Information: 2000 ರೂಪಾಯಿ ನೋಟಿನ ಬಗ್ಗೆ RBI ಹೊಸ ಸೂಚನೆ ಹೊರಡಿಸಿದೆ. ಕೂಡಲೇ ಈ ಮಾಹಿತಿ ತಿಳಿಯಿರಿ.
Information: ಭಾರತೀಯ ರೆಸೆರ್ವ್ ಬ್ಯಾಂಕ್ ಬಿಡುಗಡೆ ಮಾಡಿದ 2000 ರೂಪಾಯಿ ನೋಟುಗಳಲ್ಲಿ ಸುಮಾರು 98.18% ರಷ್ಟು ನೋಟು ಹಿಂತಿರುಗಿದೆ ಎಂದು ಹೇಳಿದೆ. ಇದೀಗ ಮಾರುಕಟ್ಟೆಯಲ್ಲಿ ಸುಮಾರು 6471/- ಕೋಟಿ 2000 ರೂಪಾಯಿ ಅಷ್ಟೇ ಉಳಿದಿದೆ ಎಂದು ಹೇಳಿದೆ. 10 ಮೇ 2023 ರಂದು ಭಾರತೀಯ ರಿಸರ್ವ್ ಬ್ಯಾಂಕ್ 2000 ರೂಪಾಯಿ ಮುಖಬೆಲೆಯೇ ನೋಟುಗಳನ್ನೂ ಚಲಾವಣೆಯಿಂದ ಹಿಂಪಡೆಯಲು ನಿರ್ಧಾರ ಮಾಡಿತ್ತು. ಆ ಸಮಯದಲ್ಲಿ ಈ 2000 ನೋಟುಗಳ ಮೌಲ್ಯ ಮಾರುಕಟ್ಟೆಯಲ್ಲಿ 3.56 ಲಕ್ಷ ಕೋಟಿ ರೂಪಾಯಿ ಆಗಿತ್ತು. 28 ಫೆಬ್ರವರಿ 2025 ರ ಹೊತ್ತಿಗೆ ಅದು 6,471 ಕೋಟಿ ಗೆ ಬಂದು ನಿಂತಿದೆ.
RBI ಘೋಷಣೆಯ ನಂತರ ಅಕ್ಟೋಬರ್ 7, 2023 ರವರೆಗೆ ಎಲ್ಲ ಬ್ಯಾಂಕ್ ಗಳಲ್ಲಿ 2000 ರೂಪಾಯಿ ನೋಟುಗಳನ್ನ ಠೇವಣಿ ಹಾಗು ವಿನಿಮಯ ಮಾಡುವ ಸೌಲಭ್ಯವನ್ನು ನೀಡಲಾಗಿತ್ತು. ಈ ಗಡುವಿನ ನಂತರವೂ RBI ನ 19 ಶಾಖೆಗಳಲ್ಲಿ ಈ ಸೌಲಭ್ಯ ವಿಸ್ತರಿಸಲಾಗಿತ್ತು. ಈ ಸೌಲಭ್ಯ ಇಂದಿಗೂ ಮುಂದುವರೆಯುತ್ತಿದೆ. 2000 ಮುಖಬೆಲೆಯ ನೋಟು ಚಲಾವಣೆ ಇಲ್ಲ ಅಷ್ಟೇ ವಿನಃ ಅಮಾನ್ಯಕರಣ ಗೊಂಡಿಲ್ಲ. ಆದ್ದರಿಂದ ಈ ಹಣ ಇನ್ನು ಕೂಡ RBI ಕಚೇರಿಯಲ್ಲಿ ವಿನಿಮಯ ಮಾಡಿಕೊಳ್ಳಬಹುದು.
ಅಂಚೆ ಕಚೇರಿ ಮೂಲಕ 2000 ರೂ ಠೇವಣಿ ಇಡುವ ಸೌಲಭ್ಯ

ಇನ್ನು ಕೂಡ 2000 ಮುಖಬೆಲೆಯ ನೋಟಿದ್ದರೆ, ಅಂತವರು ಹತ್ತಿರದ ಯಾವುದೇ ಅಂಚೆ ಕಚೇರಿಗೆ ಹೋಗಿ ಅಲ್ಲಿ RBI ವಿತರಣಾ ಕಚೇರಿಗೆ ಈ ಹಣ ಕಲಿಸುವ ಮೂಲಕ ತಮ್ಮ ಬ್ಯಾಂಕ್ ಖಾತೆಗೆ ಹಣ ಜಮಾವಣೆ ಮಾಡಬಹುದು. ಈ ಸೌಲಭ್ಯ ದೇಶಾದ್ಯಂತ ಅಂಚೆ ಕಚೇರಿಯಲ್ಲಿ ಲಭ್ಯವಿದೆ. ಈ 2000 ರೂಪಾಯಿ ಇನ್ನು ಕಾನೂನುಬದ್ದವಾಗಿದೆ. RBI ಈ ನಿರ್ಧಾರ ಮಾರುಕಟ್ಟೆಯಲ್ಲಿ ಸಣ್ಣ ಮೊತ್ತದ ಮುಖಬೆಲೆಯ ನೋಟುಗಳನ್ನು ಚಲಾವಣೆ ಹೆಚ್ಚಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಅಲ್ಲದೆ 2000 ಮುಖಬೆಲೆಯ ನೋಟನ್ನು ಹಿಂಪಡೆದುದರಿಂದ ಕಪ್ಪು ಹಣ ನಿಯಂತ್ರಣ ಮಾಡಲು ಸಹಾಯವಾಗುತ್ತದೆ. ಇದರ ಬಗ್ಗೆ ನಾವು ಯೌಟ್ಯೂಬ್ ಅಲ್ಲಿ ಒಂದು ವಿಡಿಯೋ ಕೂಡ ಮಾಡಿದ್ದೇವೆ ನೋಡಲು ಇಲ್ಲಿ ಕ್ಲಿಕ್ ಮಾಡಿ.