ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ (Smartphone) ನಮ್ಮ ಜೀವನದ ಅತ್ಯಗತ್ಯ ಭಾಗವಾಗಿದೆ. ಆದರೂ ಮಕ್ಕಳು ತಾವುಗಳು ಮಲಗುವಾಗ ತಮ್ಮ ಬಳಿ ಮೊಬೈಲ್ ಇಟ್ಟುಕೊಂಡು ಮಲಗುವುದರಿಂದ ಹೃದಯ ಸಂಬಂದಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಸ್ಮಾರ್ಟ್ಫೋನ್ ಗಳು ಅಂದರೆ ಮೊಬೈಲ್ ಗಳು ಹೊರಸೂಸುವ ವಿಕಿರಣಗಳು ಅಂದರೆ EMR ಹಾಗು ರೇಡಿಯೋ ಫ್ರೀಕ್ವೆನ್ಸಿ ತರಂಗಗಳು ಅಪಾಯಕಾರಿ ಪರಿಣಾಮಗಳನ್ನು ಉಂಟು ಮಾಡುತ್ತದೆ.
Read This: New Rules: ಪಾನ್ ಆಧಾರ್ ನಿಂದ ಹಿಡಿದು ರೈಲ್ವೆ ಟಿಕೆಟ್ ವರೆಗೂ ಜೂಲೈ 1 ರಿಂದ ಬದಲಾಗಲಿದೆ ನಿಯಮಗಳು.
ಮೊಬೈಲ್ ವಿಕಿರಣಗಳು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀಳುತ್ತದೆ?
- ಮೊಬೈಲ್ ಫೋನ್ (Smartphone) ವಿಕಿರಣಕ್ಕೆ ಧೀರ್ಘಕಾಲಕ್ಕೆ ಹೊಂದುಕೊಳ್ಳುವುದರಿಂದ ಹೃದಯ ಬಡಿತ ಹಾಗು ರಕ್ತದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಇದು ಹೃದ್ಯೋಗಕ್ಕೆ ಪ್ರಮುಖ ಅಪಾಯಕಾರಿ ಅಂಶಗಳಾಗಿವೆ ಎಂದು ಅಡ್ಯನಗಳು ತಿಳಿಸಿವೆ.
- ಮಲಗುವಾಗ ತಲೆ ಬಳಿ ಮೊಬೈಲ್ ಇಟ್ಟುಕೊಳ್ಳುವುದರಿಂದ ನಿದ್ರೆಗೆ ಬೇಕಾಗಿರುವ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಗೂ ಅಡ್ಡಿಯಾಗಬಹುದು. ಮಕ್ಕಳ ಹೃದಯದ ಆರೋಗ್ಯಕ್ಕೆ ನಿದ್ರೆ ಅತ್ಯಂತ ಅವಶ್ಯಕ.
- ವಿಕಿರಣದಿಂದಾಗಿ ಆಕ್ಸಿಡೇಟಿವ್ ಒತ್ತಡ ಹಾಗು ಉರಿಯೂತ ಉಂಟಾಗುವ ಸಾಧ್ಯತೆ ಇದೆ. ಇದು ರಕ್ತನಾಳಗಳಿಗೆ ಹನಿ ಉಂಟು ಮಾಡುವ ಸಾಧ್ಯತೆ ಹೆಚ್ಚಾಗಿರುವುದರಿಂದ, ಹೃದಯಾಘಾತಕ್ಕೆ ಎಡೆ ಮಾಡಿಕೊಡುತ್ತದೆ.
- ಮೊಬೈಲ್ (smartphone) ಇಂದಾಗಿ ರೇಡಿಯೋ ಫ್ರೀಕ್ವೆನ್ಸಿ ವಿಕಿರಣವು ವಿದ್ಯುತ್ ಚಟುವಟಿಕೆ ಉಂಟು ಮಾಡುತ್ತದೆ. ಇದು ಒಮ್ಮೆಲೇ ಪರಿಣಾಮ ಉಂಟು ಮಾಡದಿದ್ದರೂ ಕೂಡ ಕಾಲಾನಂತರದಲ್ಲಿ ಹೃದಯ ಬಡಿತಗಳನ್ನು ಪ್ರಚೋದಿಸುತ್ತದೆ ಎಂದು ಸಂಶೋದನೆಗಳು ಹೇಳುತ್ತದೆ.
ವಯಸ್ಕರಿಗಿಂತ ಮಕ್ಕಳು ವಿಕಿರಣಗಳಿಗೆ (Smartphone) ಹೆಚ್ಚು ಬೇಗ ತುತ್ತಾಗುತ್ತಾರೆ. ಅವರ ದೇಹ ಹಾಗು ಅಂಗಗಳು ಅಭಿವೃದ್ಧಿ ಹೊಂದುತ್ತಿರುತ್ತದೆ. ಹಾಗಾಗಿ ಮಕ್ಕಳ ದೇಹವು ಹೆಚ್ಚು ಸಂವೇದನಾಶೀಲವಾಗುರುತ್ತದೆ. ಕಣ್ಣುಗಳು ಕೂಡ ಸೂಕ್ಷ್ಮವಾಗಿರುತ್ತದೆ. ಪರದೆಯ ಮೇಲೆ ಹೆಚ್ಚಿನ ಸಮಯ ಕಳೆಯುವುದರಿಂದ ಮಕ್ಕಳ ನಿದ್ದೆ ಹಾಳಾಗುತ್ತದೆ.

ಮಲಗುವಾಗ ಮೊಬೈಲ್ (Smartphone) ಅನ್ನು ಆದಷ್ಟು ದೂರವಿಡಿ. ಕನಿಷ್ಠ 3-5 ಅಡಿ ದೂರದಲ್ಲಿಡಿ. ಇದು ಮಕ್ಕಳಿಗೆ ಅಲ್ಲದೆ ಎಲ್ಲ ವಯಸ್ಕರಿಗೂ ಮಾನ್ಯವಾಗುತ್ತದೆ. ಇನ್ನು ರಾತ್ರಿಯಲ್ಲಿ ಮೊಬೈಲ್ ಅನ್ನು ಏರೋಪ್ಲೇನ್ ಮೋಡ್ ನಲ್ಲಿಡಿ. ಫೋನ್ ಅಲಾರಾಂ ಬದಲು ಬೇರೆ ರೀತಿಯ ಅಲಾರಾಂ ಬಳಸಿಕೊಳ್ಳಿ. ನಿದ್ರೆಯ ಮೊದಲು 30-40 ನಿಮಿಷ ಮೊದಲೇ ಮೊಬಯ್ಲ್ ಅನ್ನು ಬಳಸುವುದು ನಿಲ್ಲಿಸಿ. ದೈಹಿಕ ಚಟುವಟಿಕೆಗಳನ್ನು ಹೆಚ್ಚು ಪ್ರೋತ್ಸಾಹಿಸಿ. ಇದರಿಂದ ಆದಷ್ಟು ಮೊಬೈಲ್ ಬಳಸುವುದು ಕಡಿಮೆಯಾಗುತ್ತದೆ. ಈ ಮಾಹಿತಿ ನಮಗೆ ಸಿಕ್ಕ ಆನ್ಲೈನ್ ಪೋರ್ಟಲ್ ಗಳಿಂದ ಸಂಗ್ರಹಿಸಲಾಗಿದೆ.