Interesting Facts: ಕ್ಯಾಲ್ಕುಲೇಟರ್ ನಲ್ಲಿ GT, MU, MRC ಅಂದರೆ ಏನು? ಬಹಳಷ್ಟು ಮಂದಿಗೆ ಇದರ ಬಳಕೆ ಹೇಗೆಂದೇ ಗೊತ್ತಿಲ್ಲ.

ಅಂಗಡಿಯಲ್ಲಿ ಕುಳಿತು ವ್ಯಾಪಾರ ಮಾಡೋ ಹಿರಿಯರಿಂದ ಹಿಡಿದು ಸಣ್ಣ ಪುಟ್ಟ ಗಣಿತದ ಕೆಲಸ ಮಾಡುವ ಹಾಗೇನೇ ದೊಡ್ಡ ದೊಡ್ಡ ಕಂಪನಿ ಗಳಲ್ಲಿ ಕೆಲಸ ಮಾಡುವವರು ಕೂಡ ಈ ಕ್ಯಾಲ್ಕುಲೇಟರ್ ಬಳಸುತ್ತಾರೆ. ಇಂದಿನ ಕಾಲದಲ್ಲಿ ಈ ಕಾಲ್ಕುಲೇಟರ್ ಸ್ಮಾರ್ಟ್ ಫೋನ್ ಗಳಲ್ಲಿ ಸುಲಭವಾಗಿ ಸಿಗುತ್ತದೆ. ಆದರೂ ಕೂಡ ಬೌತಿಕ ಮೂಲ ಕಾಲ್ಕುಲೇಟರ್ ಅನ್ನೇ ಈಗಲೂ ಬಹಳಷ್ಟು ಮಂದಿ ಬಳಸುತ್ತಾರೆ. ಆದರೆ ಇದರಲ್ಲಿ ಇರುವ ಕೆಲ ಬಟನ್ ಬಗ್ಗೆ ಅನೇಕರಿಗೆ ಗೊತ್ತೇ ಇರಲ್ಲ.

ಕಾಲ್ಕುಲೇಟರ್ ಬಹಳಷ್ಟು ಜನ ಬಳಸುತ್ತಾರೆ, ಆದರೆ ಎಲ್ಲರಿಗು ಇದರಲ್ಲಿರುವ ಎಲ್ಲ ಬಟನ್ ಗಳ ಅವಶ್ಯಕತೆ ಇರಲ್ಲ. ಅಂತಹ ಬಟನ್ ಗಳಲ್ಲಿ GT, M-, M+, ಹಾಗು MRC ಗಳು ಕೂಡ ಒಂದು. ೯೦% ರಷ್ಟು ಜನರಿಗೆ ಈ ಬಟನ್ ಬಗ್ಗೆ ಗೊತ್ತೇ ಇಲ್ಲ. ಅಂತವರಿಗೆ ನಾವು ಇಂದು ಇದರ ಉಪಯೋಗದ ಬಗ್ಗೆ ತಿಳಿಸಲಿದ್ದೇವೆ.

GT ಅಂದರೆ ಏನರ್ಥ? ಜಿಟಿ ಅಂದರೆ ಗ್ರಾಂಡ್ ಟೋಟಲ್ ಆಗಿದೆ. ಇದು ಒಂದೇ ಬಾರಿಗೆ ಎರಡು ಬೇರೆ ಬೇರೆ ಗಣಿತ ಕೆಲಸಗಳ ಟೋಟಲ್ ಮಾಡಿ ಕೊಡುತ್ತದೆ. ಉದಾಹರಣೆಗೆ ೫೩ ಹಾಗು ೭೫ ಅನ್ನು ಒಟ್ಟಿಗೆ ಕಾಲ್ಕುಲೇಟ್ ಮಾಡಬೇಕೆಂದಿದ್ದರೆ, ೫೩ ಒತ್ತಿ = ಬಟನ್ ಒತ್ತಿ ನಂತರ ೭೫ ಮಾಡಿ ಮತ್ತೊಮ್ಮೆ = ಬಟನ್ ಒತ್ತಿ. ಆಮೇಲೆ GT ಒತ್ತಿದರೆ ನಿಮಗೆ ಎರಡರ ಒಟ್ಟು ಮೊತ್ತ ಸಿಗುತ್ತದೆ.

MU ಅಂದರೆ ಏನು? MU ಅಂದರೆ ಮಾರ್ಕ್ ಅಪ್ ಎಂದರ್ಥ. ಇದನ್ನು ವೆಚ್ಚದ ಲಾಭದ ಬಗ್ಗೆ ತಿಳಿದುಕೊಳ್ಳಲು ಬಳಸಲಾಗುತ್ತದೆ. ಉದಾಹರಣೆಗೆ ನೀವು ೯೦೦ ರೂಪಾಯಿಯ ವಸ್ತು ಮಾರಬೇಕೆಂದಿದ್ದೀರಾ. ಅದರಲ್ಲಿ 100 ರೂಪಾಯಿಯ ಲಾಭ ಕೂಡ ಪಡೆಯಬೇಕೆಂದಿದ್ದೀರಾ. ಅಲ್ಲದೆ ಗ್ರಾಹಕರಿಗೂ ಕೂಡ 20 ವರ್ಷ ಸಾಲ ನೀಡಬೇಕೆಂದು ಕೊಂಡಿದ್ದೀರ. ಇದರ ನಿಜವಾದ ಮೊತ್ತವನ್ನು ಕಂಡು ಹಿಡಿಯಲು MU ಅನ್ನು ಬಳಸಲಾಗುತ್ತದೆ.

ಉದಾಹರಣೆಗೆ ನಿಮ್ಮ 900 ರೂಪಾಯಿಯ ವಸ್ತುವಿನ ಮೇಲೆ 100 ರೂಪಾಯಿ ಲಾಭ ಗಳಿಸಬೇಕೆಂದು ಕೊಂಡಿದ್ದರೆ, ಆ ವಸ್ತುವಿನ ಬೆಲೆ 1000 ಆಗಿತ್ತದೆ. ಅದಾದ ಮೇಲೆ 20 ರೂಪಾಯಿ ಡಿಸ್ಕೌಂಟ್ ಕೂಡ ನೀಡಬೇಕೆಂದು ಕೊಂಡಿರುತ್ತೀರ, ಅವಾಗ ಆ ವಸ್ತುವಿನ ಬೆಲೆ ಎಷ್ಟು ರೂಪಾಯಿ ಆಗುತ್ತದೆ ಎಂದು ಕಂಡು ಹಿಡಿಯಲು MU ಬಳಸುತ್ತಾರೆ. ಕಾಲ್ಕುಲೇಟರ್ ನಲ್ಲಿ 1000 ಒತ್ತಿ ನಂತರ MU ಬಟನ್ ಒತ್ತಬೇಕು. ಅದಾದ ನಂತರ 20 ಒತ್ತಿ % ಬಟನ್ ಒತ್ತಿದರೆ ರಿಸಲ್ಟ್ 1250 ಕಾಣಸಿಗುತ್ತದೆ. ಅಂದರೆ ನೀವು ಗ್ರಾಹಕರಿಗೆ ಆ ವಸ್ತುವನ್ನು 1250 ರುಪಾಯಿಗೆ ಮಾರಬೇಕಾಗುತ್ತದೆ ಎಂದರ್ಥ.

Comments (0)
Add Comment