ಅಗ್ಗದ ಹಾಗು ಸ್ಟೈಲಿಶ್ ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆಗೆ ಬಂದಿದೆ. ಕೇವಲ 7 ರುಪಾಯಿಗೆ ಓಡುತ್ತೆ 100 ಕಿಲೋ ಮೀಟರ್? Atom 1.0 ಎಲೆಕ್ಟ್ರಿಕ್ ಬೈಕ್.

ದೇಶದಲ್ಲಿ ಹೆಚ್ಚುತ್ತಿರುವ ಪೆಟ್ರೋಲ್ ಡೀಸೆಲ್ ಇಂದ ದೇಶದಲ್ಲಿ ಜನರಿಗೆ ತಲೆಬಿಸಿಯಾಗಿದೆ. ಇದು ದೇಶದ ಎಲ್ಲ ಕ್ಷೇತ್ರದ ಮೇಲು ಪರಿಣಾಮ ಬೀರುತ್ತದೆ. ಅದಕ್ಕೆ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಹವಾ ಜೋರಾಗಿದೆ. ಸರಕಾರ ಕೂಡ ತನ್ನ ಇತೀಚಿನ ಬಜೆಟ್ ಅಲ್ಲಿ ಎಲೆಕ್ಟ್ರಿಕ್ ವಾಹನಗಳ ಅಭಿವೃದಿಗೆ ಸಹಾಯಸ್ತ ನೀಡಿದೆ. ಅಲ್ಲದೆ ನಮ್ಮ ಹಿಂದಿನ ಪೋಸ್ಟ್ ಅಲ್ಲಿ ಯಾವ ರಾಜ್ಯಗಳು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಎಷ್ಟು ಸಬ್ಸಿಡಿ ನೀಡುತ್ತೇವೆ ಎಂದು ಕೂಡ ಹೇಳಿದ್ದೇವೆ.

ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ ಮಾರುಕಟ್ಟೆಗೆ ಮೇಡ್ ಇನ್ ಇಂಡಿಯಾ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಹೊಂದಿದೆ. ಅದರ ಹೆಸರು Atum ೧.೦ ಈ ಬೈಕ್ ನ ಬೆಲೆ ಇಂದು ೪೯,೯೯೯ ಇದೆ. ಜನ ಈ ಬೈಕ್ ಬಗ್ಗೆ ಅತಿ ಹೆಚ್ಚು ಉತ್ಸುಕರಾಗಿದ್ದಾರೆ. ಇದೊಂದು ಹೈದೆರಾಬಾದ್ ನ ಒಂದು ಸ್ಟಾರ್ಟ್ ಅಪ್ ಕಂಪನಿ ಇತ್ತೀಚಿಗೆ ಮಾರುಕಟ್ಟೆಗೆ ಈ ಬೈಕ್ ನ ಬಿಡುಗಡೆ ಮಾಡಿದೆ. ಈ ಕಂಪನಿ ಯಾ ಅಧಿಕೃತ ವೆಬ್ಸೈಟ್ ಅಲ್ಲಿ ಈ ಬೈಕ್ ಭಾರತ ದೇಶದಾದ್ಯಂತ ಸಿಗುತ್ತಿದೆ ಎಂದು ಹೇಳಿದೆ. ಅಂದರೆ ಈ ಬೈಕ್ ನ ನೀವು ಕೂಡ ಖರೀದಿಸಬಹುದಾಗಿದೆ.

ಈ ಬೈಕ್ ನಿರ್ಮಿಸಿದ ಕಂಪನಿ ಈ ಬೈಕ್ ಅಲ್ಲಿ ಪೋರ್ಟಬಲ್ ಲಿತಿಯಮ್ ಅಯಾನ್ ಬ್ಯಾಟರಿ ಅಳವಡಿಸಿದೆ. ಈ ಬ್ಯಾಟರಿ ಪೂರ್ತಿ ಚಾರ್ಜ್ ಆಗಲಿ ೪ ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಕಂಪನಿ ಪ್ರಕಾರ ಈ ಸಿಂಗಲ್ ಚಾರ್ಜ್ ಅಲ್ಲಿ ಬೈಕ್ ೧೦೦ ಕಿಲೋ ಮೀಟರ್ ಚಲಿಸುತ್ತದೆ ಎನ್ನುವುದು. ಕಂಪನಿ ಈ ಬೈಕ್ ಜೊತೆ ಬ್ಯಾಟರಿ ನೀಡುತ್ತಿದೆ. ಈ ಬ್ಯಾಟರಿ ಗೆ ೨ ವರ್ಷಗಳ ವಾರಂಟಿ ಕೂಡ ನೀಡುತ್ತಿದೆ. ಈ ಬೈಕ್ ಚಲಾಯಿಸಲು ನಿಮ್ಮ ಬಳಿ ಡ್ರೈವಿಂಗ್ ಲೈಸೆನ್ಸ್ ಇಲ್ಲದೆ ಇದ್ದರು ಕೂಡ ಪರವಾಗಿಲ್ಲ. ಈ ಬೈಕ್ ನ ವೇಗ ಕಡಿಮೆ ಇಡುವ ಪ್ರಯತ್ನ ಮಾಡಿದೆ ಕಂಪನಿ. ಈ ಬೈಕ್ ನ ಬ್ಯಾಟರಿ ಒಟ್ಟು ೬ ಕಿಲೋ ಗ್ರಾಂ ಇದ್ದರೆ, ಇದು ಫುಲ್ ಚಾರ್ಜ್ ಆಗಲು ಕೇವಲ ೧ ಯೂನಿಟ್ ಬಳಸಿಕೊಳ್ಳುತ್ತದೆ.

ಅಂದರೆ ನೀವು ಕೇವಲ ೪-೭ ರೂಪಾಯಿ ಖರ್ಚು ಮಾಡಿ ೧೦೦ ಕಿಲೋ ಮೀಟರ್ ವರೆಗೂ ಗಾಡಿ ಚಲಾಯಿಸಬಹುದು. ಅದೇ ಪೆಟ್ರೋಲ್ ಪ್ರತಿ ಲೀಟರ್ ಗೆ ೧೦೯-೧೧೦ ಇರುವಾಗ ಮಾಧ್ಯಮ ವರ್ಗದ ಜನ ಇದರ ಕಡೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಈ ಬೈಕ್ ಬೆಲೆ ex ಷೋರೂಮ್ ಬೆಲೆ ೪೯,೯೯೯ ಇದೆ ಅಲ್ಲದೆ RTO ಹಾಗು ಇನ್ಸೂರೆನ್ಸ್ ಸೇರುವಾಗ ೫೪ ಸಾವಿರದಿಂದ ೫೫ ಸಾವಿರದವರೆಗೂ ತಲುಪಬಹುದು. ಅಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿ ೫೦೦-೬೦೦ ರೂಪಾಯಿಗಳವರೆಗೆ ದರ ಬದಲಾವಣೆ ಇರಬಹುದು. ಬುಕ್ ಮಾಡಲು ಅಥವಾ ಇನ್ನು ಹೆಚ್ಚಿನ ಮಾಹಿತಿಗಾಗಿ https://atumobile.co/ ಈ ವೆಬೈಸೈಟ್ ಮೂಲಕ ಮಾಡಬಹುದು.

Comments (0)
Add Comment