Banking News: ಬ್ಯಾಂಕ್ ಅಲ್ಲಿ ಕಾಣಸಿಗುವ IFSC Code ಅಂದರೇನು? ಇದರ ಉದ್ದೇಶ ಏನು? ದೈನಂದಿನ ವ್ಯವಹಾರದಲ್ಲೂ ಈ ಕೋಡ್ ಉಪಯೋಗವಾಗುತ್ತದೆ.
ದೇಶದಲ್ಲಿ ಪ್ರತಿಯೊಬ್ಬನ ನಾಗರಿಕನ ಬಳಿ ತಮ್ಮದೇ ಆದ ಒಂದು ಬ್ಯಾಂಕ್ ಅಕೌಂಟ್ ಇದ್ದೆ ಇದೆ. ಇಂದಿನ ಸಮಯದಲ್ಲಿ ಬ್ಯಾಂಕಿಂಗ್ ವ್ಯವಹಾರ ಕೂಡ ಡಿಜಿಟಲೀಕರಣವಾಗಿದೆ. ಮೊದಲೆಲ್ಲ ಬ್ಯಾಂಕ್ ಖಾತೆ ಅಲ್ಲಿ ಎಷ್ಟು ಹಣ ಇದೆ ಎಂದು ತಿಳಿದುಕೊಳ್ಳುವುದರಿಂದ ಹಿಡಿದು ಬ್ಯಾಂಕ್ ಸ್ಟೇಟ್ಮೆಂಟ್ ಗು ಕೂಡ ಬ್ಯಾಂಕ್ ಶಾಖೆ ಗೆ ಹೋಗಬೇಕಿತ್ತು. ಆದರೆ ಇಂದು ಮನೆಯಲ್ಲಿ ಕೂತು ಈ ಎಲ್ಲ ಕೆಲಸ ಮಾಡಿ ಬಿಡಬಹುದು. ಇಂದಿನ ಈ ಪೋಸ್ಟ್ ಅಲ್ಲಿ ನಿಮಗೆ ಬ್ಯಾಂಕಿಗೆ ಸೇರಿದ ಇನ್ನೊಂದು ಮಾಹಿತಿ ಕೊಡಲಿದ್ದೇವೆ.
ನೀವು ಬ್ಯಾಂಕ್ ಪಾಸಬುಕ್ ತೆಗೆದು ನೋಡಿದರೆ ಅಲ್ಲಿ ಅಕೌಂಟ್ ನಂಬರ್ (account number) ಅಲ್ಲದೆ ಅನೇಕ ನಂಬರ್ ಗಳನ್ನೂ ನೀವು ನೋಡಬಹುದು. ಅದರಲ್ಲಿ ಇವತ್ತಿನ ಮಹಿತ್ಯ IFSC Code ಕೂಡ ಒಂದು. ಈ 11 ಅಂಕೆಗಳ IFSC ಕೋಡ್ ಎಂದರೇನು ಅನ್ನುವ ಸಂಶಯ ನಿಮಗೂ ಬಂದಿರಬಹುದು. ಅಕೌಂಟ್ ನಂಬರ್ ಇಂದ ಎಲ್ಲ ಕೆಲಸ ಆಗುತ್ತಿರುವಾಗ ಈ ifsc ಕೋಡ್ ನ ಮಹತ್ವವೇನು? ಇದು ನಮ್ಮ ನಿಮ್ಮ ಜೀವನದಲ್ಲಿ ಪ್ರಾಮುಖ್ಯತೆ ಹೊಂದಿದೆಯಾ? ಉತ್ತರ ಹೌದು. ನೀವು ನಿಮ್ಮ ಬ್ಯಾಂಕ್ ಇಂದ ಇನ್ನೊಬ್ಬರ ಖಾತೆ ಗೆ ಹಣ ವರ್ಗಾವಣೆ ಮಾಡುವುದಾದರೆ ಅಕೌಂಟ್ ನಂಬರ್ ಜೊತೆ IFSC ಕೋಡ್ ಕೂಡ ಬೇಕಾಗುತ್ತದೆ.
ಇದರ ಅರ್ಥ ಏನು?
ಮೊದಲು IFSC Code ಅರ್ಥ ಏನೆಂದು ತಿಳಿದುಕೊಳ್ಳಬೇಕು. Indian Finanacial System Code ಎನ್ನುವುದು ಇದರ ಫುಲ್ ಫಾರಂ. ಇದು 11 ನಂಬರ್ ಕೋಡ್ ಆಗಿದೆ. ಇದು ಉಪಯೋಗ ಬ್ಯಾಂಕಿನ ಪ್ರತಿಯೊಂದು ಬ್ರಾಂಚಿನ ಗುರುತಾಗಿರುತ್ತದೆ. ಈ ಕೋಡ್ ನ ಮೊದಲ 4 ಅಂಕೆಗಳು ಅಕ್ಷರದಲ್ಲಿರುತ್ತದೆ. ಈ ನಾಲ್ಕು ಅಕ್ಷರ ಬ್ಯಾಂಕಿನ ಹೆಸರನ್ನು ಸೂಚಿಸುವಂತಾಗಿರುತ್ತದೆ. ಹಾಗೇನೇ 5 ನೇ ಸಂಖ್ಯೆ 0(ಸೊನ್ನೆ) ಆಗಿರುತ್ತದೆ. ಇದು ಭವಿಷ್ಯದಲ್ಲಿ ಏನಾದರು ಬದಲಾವಣೆ ಮಾಡಬೇಕಾಗಿದ್ದರೆ ಅಂತ ರೆಸೆರ್ವ್ ಮಾಡಿ ಇಟ್ಟಿರುತ್ತಾರೆ. ಇನ್ನು ಕೊನೆಯ 6 ಸಂಖ್ಯೆಗಳು ಆ ಶಾಖೆಯ ಗುರುತಾಗಿರುತ್ತದೆ . ಇನ್ನು ನೆಟ್ ಬ್ಯಾಂಕಿಂಗ್ (net Banking) ಅಥವಾ ಮೊಬೈಲ್ ಬ್ಯಾಂಕಿಂಗಲ್ಲಿ (Mobile Banking) ಇನ್ನೊಬ್ಬರಿಗೆ ಹಣ ವರ್ಗಾವಣೆ ಆಗುವಾಗ ಈ ಕೋಡ್ ಹಾಕುವುದು ಕಡ್ಡಾಯವಾಗಿದೆ.