ತೆಲಂಗಾಣ ಬಿಜೆಪಿಯಲ್ಲಿ ಇದೀಗ ರಾಜಕೀಯ ಸಂಜಲನ ಮೂಡಿದೆ. ಇದೀಗ ಹೊಸ ಅಧ್ಯಕ್ಷರ ನೇಮಕಾತಿಯ ವಿಚಾರ ಮುನ್ನೆಲೆಗೆ ಬಂದಿದ್ದು ಮೂಲಗಳ ಮಾಹಿತಿ ಪ್ರಕಾರ ರಾಮಚಂದ್ರ ರಾವ್ ತೆಲಂಗಾಣ ಬಿಜೆಪಿ ಅಧ್ಯಕ್ಷ ಸ್ಥಾನ ಏರಲಿದ್ದಾರೆ. ಮಾಜಿ ಅಧ್ಯಕ್ಷರು ಮತ್ತು ಶಾಸಕರು ಆಗಿರುವಂತ ಟಿ ರಾಜ ಇವರು ಸದಾ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತಾರೆ. ಯಾವಾಗಲೂ ತಮ್ಮ ಭಾಷಣದಿಂದ ಸದಾ ಕಾಂಟ್ರವರ್ಸಿಯಲ್ಲಿ ಇರುತ್ತಾರೆ. ಆದ್ದರಿಂದಾಗಿ ಟಿ ರಾಜರ ಬದಲಿಗೆ ರಾಮಚಂದ್ರ ಅವರಿಗೆ ಮಣೆ ಹಾಕಿದೆ.
ವಿಷಯ ಹೊರಗೆ ಬರುತ್ತಿದ್ದಂತೆ ಹಿಂದೂ ಫೈರ್ ಬ್ರಾಂಡ್ ನಾಯಕ ಟಿ ರಾಜ ಅವರು ತೆಲಂಗಾಣ ಬಿಜೆಪಿ ಮತ್ತು ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಯಾರು ಊಹಿಸಿದ ರೀತಿಯಲ್ಲಿ ಟಿರಾಜಾವರು ತಮ್ಮ ದಾಳವನ್ನು ಮುನ್ನಡೆಸಿದ್ದಾರೆ. ಈಗ ಕೇಂದ್ರದ ನಾಯಕರು ಇದನ್ನು ಯಾವ ರೀತಿಯಲ್ಲಿ ಪರಿಗಣಿಸುತ್ತಾರೆ ಎಂದು ಕಾದು ನೋಡಬೇಕು. ಟಿ ರಾಜಾ ಅವರ ಮನಒಲಿಕೆಯ ಕಾರ್ಯ ಆರಂಭವಾಗಿದ್ದು ಪಕ್ಷ ಬಿಟ್ಟು ಹೋಗದಂತೆ ನೋಡಿಕೊಳ್ಳಲು ತೆಲಂಗಾಣ ಬಿಜೆಪಿಯ ಕೆಲವರಿಗೆ ಟಾಸ್ಕ್ ನೀಡಲಾಗಿದೆ. ಆದರೆ ಇದೀಗ ಮತ್ತೆ ಮತ್ತೆ ಕೇಳಿ ಬರುವಂತೆ ಬಿಜೆಪಿಯಲ್ಲಿ ಕಟ್ಟರ್ ಹಿಂದೂ ನಾಯಕರಿಗೆ ಯಾವುದೇ ರೀತಿಯ ಬೆಲೆ ಇಲ್ಲ ಎಂಬುವುದು ಮತ್ತೆ ಸಾಬೀತಾಗಿದೆ.

ರಾಮಚಂದ್ರರಾವ್ ಅವರು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದು, ಬಿಜೆಪಿಯ ಮೆಂಬರ್ಶಿಪ್ ಡ್ರೈವ್ ನ ಮುಂದಾಳತ್ವ ವಹಿಸಿಕೊಂಡಿದ್ದರು. ಇವರು ಭಾರತೀಯ ಜನತಾ ಪಾರ್ಟಿಯ ಎಂಎಲ್ಸಿ ಕೂಡ ಆಗಿದ್ದಾರೆ. ಬಹಳಷ್ಟು ವರ್ಷಗಳ ರಾಜಕೀಯ ಅನುಭವ ಹೊಂದಿರುವ ಇವರು ತೆಲಂಗಾಣ ಬಿಜೆಪಿಗೆ ಹೊಸ ಆಯಾಮ ನೀಡಲಿದ್ದಾರೆ ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಇನ್ನೊಂದೆಡೆ ಟಿ ರಾಜಾವರ ಕಟ್ಟರ್ ಅಭಿಮಾನಿಗಳು ಪಕ್ಷದ ವಿರುದ್ಧ ಬಂಡಾಯದ ಕೂಗನ್ನು ಕೂಗಿದ್ದಾರೆ. ಏನಾಗುತ್ತದೆ ಎಂದು ಕಾದು ನೋಡಬೇಕು.



