Agriculture Loan: ಯಾವುದೇ ಗ್ಯಾರಂಟಿ ಇಲ್ಲದೆ ಪಡೆಯುವ ಸಾಲದ ಮಿತಿ ಮೊದಲಿಗಿಂತ ಹೆಚ್ಚಿಸಿದ ಕೇಂದ್ರ ಸರಕಾರ.
ರೈತರನ್ನ ಆರ್ಥಿಕವಾಗಿ ಸಭಲೀಕರಣ ಗೊಳಿಸಲು ಕೇಂದ್ರ ಸರಕಾರ ಹಲವಾರು ಯೋಜನೆಗಳನ್ನ ಜಾರಿಗೊಳಿಸುತ್ತಿದೆ. ಇವುಗಳಲ್ಲಿ ಕೇಂದ್ರ ಸರಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಹಾಗು ಕಿಸಾನ್ ಬೆಲೆ ವಿಮ ಯೋಜನೆಗಳು ಕೂಡ ಒಂದು. ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿಗಳು ಇತ್ತೀಚಿಗೆ ಬ್ಯಾಂಕ್ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ರೈತರಿಗೆ ಗರಿಷ್ಟ ಸಾಲ ಒದಗಿಸಿ ಸ್ವಯಂ ಉದ್ಯೋಗಕ್ಕೆ ಸಹಾಯ ಮಾಡುವಂತೆ ಕೋರಿದ್ದರು. ಇದರ ಅಡಿಯಲ್ಲಿ RBI ರೈತರಿಗಾಗಿ ದೊಡ್ಡ ಹೆಜ್ಜೆ ಇಟ್ಟಿದೆ. ಹೌದು ದೇಶಾದ್ಯಂತ ರೈತರು ಗ್ಯಾರಂಟಿ ಇಲ್ಲದೆ ಮೊದಲಿಗಿಂತ ಹೆಚ್ಚಿನ ಸಾಲವನ್ನ (Agriculture Loan) ಪಡೆಯಲು ಸಾಧ್ಯವಾಗುತ್ತದೆ.
ಭಾರತೀಯ ರೆಸೆರ್ವ್ ಬ್ಯಾಂಕ್ (Reserve Bank Of India) ಜನವರಿ 1 ರಿಂದ ರೈತರಿಗೆ ಅಸುರಕ್ಷಿತ ಸಾಲದ ಮಿತಿಯನ್ನ ಹೆಚ್ಚಿಸಿದೆ. ಹೊಸ ವರ್ಷದಿಂದ ರೈತರು ಬ್ಯಾಂಕ್ಗಳಿಂದ 2 ಲಕ್ಷದವರೆಗೆ ಯಾವುದೇ ಗ್ಯಾರಂಟಿ ಇಲ್ಲದೆ ಸಾಲವನ್ನು ಪಡೆಯಬಹುದು. ಈ ಮೊದಲು ಇದರ ಮಿತಿ 1.6 ಲಕ್ಷ ರೂಪಾಯಿ ಇತ್ತು. RBI ರೈತರ ಸಾಲದ ಮಿತಿಯನ್ನು 40 ಸಾವಿರ ರೂಪಾಯಿ ಹೆಚ್ಚಿಸುವ ಮೂಲಕ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ದೇಶದ ಸುಮಾರು 86% ರಷ್ಟು ರೈತರಿಗೆ ಸಹಾಯವಾಗಲಿದೆ.
ಇನ್ನು ಈ ಆದೇಶ ತ್ವರಿತವಾಗಿ ಜಾರಿಗೊಳಿಸುವಂತೆ ಹಾಗೇನೇ ಅತಿ ಹೆಚ್ಚು ರೈತರಿಗೆ ಈ ಸಂದೇಶ ತಲುಪುವಂತೆ ಬ್ಯಾಂಕ್ ಗಳು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರಕಾರ ಹೇಳಿದೆ. ಈ ಕ್ರಮ ಕಿಸಾನ್ ಕ್ರೆಡಿಟ್ ಕಾರ್ಡ್ (Kisan credit card) ಸಾಲಗಳ ಪ್ರವೇಶದ ಹದಿ ಸುಗಮಗೊಳಿಸುತ್ತದೆ. ಹಾಗೇನೇ ಸರಕಾರದ ಪರಿಷ್ಕೃತ ಬಡ್ಡಿ ಹಾಗು ಸಬ್ಸಿಡಿ ಯೋಜನೆ ಗೆ ಪೂರಕವಾಗಲಿದೆ. KCC ಅಡಿಯಲ್ಲಿ ಈಗಾಗಲೇ ಸರಕಾರವು 4% ಬಡ್ಡಿ ರೂಪದಲ್ಲಿ 3 ಲಕ್ಷದಷ್ಟು ಸಾಲವನ್ನ ನೀಡುತ್ತಿದೆ. RBI ಈ ನಿಯಮದಿಂದ ಸುಮಾರು 12 ಕೋಟಿ ಗು ಅಧಿಕ ರೈತರಿಗೆ ಸಹಾಯವಾಗಲಿದೆ.
ಈಗಾಗಲೇ ಹೇಳಿದ ಹಾಗೆ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (Kisan Samman Nidhi) ಯೋಜನೆ ಅಡಿಯಲ್ಲಿ ಸುಮಾರು ಒಂಬತ್ತೂವರೆ ಕೋಟಿ 9.5 ಕೋಟಿ ರೈತರಿಗೆ ವಾರ್ಷಿಕವಾಗಿ 6000 ರೂಪಾಯಿಗಳ ನೆರವು ನೀಡಲಾಗುತ್ತಿದೆ. ಈ ಹಣ ರೈತರಿಗೆ ಮೂರೂ ಕಂತುಗಳಲ್ಲಿ ತಲಾ 2000 ರೂಪಾಯಿಗಳು ಹಣವನ್ನು ಸರಕಾರ ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡುತ್ತಿದೆ.