ಆಧಾರ್ ಕಾರ್ಡ್ (UIDAI) ಒಂದು ಬಹು ಮುಖ್ಯ ದಾಖಲೆಗಳಲ್ಲಿ ಒಂದಾಗಿದೆ. ಕೆಲವು ಕೆಲಸಗಳಿಗೆ ಈ ಆಧಾರ ನೀಡುವುದು ಅಗತ್ಯವಾಗಿರುತ್ತದೆ. ಮಕ್ಕಳನ್ನು ಶಾಲೆಗೆ ಸೇರಿಸಿವುದು, ಕಾಲೇಜು ಸೇರ್ಪಡೆ ಅಲ್ಲದೇ ಸರಕಾರಿ ಸಂಬಂದಿಸಿದ ಕೆಲಸಗಳಿಗೆ ಈ ದಾಖಲೆ ನೀಡಬೇಕಾಗುತ್ತದೆ. ಇದನ್ನು ನವೀಕರಣ ಮಾಡುವುದು ಕೂಡ ಅಷ್ಟೇ ಮುಖ್ಯ. ನಿಮ್ಮ ಹೆಸರು ವಿಳಾಸ, ಜನ್ಮ ದಿನಾಂಕ ಇದೆಲ್ಲವನ್ನು ನವೀಕರಣ ಮಾಡಲು ಬಯಸಿದರೆ ಸರಕಾರ ಜೂನ್ 14 ರ ತನಕ ಉಚಿತವಾಗಿ ಮಾಡಲು ಅನುವು ಮಾಡಿ ಕೊಡುತ್ತಿದೆ.
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ಪ್ರಕಾರ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲು ಕೊನೆಯ ದಿನಾಂಕ 14 ಜೂನ್ 2025. ಇದಾದ ನಂತರ ನೀವು 50 ರಿಂದ 100 ರೂಪಾಯಿಗಳನ್ನು ಪಾವತಿ ಮಾಡಬೇಕಾಗುತ್ತದೆ. ಪಾವತಿ ನಂತರವಷ್ಟೇ ನವೀಕರಣ ಮಾಡಲು ಸಾಧ್ಯವಾಗುತ್ತದೆ.

ಪ್ರಕ್ರಿಯೆ ಹೇಗೆ?
ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಲು ಆನ್ಲೈನ್ ಪ್ರಕ್ರಿಯೆ ಅನುಸರಿಸಬಹುದು. ನೀವು ಇದಕ್ಕೆ ಆಧಾರ್ ಕೇಂದ್ರಗಳಿಗೆ ಗೆ ಹೋಗಬೇಕೆಂದಿಲ್ಲ. ಆನ್ಲೈನ್ ಮೂಲಕ ಮನೆಯಲ್ಲಿಯೇ ಕುಳಿತು ನವೀಕರಣ ಮಾಡಬಹುದಾಗಿದೆ. UIDAI ನ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಈ ಪ್ರಕ್ರಿಯೆ ಮಾಡಬಹುದು ಅಥವಾ My Aadhar ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಬಳಸಬಹುದು. ಈ ಅಪ್ಲಿಕೇಶನ್ ನಲ್ಲಿ ನೀವು ಆಧಾರ್ ಗೆ ನೀಡಲಾದ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ ಅದನ್ನು ನಮೂದಿಸಿದ ನಂತರ ಬಳಸಬಹುದು.