ಅಂದು ಮಾಡಿದ ಒಂದು ತಪ್ಪಿಂದ ಇಂದಿಗೂ ಪಶ್ಚಾತ್ತಾಪ ಪಡುತ್ತಿದ್ದಾರೆ ಬಿಲ್ ಗೇಟ್ಸ್. ಅಷ್ಟಕ್ಕೂ ಅವರು ಅಂದು ಮಾಡಿದ ತಪ್ಪೇನು ಗೊತ್ತೇ?

ಬಿಲ್ ಗೇಟ್ಸ್ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ವಿಶ್ವದಾದ್ಯಂತ ಹೆಸರುವಾಸಿಯಾಗಿರುವ ಮನುಷ್ಯ. ತನ್ನ ಕಂಪನಿ ಆದಂತಹ ಮೈಕ್ರೋಸಾಫ್ಟ್ ಅನ್ನು ಕಟ್ಟಿ ಬೆಳೆಸಿದ ವ್ಯಕ್ತಿ. ಹಲವಾರು ಡೊನೇಷನ್ ನೀಡುವ ಮೂಲಕ ಕಷ್ಟದವರಿಗೆ ನೆರವಾಗುವ ಮನುಷ್ಯ. ಅದೇ ಅಲ್ಲದೆ ಭಾರತವನ್ನು ವಿಶ್ವಗುರು ಸ್ಥಾನದಲ್ಲಿ ಮೊದಲಿಗೆ ಇಟ್ಟವರು ಇದೆ ಬಿಲ್ ಗೇಟ್ಸ್. ಮೋದಿಯ ಆರ್ಥಿಕತೆ ಹಾಗು ನಾಯಕತ್ವಕ್ಕೆ ಮೆಚ್ಚಿದವರಲ್ಲಿ ಬಿಲ್ ಗೇಟ್ಸ್ ಕೂಡ ಒಬ್ಬರು. ಇವರಿಗೂ ವರ್ಷಗಳ ಹಿಂದೆ ಮಾಡಿದ ತಪ್ಪಿಗೆ ಇಂದು ಕೂಡ ಪಶ್ಚಾತಾಪ ಪಡುತ್ತಿದ್ದಾರೆ. ಅದೇನು ಇಲ್ಲಿದೆ ಓದಿ.

ಈ ಸಾಫ್ಟ್ವೇರ್ ಕಂಪನಿ ಗಳಲ್ಲಿ ಪೈಪೋಟಿ ಇದ್ದೆ ಇರುತ್ತದೆ. ಫೇಸ್ಬುಕ್, ಗೂಗಲ್, ಮೈಕ್ರೋಸಾಫ್ಟ್, ಆಪಲ್ ನಂತಹ ದೊಡ್ಡ ದೊಡ್ಡ ಕಂಪನಿಗಳು ಇಂದು ಹೆಸರುವಾಸಿಯಾಗಲು ಕಾರಣ ಈ ಕಂಪನಿಗಳ ವಸ್ತುಗಳ ಕ್ವಾಲಿಟಿ. ಕೆಲವು ಸಾಫ್ಟ್ವೇರ್ ಒದಗಿಸುತ್ತದೆ ಅಂತಾದರೆ ಕೆಲವು ಸಾಮಾಜಿಕ ಜಾಲತಾಣದ ರೇಸ್ ನಲ್ಲಿ ಮೊದಲಿಗೆ ಇರುವಂತಹ ಕಂಪನಿಗಳು. ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಆಂಡ್ರಾಯ್ಡ್ ಅನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಅವಕಾಶ ಒಂದು ಸಮಯದಲ್ಲಿ ಇತ್ತು.

ಆದರೆ ಅದನ್ನು ಖರೀದಿ ಮಾಡದೇ ಬೇಡ ಎಂದು ಬಿಟ್ಟರು ಇಂದು ಗೂಗಲ್ ಆಂಡ್ರಾಯ್ಡ್ ಅನ್ನು ಹೊಂದಿದ್ದು ಮಾರುಕಟ್ಟೆಯ ಶೇಕಡಾ ೮೦% ಭಾಗ ಹೊಂದಿದೆ. ಇದು ಬಿಲ್ ಗೇಟ್ಸ್ ಗೆ ಸುಮಾರು ೪೦೦ ಶತಕೋಟಿ ಡಾಲರ್ ನಷ್ಟವಾಗಿದೆ ಎಂದು ಹೇಳಿದ್ದಾರೆ. ೨೦೦೫ ರಲ್ಲಿ ಗೂಗಲ್ ಕೇವಲ ೫೦ ಮಿಲಿಯನ್ ಡಾಲರ್ ಗೆ ಆಂಡ್ರಾಯ್ಡ್ ಅನ್ನು ಸ್ವಾದೀನ ಪಡಿಸಿಕೊಂಡಿತ್ತು. ಅಲ್ಲಿಂದ ೨೦೦೮ರಲ್ಲಿ ಆಂಡ್ರಾಯ್ಡ್ ಮೊಬೈಲ್ ಮಾರುಕಟ್ಟೆ ಗೆ ತನ್ನ ದಾಪುಕಾಲಿಟ್ಟಿತು. ೨೦೦೭ ರಲ್ಲಿ ಆಪಲ್ ನ ಐಫೋನ್ ಮಾರುಕಟ್ಟೆ ಬಂದಿತ್ತಾದರೂ ಇಂದು ಜಗತ್ತಿನ ೮೫% ಪಾಲು ಆಂಡ್ರಾಯ್ಡ್ ಮೊಬೈಲ್ ಹೊಂದಿದೆ. ಅಂದು ಮಾಡಿದ ಈ ತಪ್ಪಿನಿಂದಾಗಿ ಇಂದು ಆಂಡ್ರಾಯ್ಡ್ ಅಂದರೆ ಗೂಗಲ್ ಮೊಬೈಲ್ ದಿಗ್ಗಜನಾಗಿ ಹೊರಹೊಮ್ಮಿದೆ.

Comments (0)
Add Comment