BusinessInteresting

ಬಿಗ್ ನ್ಯೂಸ್: ಇನ್ನು ಮುಂದೆ UPI ಪೇಮೆಂಟ್ ಕೇವಲ 15 ಸೆಕೆಂಡ್ ಗಳಲ್ಲಿ ಮಾಡಬಹುದು. ಹೊಸ ನಿಯಮ ಜೂನ್ 16 ರಿಂದ ಜಾರಿಗೆ ಬರಲಿದೆ.

ಇನ್ನು ಮುಂದೆ UPI ಪೇಮೆಂಟ್ ಮತ್ತಷ್ಟು ವೇಗವಾಗಿರಲಿದೆ. ದೊಡ್ಡ ಬದಲಾವಣೆ ಈ ಪೇಮೆಂಟ್ ಸಿಸ್ಟಮ್ ಅಲ್ಲಿ ಮಾಡಲಾಗುತ್ತಿದೆ. ದಿ ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI) ಹೊಸ ಬದಲಾವಣೆ ಮಾಡಿದೆ. ಇದರಿಂದ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ ಸೇವೆ ವೇಗವಾಗಲಿದೆ. ಪಾವತಿ ಸ್ಥಿತಿ ಹಾಗು ಪಾವತಿ ಸಮಯ 30 ಸೆಕೆಂಡ್ ಗಳಿಂದ ಕೇವಲ 15 ಸೆಕೆಂಡ್ ಗಳಿಗೆ ಇಳಿಸಲಾಗುತ್ತಿದೆ.

Read this : Price Hike: ಇಂದಿನಿಂದ ದೇಶದಲ್ಲಿ ಈ 5 ಬದಲಾವಣೆ ಜಾರಿಯಾಗಿದೆ. ಏಟಿಎಂ ಬಳಕೆ ಮಾಡುವ ಮೊದಲು ಈ ನಿಯಮ ಇಂದೇ ತಿಳಿದುಕೊಳ್ಳಿ.

ಈ ಪ್ರಕ್ರಿಯೆ ಇಂದ ಎಲ್ಲ ಗ್ರಾಹಕರಿಗೆ UPI ಮೂಲಕ ಹಣ ಪಾವತಿಸುವ ಹಾಗು ಕಳುಹಿಸುವ ಪ್ರಕ್ರಿಯೆಯ ವೇಗವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವುದು ಇದರ ಮುಖ್ಯ ಉದ್ದೇಶ. ಏಪ್ರಿಲ್ 26 ರಂದು ಹೊರಡಿಸಲಾದ ಸುತ್ತೋಲೆಯಲ್ಲಿ NPCI ಎಲ್ಲ ಬ್ಯಾಂಕ್ ಗಳಿಗೆ ಮತ್ತು ಪಾವತಿ ಅಪ್ಲಿಕೇಶನ್ ಗಳಿಗೆ ಜೂನ್ 16 2025 ರಿಂದ ಹೊಸ ಸಂಸ್ಕರಣಾ ನಿಯಮಗಳನ್ನು ಜಾರಿಗೆ ತರುವಂತೆ ಆದೇಶ ಮಾಡಲಾಗಿದೆ.

UPI ಮೂಲಕ ದೇಶದಲ್ಲಿ ಪ್ರತಿ ತಿಂಗಳು ಸುಮಾರು 25 ಲಕ್ಷ ಕೋಟಿ ರೂಪಾಯಿ ಮೌಲ್ಯದ ಡಿಜಿಟಲ್ ವ್ಯವಹಾರ ನಡೆಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ NPCI ಯಾ ಈ ಹೊಸ ಕ್ರಮವು UPI ನ ವೇಗ ಹಾಗು ಗ್ರಾಹಕರ ವಿಶ್ವಾಸಾರ್ಹತೆಯನ್ನು ಸುಧಾರಿಸುವ ನಿರೀಕ್ಷೆಯಿಟ್ಟಿದೆ. ಈ ಬದಲಾವಣೆ ದೇಶದಲ್ಲಿ ಹೆಚ್ಚುತ್ತಿರುವ ಡಿಜಿಟಲ್ ವ್ಯವಹಾರದ ಜನಪ್ರಿಯತೆಗಾಗಿ ಮಾಡಲಾಗಿದೆ. ಅಲ್ಲದೆ ಕಳೆದ ಎರಡು ತಿಂಗಳಿನಿಂದ UPI ಪಾವತಿಯಲ್ಲೂ ಅಡಚಣೆ ಉಂಟಾಗುತ್ತಿದ್ದು ಇದು API ಮೇಲೆ ಹೆಚ್ಚಿನ ಟ್ರಾನ್ಸಾಕ್ಷನ್ ರಿಕ್ವೆಸ್ಟ್ ನಿಂದ ಎಂದು NPCI ಹೇಳಿದೆ.

Leave a Reply

Your email address will not be published. Required fields are marked *