Interesting News: ಭಾನುವಾರ ನಮಗೆಲ್ಲ ರಜೆ ಸಿಗಲು ಕಾರಣ ಏನು? ಇದರ ಹಿಂದಿದೆ ಒಬ್ಬರ ಇಂಟೆರೆಸ್ಟಿಂಗ್ ಕಥೆ.
Interesting News: ಭಾನುವಾರ (Sunday) ಎಂದರೆ ಎಲ್ಲರಿಗೂ ಸಂತಸದ ದಿನ. ಶುಕ್ರವಾರ ಬಂತೆಂದರೆ ಭಾನುವಾರದ ಎಲ್ಲಾ ತಯಾರಿಗಳು ಶುರು ಆಗುತ್ತದೆ. ಸಿಗುವ ಒಂದು ರಜೆಯಲ್ಲಿ ಏನೆಲ್ಲಾ ಮಾಡಬೇಕು ಎಂದು ಮೊದಲೇ ಎಲ್ಲಾ ಪ್ಲಾನ್ ಮಾಡುತ್ತೇವೆ. ಈ ಭಾನುವಾರದ ರಜೆ ಬ್ರಿಟಿಷರು ನಮಗೆ ಕೊಟ್ಟದ್ದು ಎಂದು ಎಲ್ಲರೂ ಹೇಳುತ್ತಾರೆ ಆದ್ರ ನೈಜತೆ ಏನೆಂದರೆ ಇದನ್ನು ಕೊಟ್ಟದ್ದು ಅಲ್ಲ ನಾವು 7 ವರ್ಷಗಳ ಸತತ ಹೋರಾಟದಿಂದ ಪಡೆದದ್ದು. ವಿಚಿತ್ರ ಎನಿಸಿದರು ಸತ್ಯ ಇದು ಹಾಗಾದ್ರೆ ಈ ಭಾನುವಾರ ರಜಾ ದಿನದ ಹಿಂದಿರುವ ಇತಿಹಾಸ ಏನು ತಿಳಿಯೋಣ.
ಬ್ರಿಟಿಷರು ಭಾರತವನ್ನು ಆಕ್ರಮಿಸಿ ಭಾರತೀಯರ ಮೇಲೆ ದಬ್ಬಾಳಿಕೆ ನಡೆಸುತ್ತಾ ಇದ್ದರು. ಹಗಲು ರಾತ್ರಿ ಎನ್ನದೆ ಖಾರ್ಕಾನೆ ಗಳಲ್ಲಿ ಕತ್ತೆಯನ್ನು ದುಡಿಸಿದಂತೆ ದುಡಿಸುತ್ತಾ ಇದ್ದರು. ಏನೇ ಆರೋಗ್ಯ ಸಮಸ್ಯೆ ಎಂದರೂ ರಜೆ ಇಲ್ಲ, ವಿಶ್ರಾಂತಿ ಇಲ್ಲ. ಬರಿ ಕೆಲಸ ಕೆಲಸ ಎಂದೇ ತಮ್ಮ ಜೀವನ ಸವೆಸುತ್ತಿದ್ದರು. ಬದಲಾಗಿ ಬ್ರಿಟಿಷರು ಮಾತ್ರ ಎಲ್ಲಾ ಐಷರಾಮಿ ಜೀವನ ನಡೆಸುತ್ತಾ ಇದ್ದರು. ಭಾನುವಾರ ರಜೆಯನ್ನು ಆನಂದಿಸುತ್ತಾ ಇದ್ದರು. ಕಾರ್ಮಿಕರ ಕೆಲಸದವರ ಈ ಪರಿಸ್ಥಿತಿಯನ್ನು ನೋಡಲು ಆಗದೆ ಅವರ ಪರ ನಿಂತವರೇ ನಾರಾಯಣ ಮೇಘಜಿ ಲೋಕಂಡೆ ಅವರು.
ಹೌದು ಸತತವಾಗಿ 7 ವರ್ಷಗಳ ವರೆಗೆ ಬ್ರಿಟಿಷರ ವಿರುದ್ಧವಾಗಿ ಇವರು ಪ್ರತಿಭಟನೆ ಸಭೆ ನಡೆಸುತ್ತಾ ಜನರನ್ನು ಒಗ್ಗೂಡಿಸುತ್ತಾ ಇದ್ದರು. ಒಂದೆರಡು ದಿನ ಅಲ್ಲ 7 ವರ್ಷಗಳ ಸತತ ಹೋರಾಟದ ಫಲ ವಾಗಿ ಬ್ರಿಟಿಷರು ಜೂನ್ 10 1980 ರಲ್ಲಿ ಭಾನುವಾರವನ್ನು ರಜಾ ದಿನ ಎಂದು ಭಾರತಡಲ್ಲಿ ಘೋಷಣೆ ಮಾಡಿದರು. ನಮ್ಮ ಇತಿಹಾಸ ಬಹಳಷ್ಟು ಆಳವಾಗಿದೆ ಇಂದಿನ ಪ್ರತಿ ವಿಚಾರದಲ್ಲಿ ಹಿಂದೆ ಇತಿಹಾಸ ಒಂದು ಅಡಕವಾಗಿದೆ. ಅದೇನೇ ಇರಲಿ ನಾವು ಇಂದು ಅನುಭವಿಸುವ ಈ ಭಾನುವಾರದ ರಜೆಗೆ ನಮ್ಮ ಹಿಂದಿನವರ ಹೋರಾಟಕ್ಕೆ ಶ್ಲಾಘನೇ ಮಾಡಾಕೆ ಬೇಕು.