SBI vs Post office: 2 ಲಕ್ಷ ರೂಪಾಯಿ FD ಉಳಿತಾಯ ಮಾಡುವುದಾದರೆ ಯಾವುದರಲ್ಲಿ ಹೂಡಿಕೆ ಮಾಡುವುದು ಸೂಕ್ತ?
ಉಳಿತಾಯ ಅಥವಾ ಹೂಡಿಕೆ ವಿಚಾರ ಬಂದಾಗ ಅನೇಕ ಜನರ ತಲೆಯಲ್ಲಿ ಬರುವುದು ಸ್ಥಿರ ಠೇವಣಿ ಅಥವಾ Fixed Deposit. FD ಒಂದು ಉತ್ತಮ ಹೂಡಿಕೆ ಆಯ್ಕೆ ಕೂಡಾ ಹೌದು. ಈ ಹೂಡಿಕೆಯಲ್ಲಿ ಹೂಡಿಕೆದಾರರು ಖಚಿತವಾಗಿ ಹೂಡಿದ ಹಣಕ್ಕಿಂತ ಹೆಚ್ಚಾಗಿ ಬಡ್ಡಿ ರೂಪದಲ್ಲಿ ಪಡೆಯುತ್ತಾರೆ. ಹಾಗೆನೇ ಹಣ ಕಳೆದುಕೊಳ್ಳುವ ಪ್ರಮೇಯ ಕೂಡಾ ಬರುವುದಿಲ್ಲ. FD ಅಂತ ಬಂದಾಗ ಅನೇಕರಿಗೆ ಸರಕಾರಿ ಬ್ಯಾಂಕ್‌ಗಳು ನೆನೆಪಿಗೆ ಬರುತ್ತವೆ. ಅದನ್ನು ಬಿಟ್ಟರೆ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವುದು ಕೂಡಾ ಒಂದು ಉತ್ತಮ ಆಯ್ಕೆಯಾಗಿದೆ.
ನೀವು Fixed deposit ನಲ್ಲಿ ಹಣ ಹೂಡಿಕೆ ಮಾಡುವುದಾದರೆ ಮೊದಲಿಗೆ ನೀವು ಈ ವಿಷಯವನ್ನು ತಿಳಿದುಕೊಳ್ಳಬೇಕಾಗುತ್ತದೆ. ಎಲ್ಲಿ ಅತೀ ಹೆಚ್ಚಿನ ಪ್ರತಿಶತ ಬಡ್ಡಿ ಸಿಗುತ್ತದೆ ಎನ್ನುವುದನ್ನು. ಇಂದು ನಾವು ನಿಮಗೆ SBI ಅಥವಾ ಪೋಸ್ಟ್ ಆಫೀಸ್ ಯಾವುದರಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂದು ಹೇಳಲಿದ್ದೇವೆ.
ನಮ್ಮ ದೇಶದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗೆ ಬಡ್ಡಿ ರೂಪದಲ್ಲಿ Fixed deposit ಮೇಲೆ 3.5% ರಿಂದ 6.5% ವರೆಗೆ ಬೇರೆ ಬೇರೆ ಕಾಲ ಮಿತಿಗೆ ಅನುಗುಣವಾಗಿ ರಿಟರ್ನ್ ನೀಡುತ್ತಿದೆ. ನೀವು 5 ವರ್ಷಗಳ ಕಾಲ ಮಿತಿಗೆ 2,00,000 ರೂಪಾಯಿ FD ನಲ್ಲಿ ಹೂಡಿಕೆ ಮಾಡಿದರೆ ನಿಮಗೆ ಮೆಚುರಿಟಿ ಹಣ 2,76,084/- ರವರೆಗೆ ಹಿಂದೆ ಸಿಗುತ್ತದೆ. 5 ವರ್ಷಕ್ಕೆ ಸುಮಾರು 6.5% ರಷ್ಟು ಬಡ್ಡಿ ಸಿಗುತ್ತದೆ.
ಅದೇ ರೀತಿ ಪೋಸ್ಟ್ ಆಫೀಸ್ (Post Office) ನಲ್ಲಿ ಟೈಮ್ ಡೆಪಾಸಿಟ್ ಇದು ಕೂಡಾ fixed deposit ಮಾದರಿಯೇ ಆಗಿದೆ. ನೀವು ಶುರುವಿಗೆ 1000 ಕೂಡಾ ಹೂಡಿಕೆ ಮಾಡಬಹುದು. ನೀವು 5 ವರ್ಷಗಳ ಅವಧಿಗೆ 2,00,000 ಹೂಡಿಕೆ ಮಾಡಿದರೆ ನಿಮಗೆ 5 ವರ್ಷಗಳ ನಂತರ 2,89,990 ಹಣ ಸಿಗುತ್ತದೆ. ಬಡ್ಡಿದರ ಗರಿಷ್ಠ 7.5% ರಷ್ಟು ನಿಮಗೆ ಸಿಗುತ್ತದೆ. ಆದ್ದರಿಂದ ನೀವು ಹೂಡಿಕೆ ಮಾಡುವಾಗ ಎಲ್ಲಾ ಬ್ಯಾಂಕ್ ಹಾಗು ಪೋಸ್ಟ್ ಆಫೀಸ್ ಬಡ್ಡಿದರ ಪರಿಶೀಲನೆ ನಡೆಸಿದ ನಂತರವೇ ಹೂಡಿಕೆ ಮಾಡುವುದು ಸೂಕ್ತ.