತ್ತು ಗರ್ಬ ನೃತ್ಯ ಕುಣಿಯುವ ಮೂಲಕ ನವರಾತ್ರಿ ಆಚರಣೆ ಮಾಡುತ್ತಾರೆ. ಗುಜರಾತ್ ಹೆಸರುವಾಸಿ ಆಗಿರುವುದು ಇದೆ ಗರ್ಬ ನೃತ್ಯದಿಂದ ಎಂದರು ತಪ್ಪಾಗಲಿಕ್ಕಿಲ್ಲ. ಆದರೆ ಈ ಒಂದು ನೃತ್ಯ ಕೇವಲ ಮಹಿಳೆಯರು ಹೆಚ್ಚಾಗಿ ಮಾಡುತ್ತಾರೆ. ಆದರೆ ವಿಚಿತ್ರ ಎಂಬಂತೆ ಇಲ್ಲಿ ಗಂಡಸರು ಮಹಿಳೆಯರ ಉಡುಗೆ ತೊಟ್ಟು ಗರ್ಬ ನೃತ್ಯದಲ್ಲಿ ಭಾಗವಹಿಸುತ್ತಾರೆ. ಇದೊಂದು ಸಂಪ್ರದಾಯ ಆಗಿದ್ದು ಬನ್ನಿ ಇದರ ಬಬಗ್ಗೆ ತಿಳಿಯೋಣ.

200 ವರ್ಷಗಳ ಹಳೆಯ ಕಾಲದ ಸಂಪ್ರದಾಯ ಇದಾಗಿದ್ದು ಇದನ್ನು ‘ಶೇರಿ ಗರ್ಬ’ (Sheri Garba )ಎನ್ನುತ್ತಾರೆ. ಬಾರೋಟ್ ಜನಾಂಗಕ್ಕೆ ಸೇರಿದ ಜನರು ಈ ಗರ್ಬ ನೃತ್ಯದಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಇದಕ್ಕೆ ಹಿನ್ನಲೆಯಿದೆ ಹಿಂದೊಮ್ಮೆ ಸಾಧುಬ ಎಂಬ ಹೆಣ್ಣು ಮಗಳೊಬ್ಬಳು ಸಂಕಷ್ಟದಲ್ಲಿ ಇರುವಾಗ ನೆರೆದಿದ್ದ ಪುರುಷರ ಬಳಿ ಸಹಾಯಕ್ಕೆ ಅಂಗಲಾಚಿದ್ದಳು ಆದರೆ ಯಾರು ಆಕೆಯ ಸಹಾಯಕ್ಕೆ ಬರಲಿಲ್ಲ. ಈ ಸಂಧರ್ಭದಲ್ಲಿ ಆಕೆ ಎಲ್ಲರಿಗೂ ಶಾಪ ಇಟ್ಟಿದ್ದು ಪ್ರತಿ ವರ್ಷ ಹೆಂಗಸರ ತರ ವೇಷ ಭೂಷಣ ಧರಿಸಿ ನೃತ್ಯ ಮಾಡುವಂತೆ ಆಗಲಿ ಎಂದು. ಅಲ್ಲಿಂದ ನಂತರ ಆರಂಭ ಆದ ಈ ಪದ್ಧತಿ ಈಗಲೂ ಮುಂದುವರೆದು ಬಂದಿದೆ. ಅದೇನೇ ಇರಲಿ ಇಂತಹ ವಿಭಿನ್ನ ಆಚರಣೆಗಳು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ.

Leave A Reply

Your email address will not be published.