Aadhaar App: ಬಂದಿದೆ ಹೊಸ ಆಧಾರ್ ಆಫ್, ಇನ್ನು ಮುಂದೆ ಎಲ್ಲ ಸರಕಾರಿ, ಖಾಸಗಿ ಕೆಲಸಗಳಿಗೆ ಆಧಾರ್ ಕಾರ್ಡ್ ನೀಡುವ ಗೋಜಿಲ್ಲ. ಹೇಗೆ ಕೆಲಸ ಮಾಡುತ್ತದೆ? ಇಲ್ಲಿದೆ ಮಾಹಿತಿ.
ಮೋದಿ ಸರಕಾರ ಹೊಸ ಆಧಾರ್ ಅಪ್ಲಿಕೇಶನ್ (Aadhaar App) ಅನ್ನು ಬಿಡುಗಡೆ ಮಾಡಿದೆ. ಇದರಿಂದ ಬಳಕೆದಾರರಿಗೆ ಆಧಾರ್ ಸಂಬಂದಿತ ಪರಿಶೀಲನೆಗೆ ಬೌತಿಕ ಆಧಾರ್ ಕಾಪಿ ಪ್ರತಿ ಅಗತ್ಯವಿರುವುದಿಲ್ಲ. ಇದರ ಬಗ್ಗೆ ಮಾಹಿತಿ ತಂತ್ರಜ್ಞಾನ ಸಚಿವ ಅಷ್ವಿನ್ ವೈಷ್ಣವ್ ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
X ನಲ್ಲಿ ಬಿಡುಗಡೆಯಾದ ಈ ವಿಡಿಯೋ ಈ ಹೊಸ ಅಪ್ಲಿಕೇಶನ್ (Aadhaar App) ಮೂಲಕ ಫೇಸ್ ಐಡಿ ದೃಡೀಕರಣ ಸಾಧ್ಯವಾಗುತ್ತದೆ. ಬಳಕೆದಾರರ ಮಾಹಿತಿ ಅನ್ನು ಅವರ ಸಮ್ಮತಿ ಮೂಲಕ ಹಂಚಿಕೊಳ್ಳಲಾಗುತ್ತದೆ ಎಂದು ಈ ವಿಡಿಯೋ ತೋರಿಸುತ್ತದೆ. ಪ್ರಸ್ತುತವಾಗಿ ಈ ಅಪ್ಲಿಕೇಶನ್ ಪರೀಕ್ಷಣಾ ಹಂತದಲ್ಲಿದೆ. ಇದು ಆಧಾರ್ ಕಾರ್ಡ್ ಪರಿಶೀಲನೆ ಮಾಡುವ ಕೆಲಸ ಮಾಡುತ್ತದೆ. ಹಾಗೇನೇ ಇದು ಬಳಕೆದಾರರ ಗೌಪ್ಯತೆ ಹೆಚ್ಚಿಸುವ ಸಾಧನ ಕೂಡ ಆಗಿದೆ.
ಈ ಹೊಸ ಆಧಾರ್ ನ ವೈಶಿಷ್ಟ್ಯಗಳು ಏನೇನು?

- ಬಳಕೆದಾರರು ಅಗತ್ಯಕ್ಕೆ ತಕ್ಕ ಮಾಹಿತಿ ಮಾತ್ರ ಹಂಚಿಕೊಳ್ಳಬಹುದು. ಇದರಿಂದ ವಯಕ್ತಿಕ ಮಾಹಿತಿ ಸುರಕ್ಷಿತವಾಗಿರುತ್ತದೆ.
- UPI ಪೇಮೆಂಟ್ ಮಾದರಿಯಲ್ಲೇ ಇದು ಕೂಡ QR ಕೋಡ್ ಸ್ಕ್ಯಾನ್ ಮಾಡುವ ಹಾಗೆ ಆಧಾರ್ parishilane ಕೂಡ ನಡೆಯುತ್ತದೆ.
- ಈಗ ಆಧಾರ್ ಫೋಟೋ ಕಾಪಿ ಪ್ರತಿ ಸ್ಕ್ಯಾನ್ ಮಾಡಬೇಕೆಂದಿಲ್ಲ. ಎಲ್ಲವು ಈ ಅಪ್ಲಿಕೇಶನ್ ಮೂಲಕ ಸಿಗುತ್ತದೆ.
- ಮುಖಗುರುತಿಸುವಿಕೆ ಮೂಲಕ ಆಧಾರ್ ಕಾರ್ಡ್ ಪರಿಶೀಲನೆ ಮಾಡಲಾಗುತ್ತದೆ. ಇದರಿಂದ ಭದ್ರತೆ ಇನ್ನೂ ಹೆಚ್ಚಾಗುತ್ತದೆ.
- ಹೋಟೆಲ್, ಅಂಗಡಿ, ಅಥವಾ ಪ್ರಯಾಣ ಚೆಕ್‌ಪೋಸ್ಟ್ ಗಳಲ್ಲಿ ಇನ್ನು ಮುಂದೆ ಈ ಅಪ್ಲಿಕೇಶನ್ ಮೂಲಕ ಆಧಾರ್ ಪರಿಶೀಲನೆ ನಡೆಸಬಹುದು.
- ೧೦೦% ಡಿಜಿಟಲ್ ಇರಲಿದ್ದು ನಿಮ್ಮ ಗುರುತು ಸಂಪೂರ್ಣ ಗೌಪ್ಯವಾಗಿರಲಿದೆ.
- ಡಿಜಿಟಲೀಕರಣದಿಂದ ನಿಮ್ಮ ಆದಾರ್ ದುರುಪಯೋಗ ಹಾಗು ಸೋರಿಕೆ ಕೂಡಾ ಕಡಿಮೆಯಾಗಲಿದೆ.
- ಆದಾರ್ ತಿರುಚುವಿಕೆ ಹಾಗೂ ವಂಚನೆ ಇದರಿಂದ ಸಾಧ್ಯವಿಲ್ಲ.